ಸುಮಾರು 9 ಅಡಿ ಎತ್ತರ ಕಂಚಿನ ಪ್ರತಿಮೆಯನ್ನು ದುಷ್ಕರ್ಮಿಗಳು ವಿರೂಪಗೊಳಿಸಿರುವ ಘಟನೆ ಅತ್ಯಂತ ಖೇದಕರ, ಈ ಘಟನೆಯನ್ನು ರಾಯಭಾರ ಕಚೇರಿ ತೀವ್ರವಾಗಿ ಖಂಡಿಸುತ್ತದೆ.
1986ರ ಅಕ್ಟೋಬರ್ 2ರಂದು ಗಾಂಧೀಜಿಯವರ 117ನೇ ಹುಟ್ಟುಹಬ್ಬದ ಅಂಗವಾಗಿ ಗಾಂಧಿ ಅಂತಾರಾಷ್ಟ್ರೀಯ ಸ್ಮರಣಾ ಸಂಸ್ಥೆ ಈ ಪ್ರತಿಮೆಯನ್ನು ಸ್ಥಾಪಿಸಲು ನೆರವಾಗಿತ್ತು.
ಅಮೆರಿಕದ ನಾಗರಿಕ ಹಕ್ಕು ಹೋರಾಟಗಾರ ಬೆಯಾರ್ಡ್ ರಸ್ಟಿನ್ ಅವರು, ಗಾಂಧಿ ಜೀವನ ತತ್ವ ಇಂದಿಗೂ ಏಕೆ ಪ್ರಸ್ತುತ ಎಂದು ವಿವರಿಸಿದ್ದರು. 2001ರಲ್ಲಿ ಒಮ್ಮೆ ಸ್ಥಳಾಂತರಗೊಂಡಿದ್ದ ಪ್ರತಿಮೆಯನ್ನು 2002ರಲ್ಲಿ ಪುನರ್ ಸ್ಥಾಪಿಸಲಾಗಿತ್ತು.
ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಡೇವಿಸ್ ನಗರಕ್ಕೆ ಭಾರತ ಸರ್ಕಾರ ದೇಣಿಗೆ ನೀಡಿತ್ತು. ಗಾಂಧಿ ವಿರೋಧಿ ಮತ್ತು ಭಾರತ ವಿರೋಧಿ ಸಂಘಟನೆ ಗಳ ಪ್ರತಿಭಟನೆ ನಡುವೆ ನಾಲ್ಕು ವರ್ಷಗಳ ಹಿಂದೆ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು.
ಈ ಹಿಂದೆ ಕೂಡಾ ಅಮೆರಿಕದಲ್ಲಿ ಗಾಂಧೀಜಿ ಪ್ರತಿಮೆ ವಿರೂಪಗೊಳಿಸಿದ್ದ ಘಟನೆ ನಡೆದಿತ್ತು. ಉತ್ತರ ಕ್ಯಾಲಿಫೋರ್ನಿಯಾದ ಸಿಟಿ ಆಫ್ ಡೇವಿಸ್‌ನ ಸೆಂಟ್ರಲ್ ಪಾರ್ಕ್‌ನಲ್ಲಿದ್ದ 6 ಅಡಿ ಎತ್ತರ ಮತ್ತು 650 ಪೌಂಡ್ (294 ಕೆಜಿ) ತೂಕದ ಮಹಾತ್ಮ ಗಾಂಧಿ ಅವರ ಕಂಚಿನ ಪ್ರತಿಮೆಯನ್ನು ವಿರೂಪಗೊಳಿಸ ಲಾಗಿತ್ತು. ಪಾದದ ಭಾಗಗಳನ್ನು ಕತ್ತರಿಸಿ, ಅರ್ಧ ತಲೆಯನ್ನು ಕೆತ್ತಿ ವಿರೂಪಗೊಳಿಸಲಾಗಿತ್ತು. ಮುಖದ ಒಂದು ಭಾಗ ನಾಪತ್ತೆಯಾಗಿತ್ತು.