ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯೆಮೆನ್‌ ಮೂಲದ ಮಹಿಳೆಗೆ ಯಶಸ್ವಿ ಬೈಲಾಟರಲ್‌ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್‌ ಆಸ್ಪತ್ರೆ

ಯೆಮನ್‌ ದೇಶದ 63 ವರ್ಷದ ಜಮ್ಜಾಮ್ ಎಂಬ ಮಹಿಳೆ ಕಳೆದ ಐದು ವರ್ಷಗಳಿಂದ ವಯೋ ಸಹಜ ಮೊಣಕಾಲು ನೋವಿನಿಂದ ಬಳಲುತ್ತಿದ್ದರು, ಕ್ರಮೇಣ ನಿಲ್ಲಲು, ನಡೆಯಲು ಸಹ ಸಾಧ್ಯ ವಾಗದ ಸ್ಥಿತಿಗೆ ತಲುಪಿದ್ದರು. ಅವರದ್ದೇ ದೇಶದ ಆಸ್ಪತ್ರೆಗಳಿಗೆ ತೋರಿಸಿದ್ದರೂ ಪ್ರಯೋಜನವಾಗ ಲಿಲ್ಲ. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ಆಗಮಿಸಿದರು. ಇವರ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಇವರಿಗೆ ಬೈಲಾ ಟರಲ್‌ ಮೊಣಕಾಲು ಅಸ್ಥಿಸಂಧಿವಾತ ಇರುವುದು ಪತ್ತೆಯಾಯಿತು

ಬೈಲಾಟರಲ್‌ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ನಡೆಸಿದ ಫೋರ್ಟಿಸ್‌ ಆಸ್ಪತ್ರೆ

Profile Ashok Nayak Apr 25, 2025 7:47 PM

ವೆಲಿಸ್ ರೊಬೊಟಿಕ್ ತಂತ್ರಜ್ಞಾನವನ್ನು ಹೊಂದಿದ ಏಕೈಕ ಆಸ್ಪತ್ರೆ, ಕೇವಲ ನಾಲ್ಕು ತಿಂಗಳಲ್ಲಿ 150 ಕ್ಕೂ ಹೆಚ್ಚು ರೋಗಿಗಳಿಗೆ ಯಶಸ್ವಿ ಚಿಕಿತ್ಸೆ ನೀಡಿದೆ ~

ಬೆಂಗಳೂರು: ವಿಶ್ವದಲ್ಲೇ ಅತ್ಯಾಧುನಿಕ ವೈದ್ಯಕೀಯ ನವೀನ ತಂತ್ರಜ್ಞಾನವಾದ “ವೆಲಿಸ್‌ ರೊಬೋಟ್‌” ಬಳಸಿಕೊಂಡು ಯೆಮೆನ್‌ ದೇಶದ 63 ವರ್ಷದ ಮಹಿಳೆಗೆ ಯಶಸ್ವಿಯಾಗಿ ಬೈಲಾ ಟರಲ್‌ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಫೋರ್ಟಿಸ್‌ ಆಸ್ಪತ್ರೆ ವೈದ್ಯರು ನಡೆಸಿದ್ದು, ದೇಶದಲ್ಲೇ “ವೆಲಿಸ್‌ ರೊಬೋಟ್‌” ತಂತ್ರಜ್ಞಾನ ಬಳಸುತ್ತಿರುವ ಏಕೈಕ ಆಸ್ಪತ್ರೆಯೂ ಆಗಿದೆ. ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಫೋರ್ಟಿಸ್‌ ಆಸ್ಪತ್ರೆಯ ಆರ್ಥೋಪೆಡಿಕ್ಸ್ ಪ್ರಧಾನ ನಿರ್ದೇಶಕ ರಾದ ಡಾ. ನಾರಾಯಣ್‌ ಹುಲ್ಸೆ, ಇಂದು ಸಾಕಷ್ಟು ಜನರು ಅದರಲ್ಲೂ ವಯಸ್ಸಾದವರು ಮೊಣ ಕಾಲು ಹಾಗೂ ಕೀಲು ನೋವಿಗೆ ತುತ್ತಾಗುತ್ತಾರೆ. ತೆರೆದ ಶಸ್ತ್ರಚಿಕಿತ್ಸೆಗೆ ಹೆದರಿ ಯಾರೂ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮುಂದಾಗುವುದಿಲ್ಲ. ಆದರೆ, ಫೋರ್ಟಿಸ್‌ ಆಸ್ಪತ್ರೆಯಲ್ಲಿ ಕೀಲು ಬದಲು ಶಸ್ತ್ರಚಿಕಿತ್ಸೆಗೆ ಕೇವಲ ರೊಬೋಟ್‌ ಬಳಕೆ ಅಷ್ಟೇ ಅಲ್ಲದೆ, ಅತ್ಯಾಧುನಿಕ ವೆಲಿಸ್‌ ರೊಬೋಟ್‌ ಬಳಸಲಾಗುತ್ತಿದ್ದು, ಅತ್ಯಂತ ನಿಖರ ಹಾಗೂ ಸ್ಪಷ್ಟತೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ ಎಂದರು.

ಇದನ್ನೂ ಓದಿ: Grater Bangalore: ಗ್ರೇಟರ್‌ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಗ್ರೀನ್‌ ಸಿಗ್ನಲ್‌

ಯೆಮನ್‌ ದೇಶದ 63 ವರ್ಷದ ಜಮ್ಜಾಮ್ ಎಂಬ ಮಹಿಳೆ ಕಳೆದ ಐದು ವರ್ಷಗಳಿಂದ ವಯೋ ಸಹಜ ಮೊಣಕಾಲು ನೋವಿನಿಂದ ಬಳಲುತ್ತಿದ್ದರು, ಕ್ರಮೇಣ ನಿಲ್ಲಲು, ನಡೆಯಲು ಸಹ ಸಾಧ್ಯ ವಾಗದ ಸ್ಥಿತಿಗೆ ತಲುಪಿದ್ದರು. ಅವರದ್ದೇ ದೇಶದ ಆಸ್ಪತ್ರೆಗಳಿಗೆ ತೋರಿಸಿದ್ದರೂ ಪ್ರಯೋಜನವಾಗ ಲಿಲ್ಲ. ಬಳಿಕ ಅವರು ಫೋರ್ಟಿಸ್‌ ಆಸ್ಪತ್ರೆಗೆ ಆಗಮಿಸಿದರು. ಇವರ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಇವರಿಗೆ ಬೈಲಾಟರಲ್‌ ಮೊಣಕಾಲು ಅಸ್ಥಿಸಂಧಿವಾತ ಇರುವುದು ಪತ್ತೆಯಾಯಿತು. ರೊಬೋಟ್-ನೆರವಿನ ಬೈಲಾಟರಲ್‌ ಒಟ್ಟು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಪಡೆಯಲು ಶಿಫಾರಸು ಮಾಡಲಾಯಿತು. ಶಸ್ತ್ರಚಿಕಿತ್ಸೆಯ ನಂತರ ಅವರು ನಿಲ್ಲಲು ಮತ್ತು ಬೆಂಬಲದೊಂದಿಗೆ ನಡೆಯಲು ಸಾಧ್ಯವಾಯಿತು. ಹಲವು ವರ್ಷಗಳಿಂದ ನಡೆಯಲು ಸಾಧ್ಯವಾಗದ ಸ್ಥಿತಿಯಲ್ಲಿ ಇದ್ದವರಿಗೆ ಶಸ್ತ್ರಚಿಕಿತ್ಸೆ ಬಳಿಕ ಕೂಡಲೇ ನಡೆಯುವುದು ಅವರ ಜೀನವದ ಅತೀ ಸಂತಸದ ಕ್ಷಣವಾಗಿತ್ತು ಎಂದು ವಿವರಿಸಿದರು.

ಫೋರ್ಟಿಸ್ ಆಸ್ಪತ್ರೆಯಲ್ಲಿ ಕೀಲು ಮತ್ತು ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆಗೆ ವೆಲಿಸ್ ರೋಬೋಟ್ ನೆರವನ್ನು ಪಡೆಯಲು ಪ್ರಾರಂಭಿಸಲಾಗಿನಿಂದ 150 ಕ್ಕೂ ಹೆಚ್ಚು ಸರ್ಜರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದೇವೆ. ಸಾಮಾನ್ಯ ರೋಬೋಟ್-ನೆರವಿನ ವ್ಯವಸ್ಥೆಯಿಂದ ಈಗಾಗಲೇ 2000 ಕ್ಕಿಂತ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಿದ್ದು, ರೋಗಿಗಳು ಕಡಿಮೆ ನೋವು, ವೇಗವಾಗಿ ಚೇತರಿಸಿಕೊಳ್ಳುವುದು ನಾವು ಗಮನಿಸಿದ್ದೇವೆ. ರೊಬೋಟ್‌ನ ನಿಖರತೆಗಾಗಿ ಸಾಕಷ್ಟು ಜನರು ಈ ಶಸ್ತ್ರಚಿಕಿತ್ಸೆಗೆ ಆಸಕ್ತಿ ತೋರುತ್ತಿದ್ದಾರೆ ಎಂದು ಹೇಳಿದರು.