Saturday, 14th December 2024

ಖಾರ ಚಿಪ್ಸ್ ತಿಂದು ಬಾಲಕನಿಗೆ ಹೃದಯ ಸ್ತಂಭನ

ನ್ಯೂಯಾರ್ಕ್: ಖಾರವಾದ ಟೋರ್ಟಿಲ್ಲಾ ಚಿಪ್ ತಿನ್ನುವ ಚಾಲೆಂಜ್‌ ನಲ್ಲಿ ಭಾಗವಹಿಸಿದ ಅಮೆರಿಕದ 14ರ ಹರೆಯದ ಹುಡುಗನೊಬ್ಬ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ.

ಮಸಾಚೂಸೆಟ್ಸ್‌ನ 14 ವರ್ಷದ ಹ್ಯಾರಿಸ್ ವೊಲೊಬಾಹ್ “ಒನ್ ಚಿಪ್ ಚಾಲೆಂಜ್” ನಲ್ಲಿ ಭಾಗವಹಿಸಿದ ನಂತರ ನಿಧನರಾದರು. ಕ್ಯಾರೊಲಿನಾ ರೀಪರ್ ಮತ್ತು ನಾಗಾ ವೈಪರ್ ಪೆಪ್ಪರ್‌ ಗಳೊಂದಿಗೆ ಉತ್ಪಾದಿಸಿದ ಚಿಪ್ ಇದಾಗಿತ್ತು.

ಕ್ಯಾಪ್ಸೈಸಿನ್ ಎಂಬ ಮೆಣಸಿನಕಾಯಿಯ ಸಾರವನ್ನು ದೊಡ್ಡ ಪ್ರಮಾಣದಲ್ಲಿ ಸೇವಿಸಿದ ನಂತರ ಹ್ಯಾರಿಸ್ ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯ ಮುಖ್ಯ ವೈದ್ಯಕೀಯ ಪರೀಕ್ಷಕರು ನಿರ್ಧರಿಸಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ, ಈ ಚಾಲೆಂಜ್ ನಲ್ಲಿ ಭಾಗವಹಿಸಿದ ನಂತರ ಮೂವರು ಯುವಕರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು ಅದೇ ಕಾರಣ ಕ್ಕಾಗಿ ಮಿನ್ನೇಸೋಟದಲ್ಲಿ ಏಳು ಮಂದಿ ಅಸ್ವಸ್ಥರಾಗಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.