Chikkaballapur News: ಮೂರು ದಿನಗಳ ಕಾರ್ಯಾಗಾರ ಹಾಗೂ ಇತರ ಸುದ್ದಿಗಳು
ಸೈಬರ್ ಸೆಕ್ಯೂರಿಟಿ ಅಂಡ್ ಇಂಟರ್‌ನೆಟ್ ಸೇಫ್ಟಿ ಬಗ್ಗೆ ಇತ್ತೀಚಿನ ದಿನ ಗಳಲ್ಲಿ ನಡೆಯುತ್ತಿರುವ ಆನ್ ಲೈನ್ ವಂಚನೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾ ಗ್ರತಾ ಕ್ರಮಗಳು ಮತ್ತು ಅಂತ ರ್ಜಾಲ ಸುರಕ್ಷತೆಯ ಉಪಯೋಗದ ಬಗ್ಗೆ ವಿವಿಧ ನುರಿತ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸ ಲಾಗಿದೆ
Source : Chikkaballapur Reporter
ಚಿಕ್ಕಬಳ್ಳಾಪುರ: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆ ಯಾಗಿರುವ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಸೈಬರ್ ಸೆಕ್ಯೂರಿಟಿ ಅಂಡ್ ಇಂಟರ್‌ನೆಟ್ ಸೇಫ್ಟಿ ವಿಷಯದ ಮೇಲೆ ಫೆಬ್ರವರಿ 5 ರಿಂದ 7ರ ವರೆಗೆ ಮೂರು ದಿನಗಳ ಕಾರ್ಯಾ ಗಾರವನ್ನು ಅಕಾಡೆಮಿಯ ಕಚೇರಿಯಲ್ಲಿ ಆಯೋಜಿಸಲಾಗುತ್ತಿದೆ.
ಈ ಕಾರ್ಯಾಗಾರದಲ್ಲಿ ಸೈಬರ್ ಸೆಕ್ಯೂರಿಟಿ ಅಂಡ್ ಇಂಟರ್‌ನೆಟ್ ಸೇಫ್ಟಿ ಬಗ್ಗೆ ಇತ್ತೀಚಿನ ದಿನ ಗಳಲ್ಲಿ ನಡೆಯುತ್ತಿರುವ ಆನ್ ಲೈನ್ ವಂಚನೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾ ಗ್ರತಾ ಕ್ರಮಗಳು ಮತ್ತು ಅಂತರ್ಜಾಲ ಸುರಕ್ಷತೆಯ ಉಪಯೋಗದ ಬಗ್ಗೆ ವಿವಿಧ ನುರಿತ ತಜ್ಞರಿಂದ ಉಪನ್ಯಾಸಗಳನ್ನು ಏರ್ಪಡಿಸಲಾಗಿದೆ. ಈ ಕಾರ್ಯಾಗಾರದಲ್ಲಿ ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿ ಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು ಭಾಗವಹಿಸುತ್ತಿದ್ದು, ಈ ಕಾರ್ಯಾಗಾರದಲ್ಲಿ ಭಾಗವಹಿಸಲು ರೂ.2000 ಗಳ ನೊಂದಣಿ ಶುಲ್ಕವನ್ನು ನಿಗದಿಪಡಿಸಲಾಗಿದೆ ಆಸಕ್ತರು ಜನವರಿ 31ರೊಳಗೆ ಮೂಲಕ ನೋಂದಾಯಿಸಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವಿ.ಕೆ.ಶ್ರೀನಿವಾಸು ಮೊ:೯೬೨೦೭೬೭೮೧೯ ಮತ್ತು ದೂ. ೦೮೦-೨೯೭೨೧೫೫೦ ಇವರನ್ನು ಸಂಪರ್ಕಿಸಬಹುದೆAದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ.ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ
ಚಿಕ್ಕಬಳ್ಳಾಪುರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಪರಿಶಿಷ್ಟ ಜಾತಿ ಉಪ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ ಯುವಕ, ಯುವತಿಯರಿಗೆ ಅನುಷ್ಟಾನಗೊಳಿಸಲಿರುವ ಜಿಮ್ ತರಬೇತಿ ಶಿಬಿರ ಮತ್ತು ನಿರೂಪಣಾ ಮತ್ತು ವಾರ್ತಾ ವಾಚಕ ತರಬೇತಿ ಶಿಬಿರಕ್ಕೆ ಜಿಲ್ಲೆಯ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯ ಆಸಕ್ತಿಯುಳ್ಳ ಅಭ್ಯರ್ಥಿಗಳು ಜನವರಿ 22ರ ಒಳಗಾಗಿ ಜಿಲ್ಲಾ ಕಚೇರಿಯಲ್ಲಿ ಅರ್ಜಿ ನಮೂನೆಯನ್ನು ಪಡೆದು ಜನವರಿ 23 ರೊಳಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾ ಕಚೇರಿಯಲ್ಲಿ ಸಲ್ಲಿಸಲು ಕೋರಿದೆ ಹಾಗೂ ಕೊನೆಯ ದಿನಾಂಕದ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲಾ ಕಚೇರಿ ಗೆ ಭೇಟಿ ನೀಡುವಂತೆ ಅಥವಾ ದೂರವಾಣಿ ಸಂಖ್ಯೆ: ೦೮೧೫೬-೨೭೦೦೫೪ ನ್ನು ಸಂಪರ್ಕಿಸ ಬಹುದೆಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.
ತರಬೇತಿ ಶಿಬಿರಗಳ ವಿವರ: ಜಿಮ್ ತರಬೇತಿ ಶಿಬಿರ, ೧೫ ದಿನಗಳು (೨೭.೦೧.೨೦೨೫ ರಿಂದ ೧೦.೦೨. ೨೦೨೫ ರವರೆಗೆ) ವಿದ್ಯಾರ್ಹತೆ: ದ್ವಿತೀಯ ಪಿ.ಯು.ಸಿ (ಪಾಸ್/ಫೇಲ್) ವಯೋಮಿತಿ: ೧೮ ವರ್ಷ ಗಳಿಂದ ೪೦ ವರ್ಷದೊಳಗೆ ಸ್ಥಳ: ಶ್ರೀ ಕಂಠೀರವ ಕ್ರೀಡಾಂಗಣ, ಕಸ್ತೂರಬಾರಸ್ತೆ, ಬೆಂಗಳೂರು.
ನಿರೂಪಣಾ ಮತ್ತು ವಾರ್ತಾ ವಾಚಕ ತರಬೇತಿ ಶಿಬಿರ, ೦೮ ದಿನಗಳು (೧೧.೦೨.೨೦೨೫ ರಿಂದ ೧೮.೦೨.೨೦೨೫ ರವರೆಗೆ) ದ್ವಿತೀಯ ಪಿ.ಯು.ಸಿ ವಯೋಮಿತಿ: ೧೮ ವರ್ಷಗಳಿಂದ ೪೦ ವರ್ಷದೊಳಗೆ ಸ್ಥಳ: ಯವನಿಕ ಸಭಾಂಗಣ ಬೆಂಗಳೂರು.