Thursday, 19th September 2024

ಪಾಕಿಸ್ತಾನ ನೂತನ ಪ್ರಧಾನಿಯಾಗಿ ಶೆಹಬಾಜ್ ಶರೀಫ್ ಆಯ್ಕೆ

#Pakistan PM

ಇಸ್ಲಾಮಾಬಾದ್: ಪಾಕಿಸ್ತಾನದ 23ನೇ ಪ್ರಧಾನಿಯಾಗಿ ಶೆಹಬಾಜ್ ಶರೀಫ್ ಆಯ್ಕೆಯಾಗಿದ್ದಾರೆ.

ಶರೀಫ್ ಅವರು ಆಗಸ್ಟ್ 2018 ರಿಂದ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಯಲ್ಲಿ ವಿಪಕ್ಷ ನಾಯಕರಾಗಿದ್ದಾರೆ. ಈ ಹಿಂದೆ, ಮೂರು ಬಾರಿ ಪಂಜಾಬ್ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.

ಪಾಕಿಸ್ತಾನ ಮುಸ್ಲಿಂ ಲೀಗ್-ಎನ್ ಅಧ್ಯಕ್ಷರಾಗಿದ್ದ ಶರೀಫ್ ಅವರು 1988 ರಲ್ಲಿ ಪಂಜಾಬ್ ಪ್ರಾಂತೀಯ ಅಸೆಂಬ್ಲಿಗೆ ಮತ್ತು 1990 ರಲ್ಲಿ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದರು. ಅವರು 1997ರಲ್ಲಿ ಪಂಜಾಬ್ʼನ ಮುಖ್ಯಮಂತ್ರಿಯಾದರು.

1999ರಲ್ಲಿ ಮಿಲಿಟರಿ ಕ್ಷಿಪ್ರಕ್ರಾಂತಿಯು ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ, ಶೆಹ್ಬಾಜ್ ತನ್ನ ಕುಟುಂಬದೊಂದಿಗೆ ಸೌದಿ ಅರೇಬಿ ಯಾದಲ್ಲಿ ಸ್ವಯಂ-ಗಡೀಪಾರು ಮಾಡಿದ ವರ್ಷಗಳನ್ನು ಕಳೆದರು. ಅವರು 2007ರಲ್ಲಿ ಪಾಕಿಸ್ತಾನ್ʼಗೆ ಮರಳಿದರು.

ಪಾಕಿಸ್ತಾನದ ಹೊಸ ಪ್ರಧಾನಿ ಆಯ್ಕೆಗೆ ಮುಂಚಿತವಾಗಿ, ಮಾಜಿ ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದರು.