Thursday, 19th September 2024

ಕಾದಂಬರಿಕಾರ ಜಾನ್‌ ಲೆ ಕ್ಯಾರೆ ನಿಧನ

ಲಂಡನ್‌: ಬೇಹುಗಾರಿಕೆಯಂತಹ ಥ್ರಿಲ್ಲರ್ ಆಧಾರಿತ ಕಾದಂಬರಿಗಳನ್ನು ಬರೆದಿದ್ದ ಪ್ರಸಿದ್ಧ ಕಾದಂಬರಿಕಾರ ಮತ್ತು ಗೂಢ ಚರ್ಯೆಯ ಮಾಸ್ಟರ್‌ ಎಂದೇ ಪ್ರಸಿದ್ಧರಾಗಿದ್ದ ಜಾನ್‌ ಲೆ ಕ್ಯಾರೆ (89) ನಿಧನರಾದರು.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನೈರುತ್ಯ ಇಂಗ್ಲೆಂಡ್‌ನ ಕೊರ್ನಾವಾಲ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಸಾಹಿತ್ಯ ಸಂಸ್ಥೆ ಕರ್ಟಿಸ್‌ ಬ್ರೌನ್‌ ತಿಳಿಸಿದೆ. ನ್ಯುಮೋನಿಯಾದಿಂದ ಕೊನೆಯುಸಿರೆಳೆದಿದ್ದಾರೆ.

‘ದಿ ಸ್ಪೈ ಹೂ ಕಮ್ ಇನ್ ದ ಕೋಲ್ಡ್,’ ‘ಟಿಂಕರ್ ಟೈಲರ್ ಸೋಲ್ಜರ್ ಸ್ಪೈ’ ಮತ್ತು ‘ದಿ ಹಾನರಬಲ್‌ ಸ್ಕೂಲ್‌ಬಾಯ್‌’ ಮುಂತಾದ ಮಹತ್ತರ ಕೃತಿಗಳನ್ನು ರಚಿಸಿದ್ದಾರೆ.