Sunday, 8th September 2024

ಇಂಡಿಯಾ ಅಮೇರಿಕಾ ಟುಡೆ ನ್ಯೂಸ್‌ವೈರ್‌ನ ಸಂಪಾದಕ ತೇಜಿಂದರ್ ಸಿಂಗ್ ನಿಧನ

ವಾಷಿಂಗ್ಟನ್: ಶ್ವೇತಭವನದ ಹಿರಿಯ ವರದಿಗಾರ, ಇಂಡಿಯಾ ಅಮೇರಿಕಾ ಟುಡೆ ನ್ಯೂಸ್‌ವೈರ್‌ನ ಸ್ಥಾಪಕ ಮತ್ತು ಸಂಪಾದಕ ತೇಜಿಂದರ್ ಸಿಂಗ್ ಯುಎಸ್‌ನಲ್ಲಿ ನಿಧನ ಹೊಂದಿದ್ದಾರೆ.

ವಾಷಿಂಗ್ಟನ್ ಡಿ.ಸಿ ಮೂಲದ ಸ್ವತಂತ್ರ ಮಾಧ್ಯಮ ಸಂಸ್ಥೆ ಇಂಡಿಯಾ ಅಮೇರಿಕಾ ಟುಡೆ ಅನ್ನು ಸಿಂಗ್ ಸ್ಥಾಪಿಸಿದ್ದರು.

“ಇಂಡಿಯಾ ಅಮೇರಿಕಾ ಟುಡೆ ಸಂಸ್ಥಾಪಕ ಮತ್ತು ಸಂಪಾದಕ ತೇಜಿಂದರ್ ಸಿಂಗ್ ನಿಧನವನ್ನು ಘೋಷಿಸಲು ಅಪಾರ ದುಃಖ ವಾಗುತ್ತಿದೆ. ಅವರು 2012 ರಲ್ಲಿ ಐಎಟಿಯನ್ನು ಪ್ರಾರಂಭಿಸಿದರು, ಮತ್ತು ಅವರು ಪ್ರಾರಂಭಿಸಿದ ಕೆಲಸವನ್ನು ನಾವು ಮುಂದು ವರಿಸುತ್ತೇವೆ. ” ಎಂದು ಮಾಧ್ಯಮ ತನ್ನ ಅಧಿಕೃತ ಟ್ವಿಟ್ಟರ್ ನಲ್ಲಿ ತಿಳಿಸಿದೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಎಫ್ ಕಿರ್ಬಿ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ದ್ದಾರೆ. ಇಂಡಿಯಾ ಅಮೇರಿಕಾ ಟುಡೇ ಸ್ಥಾಪಕ ಮತ್ತು ಸಂಪಾದಕ ಅವರೆಂದು ನಿಮಗೆಲ್ಲಾ ತಿಳಿದಿದೆ. ಅವರ ಕುಟುಂಬಕ್ಕೆ ನಮ್ಮ ಸಹಾನುಭೂತಿ ಇದೆ.” ಅವರು ಹೇಳಿದರು.

2011 ರಿಂದ ಪೆಂಟಗನ್ ವರದಿಗಾರರಾಗಿದ್ದರು ಮತ್ತು ನಾನು ಅವರೊಂದಿಗೆ ಈ ವೇದಿಕೆಯಿಂದ ವ್ಯವಹರಿಸಿದ್ದಾರೆ. ನಾನು ಸ್ಟೇಟ್ ಡಿಪಾರ್ಟ್ ಮೆಂಟ್ ನಲ್ಲಿದ್ದಾಗ ಅವರೊಂದಿಗೆ ವ್ಯವಹರಿಸಿದ್ದೇನೆ. “ಅವರು ನಿಜವಾದ ಸಂಭಾವಿತ ವ್ಯಕ್ತಿ, ಒಳ್ಳೆಯ ವರದಿಗಾರ, ಕಠಿಣ ಪ್ರಶ್ನೆಗಳನ್ನಿಟ್ಟು ಒಳ್ಳೆಯ ವಿಷಯಗಳನ್ನು ಬರೆದಿದ್ದಾರೆ.”

 

Leave a Reply

Your email address will not be published. Required fields are marked *

error: Content is protected !!