ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: 23ನೇ ವರ್ಷದ ಮೇಳದಲ್ಲಿ 68 ವಿದ್ಯಾರ್ಥಿಗಳಿಗೆ ಉದ್ಯೋಗ ಭಾಗ್ಯದ ಕೊಡುಗೆ

ಬೆಂಗಳೂ ರಿನ ಪ್ರತಿಷ್ಟಿತ ಕಾಲೇಜು ಕ್ಯಾಂಪಸ್‌ಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ಬಿಬಿಎಂ ವಿದ್ಯಾರ್ಥಿ ಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ದೊರಕಿಸಿಕೊಟ್ಟ ಹೆಮ್ಮೆ ನಮ್ಮ ಸಂಸ್ಥೆಗಿದೆ. ಶಿಕ್ಷಣದ ಜೆತೆಗೆ ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಮುಖ್ಯ.ಇಂದಿನ ಉದ್ಯೋಗ ಮೇಳದಲ್ಲಿ 100 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರೂ ಉದ್ಯೋಗ ಪಡೆದಿದ್ದು ಕೇವಲ 68 ವಿದ್ಯಾರ್ಥಿಗಳು ಮಾತ್ರ.

ವಿಷ್ಣುಪ್ರಿಯ ಕಾಲೇಜಿನಲ್ಲಿ ಉದ್ಯೋಗ ಮೇಳ : 10 ಕಂಪನಿಗಳು ಭಾಗಿ

ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ವಿಷ್ಣುಪ್ರಿಯ ಕಾಲೇಜಿನಲ್ಲಿ ನಡೆದ ೨೩ನೇ ವರ್ಷದ ಬೃಹತ್ ಉದ್ಯೋಗ ಮೇಳದಲ್ಲಿ ೧೦ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿ ಅಂತಿಮ ಪದವಿ ವ್ಯಾಸಾಮಗ ಮಾಡುತ್ತಿರುವ ೬೮ ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿವೆ.

Profile Ashok Nayak May 22, 2025 3:09 PM

ಚಿಕ್ಕಬಳ್ಳಾಪುರ : ನಗರದ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವ ವಿಷ್ಣುಪ್ರಿಯ ಕಾಲೇಜಿ ನಲ್ಲಿ ನಡೆದ 23ನೇ ವರ್ಷದ ಬೃಹತ್ ಉದ್ಯೋಗ ಮೇಳದಲ್ಲಿ 10ಕ್ಕೂ ಹೆಚ್ಚು ಕಂಪನಿಗಳು ಭಾಗಿ ಯಾಗಿ ಅಂತಿಮ ಪದವಿ ವ್ಯಾಸಾಮಗ ಮಾಡುತ್ತಿರುವ 68 ವಿದ್ಯಾರ್ಥಿಗಳಿಗೆ ಉದ್ಯೋಗ ನೀಡಿವೆ. ನಗರ ಹೊರವಲಯ ಜಡಲತಿಮ್ಮನಹಳ್ಳಿ ಗ್ರಾಮದ ಸಮೀಪವಿರುವ ವಿಷ್ಣುಪ್ರಿಯ ವಾಣಿಜ್ಯ ಕಾಲೇಜಿನಲ್ಲಿ ನಡೆದ ೨೩ನೇ ವರ್ಷದ ಉದ್ಯೋಗ ಮೇಳದಲ್ಲಿ ಮುತ್ತೂಟ್ ಪೈನಾನ್ಸ್ ಕೆ12, ಹೆಚ್‌ಡಿ ಎಫ್‌ಸಿ, ಫಸ್ಟ್ ಸೋರ್ಸ್, ನೋಬ್ರೋಕರ್, ಅಪ್‌ಗ್ರೇಡ್ ಫೈನಾನ್ಸ್, ಗ್ಲೋಬಲ್ ಎಲೆಕ್ಟ್ರಾನಿಕ್ಸ್, ಪಾರ್ಟ್ ಮ್ಯಾನ್ಯುಪ್ಯಾಕ್ಚರ್ ಇತ್ಯಾದಿ ಕಂಪನಿಗಳಲ್ಲಿ ಅಂತಿಮ ಬಿಬಿಎ, ಬಿಕಾಂ, ಎಂಕಾಂ ವಿದ್ಯಾರ್ಥಿಗಳು ಉದ್ಯೋಗ ಪಡೆಯುವಲ್ಲಿ ಸಫಲರಾದರು.

ಇದನ್ನೂ ಓದಿ: Chikkaballapur News: 15ನೇ ವಾರ್ಷಿಕೋತ್ಸವ: ಶ್ರೀ ವರಸಿದ್ದಿ ವಿನಾಯಕನಿಗೆ ಬೆಳ್ಳಿ ರಥೋತ್ಸವ

ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ರಾಮಚಂದ್ರರೆಡ್ಡಿ ಬೆಂಗಳೂ ರಿನ ಪ್ರತಿಷ್ಟಿತ ಕಾಲೇಜು ಕ್ಯಾಂಪಸ್‌ಗಳಿಗೆ ಸೀಮಿತವಾಗಿದ್ದ ಕಾಲದಲ್ಲಿ ಬಿಬಿಎಂ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸೆಲೆಕ್ಷನ್ ಮೂಲಕ ಉದ್ಯೋಗ ದೊರಕಿಸಿಕೊಟ್ಟ ಹೆಮ್ಮೆ ನಮ್ಮ ಸಂಸ್ಥೆಗಿದೆ.ಶಿಕ್ಷಣದ ಜೆತೆಗೆ ಉದ್ಯೋಗಕ್ಕೆ ಸಂಬಂಧಿಸಿದ ಕೌಶಲ್ಯವನ್ನು ಬೆಳೆಸಿಕೊಳ್ಳುವುದು ಮುಖ್ಯ.ಇಂದಿನ ಉದ್ಯೋಗ ಮೇಳದಲ್ಲಿ 100 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರೂ ಉದ್ಯೋಗ ಪಡೆದಿದ್ದು ಕೇವಲ 68 ವಿದ್ಯಾರ್ಥಿಗಳು ಮಾತ್ರ.ಅಂದರೆ ಆಸಕ್ತಿ ಪರಿಶ್ರಮ, ನಿರಂತರ ಓದು ಆದರ್ಶ ವಿದ್ಯಾರ್ಥಿಗಳ ಲಕ್ಷಣವಾಗಿದೆ. ನಮ್ಮ ಸಂಸ್ಥೆಯಲ್ಲಿ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಕಲ್ಪಿಸಲು ನಾವು ಹೆಚ್ಚಿನ ಒತ್ತನ್ನು ನೀಡಿದ್ದೇವೆ ಎಂದರು.

ಅAತಿಮ ಪದವಿ ಓದುವಾಗಲೇ ಉದ್ಯೋಗ ಗಿಟ್ಟಿಸಿಕೊಂಡ 68 ವಿದ್ಯಾರ್ಥಿಗಳ ಸಾಧನೆಯನ್ನು ಕೊಂಡಾಡಿದ ವಿಷ್ಣುಪ್ರಿಯ ಕಾಲೇಜಿನ ಪ್ರಾಂಶುಪಾಲ ನಟರಾಜ್,ಆಡಳಿತ ಮಂಡಳಿ, ಉಪನ್ಯಾಸಕ ವರ್ಗ,ಅಭಿನಂದನೆ ಸಲ್ಲಿಸಿದ್ದಾರೆ.