Sunday, 8th September 2024

ಪಾಕಿಸ್ತಾನ ಮಾಜಿ ನಾಯಕ ಇಂಜಮಾಮ್​’ಗೆ ಆಂಜಿಯೋಪ್ಲಾಸ್ಟ್​ ಸರ್ಜರಿ

ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್​ನ ಮಾಜಿ ನಾಯಕ ಇಂಜಮಾಮ್​​​ ಉಲ್​ ಹಕ್​ಗೆ ಹೃದಯಾಘಾತವಾಗಿದ್ದು ಆಂಜಿಯೋಪ್ಲಾಸ್ಟ್​ ಸರ್ಜರಿಗೆ ಒಳಗಾಗಿದ್ದಾರೆ.

ಸದ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ಮಾಹಿತಿ ನೀಡಿವೆ. ಕಳೆದ ಮೂರು ದಿನಗಳಿಂದ ಇಂಜ ಮಾಮ್​ ಎದೆ ನೋವಿನಿಂದ ಬಳಲುತ್ತಿದ್ದರು. ಪ್ರಾಥಮಿಕ ಪರೀಕ್ಷೆ ಗಳಲ್ಲಿ ಇಂಜಮಾಮ್​ಗೆ ಯಾವುದೇ ತೊಂದರೆ ಇದ್ದದ್ದು ಕಂಡು ಬಂದಿರಲಿಲ್ಲ. ಆದರೆ ಕಳೆದ ಸೋಮವಾರ ನಡೆಸಲಾದ ಪರೀಕ್ಷೆಯಲ್ಲಿ ಇಂಜಮಾಮ್​​ಗೆ ಹೃದಯಾಘಾತವಾಗಿದೆ ಎಂದು ತಿಳಿದುಬಂದಿದೆ.

ಇಂಜಮಾಮ್​ ಆರೋಗ್ಯ ಸದ್ಯ ಸುಧಾರಿಸಿದೆ. ಆದರೆ ಅವರನ್ನು ನಿಗಾದಲ್ಲಿ ಇಡಲಾಗಿದೆ. 51 ವರ್ಷದ ಇಂಜ ಮಾಮ್​​ ಆಡಿರುವ 375 ಪಂದ್ಯಗಳಲ್ಲಿ 11,701 ರನ್​ಗಳನ್ನು ಗಳಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯದಲ್ಲಿ ಅತೀ ಹೆಚ್ಚು ರನ್​ ಗಳಿಸಿದ ಪಾಕಿಸ್ತಾನದ ಕ್ರಿಕೆಟಿಗ ಎಂಬ ಕೀರ್ತಿಯನ್ನು ಹೊಂದಿದ್ದಾರೆ.

ಯೂನಿಸ್‌ ಖಾನ್‌ ಹಾಗೂ ಜಾವೆದ್‌ ಮಿಯಾಂದದ್‌ ಬಳಿಕ ಟೆಸ್ಟ್​ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಮೂರನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನೂ ಇಂಜಮಾಮ್‌ ಉಲ್‌ ಹಕ್‌(8829) ಹೊಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!