Monday, 16th September 2024

ಕಾಬೂಲ್: ವಿಮಾನದ ಚಕ್ರ ಹಿಡಿದು ನೇತಾಡುತ್ತಿದ್ದವರು ಕೆಳಗೆ ಬಿದ್ದು ಸಾವು

ಕಾಬೂಲ್: ತಾಲಿಬಾನ್ ಉಗ್ರರು ತಮ್ಮ ಹಿಡಿತ ಸಾಧಿಸಿದ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಜನರು ಭೀತಿಗೊಳಗಾಗಿ ದೇಶದಿಂದ ಪಲಾಯನಗೈಯಲು ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಜಮಾಯಿಸಿದ್ದಾರೆ. ಈ ಮಧ್ಯೆ ಕಾಬೂಲ್’ನಿಂದ ಹೊರಟಿದ್ದ ವಿಮಾನದ ಚಕ್ರವನ್ನು ಹಿಡಿದು ನೇತಾಡುತ್ತಿದ್ದ ಇಬ್ಬರು ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ.

ಕಾಬೂಲ್ ನಿಂದ ಹೊರಟಿದ್ದ ವಿಮಾನದ ಚಕ್ರ ಹಿಡಿದು ಜೋತಾಡುತ್ತಿದ್ದು, ವಿಮಾನ ಟೇಕ್ ಆಫ್ ಆದ ಸ್ವಲ್ಪ ಸಮಯದಲ್ಲಿಯೇ ಇಬ್ಬರೂ ಕೆಳಕ್ಕೆ ಬೀಳುತ್ತಿರುವ ಭಯಾನಕ ದೃಶ್ಯ ಸೆರೆಯಾಗಿದೆ. ಊಹಿಸಲು ಸಾಧ್ಯವಿಲ್ಲದ ಸನ್ನಿವೇಶ ಇದಾಗಿದ್ದು, ಇಬ್ಬರೂ ವಿಮಾನದಿಂದ ಕೆಳಕ್ಕೆ ಬೀಳುತ್ತಿರುವ ದೃಶ್ಯ ಕಂಡು ಬಂದಿದೆ.

ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದ ನಂತರ ಸಾವಿರಾರು ಮಂದಿ ಹಮೀದ್ ಕರ್ಜೈ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೌಡಾ ಯಿಸಿದ್ದು, ವಿಮಾನ ಏರಲು ಜನರು ನೂಕುನುಗ್ಗಲು, ಗುಂಪುಗೂಡಿದ್ದರು. ಈ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿರುವುದಾಗಿ ವರದಿಯಾಗಿದೆ.

ತಾಲಿಬಾನ್ ಉಗ್ರರ ಭೀತಿಯಿಂದಾಗಿ ಸಾವಿರಾರು ಮಂದಿ ಅಫ್ಘಾನ್ ನಿಂದ ಪಲಾಯನ ಮಾಡಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು.

Leave a Reply

Your email address will not be published. Required fields are marked *