ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ryo Tatsuki: 2030ರಲ್ಲಿ ವೈರಸ್‌ನಿಂದ ಮತ್ತೆ ಕಂಟಕ... ಸಾವು, ನೋವು; ಹೊಸ ʼಬಾಬಾ ವಂಗಾʼ ಹೇಳಿದ ಭವಿಷ್ಯವಾಣಿ ಏನು?

2025 ರ ಕುರಿತು ಬಾಬಾ ವಾಂಗಾ ಕೆಲ ವಿಷಯಗಳ ಕುರಿತು ಊಹಿಸಿದ್ದರು. ಅದರಲ್ಲಿ ಕೆಲವು ನಿಜಾವಾಗಿದೆ. ಇದೀಗ ಹೊಸ ಬಾಬಾ ವಾಂಗಾ ಎಂದೇ ಕರೆಸಿಕೊಳ್ಳುವ ಜಪಾನ್‌ನ ಪ್ರಸಿದ್ಧ ಅತೀಂದ್ರಿಯ ತಜ್ಞರಾದ ರಿಯೋ ಟ್ಯಾಟ್ಸುಕಿ ( Ryo Tatsuki ) ಹೇಳಿರುವ ಮತ್ತೊಂದು ಸ್ಫೋಟಕ ಮಾಹಿತಿ ವೈರಲ್‌ ಆಗಿದೆ.

2030 ರಲ್ಲಿ ವೈರಸ್‌ನಿಂದ ಮತ್ತೆ ಕಂಟಕ, ಸಾವು, ನೋವು; ಏನಿದು ಭವಿಷ್ಯವಾಣಿ?

Profile Vishakha Bhat Jun 6, 2025 7:18 AM

ಟೊಕಿಯೋ: ಬಲ್ಗೇರಿಯಾದ ಭವಿಷ್ಯಗಾರ್ತಿಯಾದ ಬಾಬಾ ವಂಗಾ ( Baba Vanga ) ಅವರು ತಮ್ಮ ಜೀವಿವಾವಧಿಯಲ್ಲಿ (1911 - 1996) ಹೇಳಿದ ಅನೇಕ ವಿಚಾರಗಳು ಈಗಲೂ ನಿಜವಾಗುತ್ತಿವೆ. 2025 ರ ಕುರಿತು ಬಾಬಾ ವಾಂಗಾ ಕೆಲ ವಿಷಯಗಳ ಕುರಿತು ಊಹಿಸಿದ್ದರು. ಅದರಲ್ಲಿ ಕೆಲವು ನಿಜಾವಾಗಿದೆ. ಇದೀಗ ಹೊಸ ಬಾಬಾ ವಾಂಗಾ ಎಂದೇ ಕರೆಸಿಕೊಳ್ಳುವ ಜಪಾನ್‌ನ ಪ್ರಸಿದ್ಧ ಅತೀಂದ್ರಿಯ ತಜ್ಞರಾದ ರಿಯೋ ಟ್ಯಾಟ್ಸುಕಿ ( Ryo Tatsuki ) ಹೇಳಿರುವ ಮತ್ತೊಂದು ಸ್ಫೋಟಕ ಮಾಹಿತಿ ವೈರಲ್‌ ಆಗಿದೆ. 2030 ರ ಕುರಿತು ಅವರು ಭವಿಷ್ಯ ನುಡಿದಿದ್ದಾರೆ. ಅವರ ಹೇಳಿಕೆಯಲ್ಲಿ ಮಾರಕ ವೈರಸ್ ಬಗ್ಗೆ ಎಚ್ಚರಿಸಿದ್ದಾರೆ.

ಈ ವೈರಸ್, COVID-19 ಸಾಂಕ್ರಾಮಿಕ ರೋಗವನ್ನು ನೆನಪಿಸುತ್ತದೆ ಮತ್ತು ಜಾಗತಿಕ ಆರೋಗ್ಯಕ್ಕೆ ಗಮನಾರ್ಹ ಬೆದರಿಕೆಯನ್ನು ಒಡ್ಡಬಹುದು ಎಂದು ಅವರು ಹೇಳಿಕೊಂಡಿದ್ದಾರೆ. 'ಹೊಸ ಬಾಬಾ ವಂಗಾ' ಎಂದು ಜನಪ್ರಿಯವಾಗಿ ಕರೆಯಲ್ಪಡುವ ತತ್ಸುಕಿ, ಈ ​​ಹಿಂದೆ ಫ್ರೆಡ್ಡಿ ಮರ್ಕ್ಯುರಿ ಮತ್ತು ರಾಜಕುಮಾರಿ ಡಯಾನಾ ಅವರ ಸಾವುಗಳು, 2011 ರ ಕೋಬ್ ಭೂಕಂಪ ಮತ್ತು COVID-19 ಸಾಂಕ್ರಾಮಿಕ ರೋಗದ ಕುರಿತು ಭವಿಷ್ಯವನ್ನು ನುಡಿದಿದ್ದರು.

ಅವರು ತಮ್ಮ ' ದಿ ಫ್ಯೂಚರ್ ಆಸ್ ಐ ಸೀ ಇಟ್ ' (1999) ಪುಸ್ತಕದಲ್ಲಿ , ಏಪ್ರಿಲ್ 2020 ರಲ್ಲಿ ಅಪರಿಚಿತ ವೈರಸ್ ಒಂದು ಜಗತ್ತನ್ನು ಕಾಡಲಿದೆ ಎಂದು ಬರೆದಿದ್ದರು. ಇದೀಗ ಮುಂದುವರಿದು 2030 ರಲ್ಲಿ ಇನ್ನೂ ಹೆಚ್ಚು ವಿನಾಶಕಾರಿ ವೈರಸ್ ಬರಲಿದೆ. ಇದರಿಂದಾಗಿ ಸಾವಿರಾರು ಜೀವ ಹಾನಿಯಾಗಲಿದೆ ಎಂದು ಹೇಳಿದ್ದಾರೆ. ಭಾರತದಲ್ಲಿ ಮತ್ತೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಟಾಟ್ಸುಕಿಯವರ ಈ ಭವಿಷ್ಯವಾಣಿಗಳು ಗಮನಾರ್ಹ ಕಳವಳವನ್ನು ಹುಟ್ಟುಹಾಕಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಕರೆ ನೀಡಲಾಗಿದೆ. ತಮ್ಮ ವೈರಲ್ ಮುನ್ಸೂಚನೆಯ ಜೊತೆಗೆ, ಜುಲೈ 2025 ರಲ್ಲಿ ಜಪಾನ್‌ನಲ್ಲಿ ಸಂಭವಿಸುವ ದೊಡ್ಡ ಭೂಕಂಪದ ಬಗ್ಗೆಯೂ ಟಾಟ್ಸುಕಿ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ: Corona Virus: ರಾಜ್ಯದಲ್ಲಿ ಕೊರೊನಾ ವೈರಸ್‌ಗೆ 3ನೇ ಬಲಿ, ಕೋವಿಡ್‌ ಟೆಸ್ಟ್‌ ಕಡ್ಡಾಯ

ಇವರನ್ನು ಬಾಬಾ ವಾಂಗಾಗೆ ಹೋಲಿಸಲಾಗುತ್ತದೆ. 12 ನೇ ವಯಸ್ಸಿನಲ್ಲಿ ಬಿರುಗಾಳಿಯಲ್ಲಿ ದೃಷ್ಟಿ ಕಳೆದುಕೊಂಡ ಬಾಬಾ ವಾಂಗಾ ಜಾಗತಿಕ ಭವಿಷ್ಯವಾಣಿಯನ್ನು ನುಡಿಯುತ್ತಾರೆ. ಇಲ್ಲಿಯವರೆಗೆ ಅವರು ಹೇಳಿದ ಸುಮಾರು 85% ಘಟನೆಗಳು ನಿಜವಾಗಿದೆ.