Australian Open: 50ನೇ ಗ್ರ್ಯಾನ್‌ಸ್ಲಾಮ್ ಸೆಮೀಸ್‌ಗೇರಿದ ಸರ್ಬಿಯಾದ ಜೋಕೋ
Australian Open: ಜೋಕೊ ಶುಕ್ರವಾರ ನಡೆಯುವ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.2, ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ಸೆಣಸಲಿದ್ದಾರೆ.
ಮೆಲ್ಬರ್ನ್: ಸರ್ಬಿಯಾದ ನೋವಾಕ್ ಜೋಕೋವಿಕ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ಆಸ್ಟ್ರೇಲಿಯನ್ ಓಪನ್‌ನಲ್ಲಿ 12ನೇ, ಒಟ್ಟಾರೆ ಗ್ರ್ಯಾನ್ ಸ್ಲಾಂನಲ್ಲಿ 50ನೇ ಸೆಮಿಫೈನಲ್ ಪ್ರವೇಶಿಸಿದ ಸಾಧನೆಗೈದರು. ಗೆಲುವಿನೊಂದಿಗೆ ಅವರ ಐತಿಹಾಸಿಕ 25ನೇ ಗ್ರ್ಯಾನ್ ಸ್ಲಾಂ ಪ್ರಶಸ್ತಿ ಗೆಲ್ಲುವ ಆಸೆ ಕೂಡ ಜೀವಂತವಾಗಿದೆ.
ಮಂಗಳವಾರ ನಡೆದಿದ್ದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೋಕೊ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ವಿರುದ್ಧ ನಾಲ್ಕು ಸೆಟ್‌ಗಳ ಹೋರಾಟದಲ್ಲಿ 4-6, 6-4, 6-3, 6-4 ಸೆಟ್‌ಗಳಿಂದ ಗೆದ್ದು ಬೀಗಿದರು. ಜೋಕೊ ಶುಕ್ರವಾರ ನಡೆಯುವ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.2, ಜರ್ಮನಿಯ ಅಲೆಕ್ಸಾಂಡರ್ ಜ್ವರೇವ್ ವಿರುದ್ಧ ಸೆಣಸಲಿದ್ದಾರೆ. ಜ್ವರೇವ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ 12ನೇ ಶ್ರೇಯಾಂಕದ ಟಾಮಿ ಪೌಲ್ ವಿರುದ್ಧ ನಾಲ್ಕು ಸೆಟ್‌ಗಳ ಕಠಿನ ಹೋರಾಟದಲ್ಲಿ 7-6 (7-1), 7-6 (7-0), 2-6, 6-1 ಅಂತರದ ಪ್ರಯಾಸದ ಗೆಲುವು ಸಾಧಿಸಿದ್ದರು.
ಮಹಿಳಾ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ 11ನೇ ಶ್ರೇಯಾಂಕದ ಪೌಲಾ ಬಡೋಸಾ ಅವರು 3ನೇ ಶ್ರೇಯಾಂಕದ, ಅಮೆರಿಕದ ಸ್ಟಾರ್ ಆಟಗಾರ್ತಿ ಕೊಕೊ ಗಾಫ್ಕೊಕೊ ಗಾಫ್ ಅವರನ್ನು 7-5,6-4 ನೇರ ಸೆಟ್‌ಗಳಿಂದ ಮಣಿಸಿ ಚೊಚಲ ಬಾರಿಗೆ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಗುರುವಾರ ನಡೆಯುವ ಸೆಮಿಯಲ್ಲಿ ಅಗ್ರ ಶ್ರೇಯಾಂಕದ ಅರಿನಾ ಸಬಲೆಂಕಾ ಸವಾಲು ಎದುರಿಸಲಿದ್ದಾರೆ. ಸಬಲೆಂಕಾ ಅವರು ಅನಿಸಿಮೋವಾ ಪಾವ್ಲ್ಯುಚೆಂಕೋವಾ ವಿರುದ್ಧ ಮೂರು ಸೆಟ್‌ಗಳ ಹೋರಾಟದಲ್ಲಿ 6-2, 2-6, 6-3 ಅಂತರದಿಂದ ಗೆದ್ದು ಸೆಮಿ ಪ್ರವೇಶಿಸಿದರು.
Novak Djokovic.
— Bastien Fachan (@BastienFachan) January 21, 2025
The baddest man to ever touch a tennis racket. pic.twitter.com/dV32SqS4hS
ಮಿಶ್ರ ಡಬಲ್ಸ್‌ನ ದ್ವಿತೀಯ ಸುತ್ತಿನ ಪಂದ್ಯದಲ್ಲಿ ವಾಕ್ ಓವರ್ ಲಭಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದ ಭಾರತದ ಅನುಭವಿ ಆಟಗಾರ ರೋಹನ್ ಬೋಪಣ್ಣ ಅವರ ಚೀನಾದ ಜತೆಗಾರ್ತಿ ಶುವಾಯ್ ಜಾಂಗ್ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಥಳೀಯ ಜೋಡಿ ಆಸ್ಟ್ರೇಲಿಯಾದ ಜಾನ್ ಪೀರ್ಸ್ ಮತ್ತು ಒಲಿವಿಯಾ ಗಡೆಕಿ ವಿರುದ್ಧ 6-2, 4-6, 9-11ರ ಕಠಿಣ ಅಂತರದಲ್ಲಿ ಸೋಲನುಭವಿಸಿತು. ಮೊದಲ ಸೆಟ್ ಗೆದ್ದು ಮುನ್ನಡೆ ಸಾಧಿಸಿದ ಬೋಪಣ್ಣ-ಜಾಂಗ್ ಜೋಡಿ ಆ ಬಳಿಕದ ಎರಡು ಸೆಟ್‌ಗಳಲ್ಲಿ ಸತತವಾಗಿ ಸೋಲು ಕಂಡರು.