Friday, 18th October 2024

ಇಟಲಿ ಪ್ರಧಾನಿ ಮಾರಿಯೋ ಡ್ರಾಘಿ ರಾಜೀನಾಮೆ

ರೋಮ್: ಇಟಲಿಯ ಸರ್ಕಾರದ ಮುಖ್ಯಸ್ಥರಾಗಿ ನೇಮಕಗೊಂಡ ಒಂದೂವರೆ ವರ್ಷದ ನಂತರ, ಮಾರಿಯೋ ಡ್ರಾಘಿ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇಟಲಿ ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾಗೆ ರಾಜೀನಾಮೆ ಸಲ್ಲಿಸಿ ದರು.

ಮಾರಿಯೋ ದ್ರಾಘಿ ಅವರ ಒಕ್ಕೂಟ ಸರ್ಕಾರವು ಪತನಗೊಂಡ ನಂತರ, ದೇಶವು ರಾಜಕೀಯ ಪ್ರಕ್ಷುಬ್ಧತೆಗೆ ದೂಡಿದೆ ಮತ್ತು ಆರ್ಥಿಕತೆ ತೀರ ಕುಸಿದಿದೆ. ಬುಧವಾರ ರಾತ್ರಿ ವಿಶ್ವಾಸ ಮತ ಯಾಚನೆ ವೇಳೆ ಅವರದ್ದೇ ಸರ್ಕಾರದಲ್ಲಿನ ಮೂರು ಪಕ್ಷಗಳು ನಿರಾಕರಿಸಿದ್ದವು.

ರಾಜೀನಾಮೆ ಅಂಗೀಕರಿಸಿರುವ ಇಟಲಿ ಅಧ್ಯಕ್ಷ ಮುಂದಿನ ಚುನಾವಣೆಗಳ ತನಕ ಉಸ್ತುವಾರಿ ನಾಯಕರಾಗಿ ಉಳಿಯುವಂತೆ ಕೇಳಿ ಕೊಂಡಿದ್ದಾರೆ. ಸೆಪ್ಟೆಂಬರ್ ಅಥವಾ ಅಕ್ಟೋಬರ್‌ನಲ್ಲಿ ಆರಂಭಿಕ ಚುನಾವಣೆಗಳನ್ನು ಕರೆಯುತ್ತಾರೆ.

74 ವರ್ಷದ ದ್ರಾಘಿ ಇಟಲಿಯಲ್ಲಿ ಜನಪ್ರಿಯ ವ್ಯಕ್ತಿ. ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಮುಖ್ಯಸ್ಥರಾಗಿ ಯೂರೋಜೋನ್ ಬಿಕ್ಕಟ್ಟನ್ನು ನಿಭಾಯಿಸಿದ್ದಕ್ಕಾಗಿ ಅವರನ್ನು ಸೂಪರ್ ಮಾರಿಯೋ ಎಂದು ಕರೆಯಲಾಗುತ್ತಿತ್ತು.

ಸಾಂಕ್ರಾಮಿಕ ಮತ್ತು ಅನಾರೋಗ್ಯದ ಜೊತೆಗೆ ಆರ್ಥಿಕ ಪಥನದೊಂದಿಗೆ ಇಟಲಿ ಸೆಣಸಾಡುತ್ತಿರುವಾಗ 2021 ರಲ್ಲಿ ಮಾರಿಯೋ ಡ್ರಾಘಿ ಪ್ರಧಾನ ಮಂತ್ರಿ ಸ್ಥಾನಕ್ಕೆ ಏರಿದ್ದರು.