Thursday, 19th September 2024

ಬಾಂಬ್‌ ದಾಳಿ: ಕಾಬೂಲ್‌ ಡೆಪ್ಯೂಟಿ ಗವರ್ನರ್‌ ಸಾವು

ಕಾಬೂಲ್‌: ಅಫ್ಗಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಮಂಗಳವಾರ ನಡೆದ ಬಾಂಬ್‌ ದಾಳಿಯಲ್ಲಿ ಡೆಪ್ಯೂಟಿ ಗವರ್ನರ್‌ ಸಾವಿಗೀಡಾಗಿದ್ದಾರೆ. ಘಟನೆ ವೇಳೆ ಡೆಪ್ಯೂಟಿ ಗವರ್ನರ್‌  ಕಾರಿನಲ್ಲಿ ತೆರಳುತ್ತಿದ್ದರು ಎಂದು ಹೇಳಲಾಗಿದೆ.

ಭದ್ರತಾ ಸಿಬ್ಬಂದಿಯೊಂದಿಗೆ ತೆರಳುತ್ತಿದ್ದ ಕಾಬೂಲ್‌ನ ಡೆಪ್ಯೂಟಿ ಗವರ್ನರ್‌ ಮಹಬೂಬುಲ್ಲಾ ಮೊಹೇಬಿ ಮೃತಪಟ್ಟು, ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.

ಮೊಹೇಬಿ ಅವರ ಕಾರಿಗೆ ಮ್ಯಾಗ್ನೆಟಿಕ್‌ ಬಾಂಬ್‌ (ಸ್ಟಿಕಿ ಬಾಂಬ್‌) ಅಂಟಿಸಲಾಗಿತ್ತು ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ಸರ್ಕಾರಿ ಪ್ರಾಸಿಕ್ಯೂಟರ್‌ ಒಬ್ಬರು ಕರ್ತವ್ಯಕ್ಕೆ ತೆರಳುತ್ತಿದ್ದಾಗ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.