LIC: ಪಹಲ್ಗಾಮ್ ದಾಳಿ: ಮೃತರ ಕುಟುಂಬಸ್ಥರ ನೆರವಿಗೆ ಎಲ್‌ಐಸಿ
ಪಹಲ್ಗಾಮ್ ಭೀಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗಾಗಿ ಲೈಫ್ ಇನ್ಸೂರೆನ್ಸ್ ಪಾಲಿಸಿ ವಿನಾಯಿತಿ ಪ್ರಕಟಿಸಿದೆ. ಪಹಲ್ಗಾಮ್ ಘಟನೆಯಿಂದ ತೀವ್ರ ದುಃಖವಾಗಿದೆ. ಬಾಧಿತರನ್ನು ಬೆಂಬಲಿಸಲು ಹಾಗೂ ಆರ್ಥಿಕ ಸಹಾಯ ಒದಗಿಸಲು ಎಲ್‌ಐಸಿ ಬದ್ಧವಾಗಿದೆ. ಕ್ರೈಮ್ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕಾರ್ಯ ನಿರ್ವಹಿಸಲಾಗು ವುದು ಎಂದು ಕಂಪನಿ ಹೇಳಿದೆ


ಬೆಂಗಳೂರು: ಪಹಲ್ಗಾಮ್ ಭೀಕರ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳಿಗಾಗಿ ಲೈಫ್ ಇನ್ಸೂರೆನ್ಸ್ ಪಾಲಿಸಿ ವಿನಾಯಿತಿ ಪ್ರಕಟಿಸಿದೆ. ಪಹಲ್ಗಾಮ್ ಘಟನೆಯಿಂದ ತೀವ್ರ ದುಃಖವಾಗಿದೆ. ಬಾಧಿತರನ್ನು ಬೆಂಬಲಿಸಲು ಹಾಗೂ ಆರ್ಥಿಕ ಸಹಾಯ ಒದಗಿಸಲು ಎಲ್‌ಐಸಿ ಬದ್ಧವಾಗಿದೆ. ಕ್ರೈಮ್ ಹಾಗೂ ಇನ್ನಿತರ ವಿಷಯಗಳಿಗೆ ಸಂಬಂಧಿಸಿದಂತೆ ತ್ವರಿತವಾಗಿ ಕಾರ್ಯ ನಿರ್ವಹಿಸಲಾಗು ವುದು ಎಂದು ಕಂಪನಿ ಹೇಳಿದೆ. ಮರಣ ಪ್ರಮಾಣಪತ್ರದ ಬದಲಾಗಿ, ಸರ್ಕಾರಿ ದಾಖಲೆಗಳಲ್ಲಿ ಇರುವ ಯಾವುದೇ ಸಾಕ್ಷಿ, ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನೀಡಲಾದ ಪರಿಹಾರದ ಡಾಕ್ಯು ಮೆಂಟ್ಸ್‌ನ್ನು ಕೂಡ ಪುರಾವೆಯಾಗಿ ಎಲ್‌ಐಸಿ ಪರಿಗಣಿಸಲಿದೆ ಎಂದು ಸಿಇಒ ಸಿದ್ದಾರ್ಥ್ ಮೋಹಂತಿ ಹೇಳಿದ್ದಾರೆ. ಪರಿಹಾರ ಧನ ಹಕ್ಕುದಾರರಿಗೆ ತಲುಪಿದೆಯೋ ಇಲ್ಲವೋ ಎನ್ನುವ ಬಗ್ಗೆಯೂ ಗಮನ ಹರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ; Grater Bangalore: ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್ ಸಿಗ್ನಲ್
ಹೆಚ್ಚಿನ ಸಹಾಯಕ್ಕಾಗಿ ಹಕ್ಕುದಾರರು ಹತ್ತಿರದ ಎಲ್‌ಐಸಿ ಶಾಖೆಗೆ ತೆರಳಬಹುದು. ಕಾಲ್ ಸೆಂಟರ್ - 022 68276827 ಗೆ ಕರೆ ಮಾಡಬಹುದು ಹಾಗೇ ಇ-ಮೇಲ್ – ed_cc@licindia.com www.licindia.in ಕೂಡ ಮಾಡಬಹುದಾಗಿದೆ