ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Namma Metro: ನಮ್ಮ ಮೆಟ್ರೋ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ

ನಮ್ಮ ಮೆಟ್ರೋ (Namma Metro) ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಪ್ರಕಟಣೆ ನೀಡಿದ್ದು, ಮೆಟ್ರೋ ಆವರಣದಲ್ಲಿ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ನಿಯಮ ಪಾಲನೆಯ ಮಹತ್ವವನ್ನು ಒತ್ತಿ ಹೇಳಿದೆ.

ನಮ್ಮ ಮೆಟ್ರೋ ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ May 4, 2025 2:26 PM

ಬೆಂಗಳೂರು: ಬೆಂಗಳೂರಿನ (Bengaluru news) ನಮ್ಮ ಮೆಟ್ರೋದ (Namma Metro) ಆವರಣದಲ್ಲಿ ಉಗುಳಿದ ಪ್ರಯಾಣಿಕನಿಗೆ ದಂಡ (Fine) ವಿಧಿಸಿ ಬಿಎಂಆರ್‌ಸಿಎಲ್ (BMRCL) ಆದೇಶ ಹೊರಡಿಸಿದೆ. ಕನಕಪುರ ರಸ್ತೆಯ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಆವರಣದಲ್ಲಿ ಉಗುಳಿದ ಪ್ರಯಾಣಿಕರಿಗೆ, ಮೆಟ್ರೋ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ. ಈ ಬಗ್ಗೆ ಬಿಎಂಆರ್‌ಸಿಎಲ್ ಪ್ರಕಟಣೆ ನೀಡಿದ್ದು, ಮೆಟ್ರೋ ಆವರಣದಲ್ಲಿ ಸ್ವಚ್ಛತೆ ಹಾಗೂ ಸಾರ್ವಜನಿಕ ಆರೋಗ್ಯ ನಿಯಮ ಪಾಲನೆಯ ಮಹತ್ವವನ್ನು ಒತ್ತಿ ಹೇಳಿದೆ.

"ಮೇ 2 2025ರ ಸಂಜೆ ಸುಮಾರು 6:30ಕ್ಕೆ, ಗ್ರೀನ್ ಲೈನ್‌ನ ಕನಕಪುರ ರಸ್ತೆಯಲ್ಲಿರುವ ದೊಡ್ಡಕಲಸಂದ್ರ ಮೆಟ್ರೋ ನಿಲ್ದಾಣದ ಪ್ಲಾಟ್‌ಫಾರ್ಮ್ 01 ರ ಲಿಫ್ಟ್ ಬಳಿಯಲ್ಲಿ ಪಾನ್ ಮಸಾಲಾ ಉಗುಳುತ್ತಿದ್ದ ಪ್ರಯಾಣಿಕನನ್ನು ಪತ್ತೆ ಹಚ್ಚಿ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿದರು. ಮೆಟ್ರೋ ಆವರಣದಲ್ಲಿ ಉಗುಳುವುದು ಮತ್ತು ಕಸದಂಚುಗಳನ್ನು ಎಸೆಯುವುದರಿಂದ ಪರಿಸರ ಹಾಳಾಗುವುದಲ್ಲದೆ, ಇತರ ಪ್ರಯಾಣಿಕರ ಆರೋಗ್ಯಕ್ಕೂ ಅಪಾಯವನ್ನು ಉಂಟುಮಾಡುತ್ತದೆ. ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಸ್ವಚ್ಛ, ಆರೋಗ್ಯಕರ ಮತ್ತು ಸುರಕ್ಷಿತ ಸಾರ್ವಜನಿಕ ಸಾರಿಗೆಯ ವ್ಯವಸ್ಥೆಗಾಗಿ ಕಟಿಬದ್ಧವಾಗಿದೆ. ಸ್ವಚ್ಛತೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಯಾಣಿಕರು ಸಹಕರಿಸಿ, ಇಂತಹ ಘಟನೆಗಳು ಸಂಭವಿಸಿದರೆ ತಕ್ಷಣವೇ ಮೆಟ್ರೋ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಬಿಎಂಆರ್‌ಸಿಎಲ್ ವಿನಂತಿಸಿಕೊಳ್ಳುತ್ತದೆ" ಎಂದು ಬಿಎಂಆರ್‌ಸಿಎಲ್‌ ಪ್ರಕಟಣೆ ತಿಳಿಸಿದೆ.

ಕೆಲವೇ ದಿನಗಳ ಮೊದಲು, ಮೆಟ್ರೋದ ಒಳಗೆ ಊಟ ಮಾಡಿದ್ದುದಕ್ಕಾಗಿ ಒಬ್ಬರು ಮಹಿಳೆಗೆ ದಂಡ ವಿಧಿಸಿದ್ದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಮಾದಾವರ ಮೆಟ್ರೋ ನಿಲ್ದಾಣದಿಂದ ಮಾಗಡಿ ರಸ್ತೆ ಮೆಟ್ರೋ ನಿಲ್ದಾಣದವರೆಗೆ ಪ್ರಯಾಣಿಸಿದ್ದ ಮಹಿಳೆ ಮೆಟ್ರೋ ಬೋಗಿಯ ಒಳಗೆ ಆಹಾರ ಸೇವಿಸಿದ್ದರು. ಬಿಎಂಆರ್‌ಸಿಎಲ್‌ ಅವರಿಗೆ 500 ರೂಪಾಯಿ ದಂಡ ವಿಧಿಸಿತ್ತು.

ಇದನ್ನೂ ಓದಿ: Viral Video: ಮೆಟ್ರೋದೊಳಗೆ ಊಟ ಮಾಡಿದ ಮಹಿಳೆಗೆ ಬಿತ್ತು ಭಾರೀ ದಂಡ; ಏನಿದು ಘಟನೆ?