IND vs ENG: ಚಹಲ್ ದಾಖಲೆ ಮುರಿಯಲು ಸಜ್ಜಾದ ಅರ್ಶ್‌ದೀಪ್ ಸಿಂಗ್
IND vs ENG: ಸದ್ಯ ಭಾರತ ಪರ ಅತ್ಯಧಿಕ ಟಿ20 ವಿಕೆಟ್ ದಾಖಲೆ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಹೆಸರಿನಲ್ಲಿದೆ. ಚಹಲ್ ಇದುವರೆಗೆ 80 ಪಂದ್ಯಗಳನ್ನಾಡಿ 96 ವಿಕೆಟ್ ಕೆಡವಿದ್ದಾರೆ.
ಕೋಲ್ಕತಾ: ಇಂಗ್ಲೆಂಡ್(IND vs ENG) ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್(Arshdeep Singh) ಅವರು ದಾಖಲೆಯೊಂದನ್ನು ಬರೆಯುವ ಸನಿಹದಲ್ಲಿದ್ದಾರೆ. ಈ ಪಂದ್ಯದಲ್ಲಿ ಅವರು 2 ವಿಕೆಟ್ ಕಿತ್ತರೆ ಅಂತಾರಾಷ್ಟ್ರೀಯ ಟಿ20ಯಲ್ಲಿ ಅತ್ಯಧಿಕ ವಿಕೆಟ್ ಕಿತ್ತ ಭಾರತೀಯ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಸದ್ಯ ಭಾರತ ಪರ ಅತ್ಯಧಿಕ ಟಿ20 ವಿಕೆಟ್ ದಾಖಲೆ ಸ್ಪಿನ್ನರ್ ಯಜುವೇಂದ್ರ ಚಹಲ್(Yuzvendra Chahal) ಹೆಸರಿನಲ್ಲಿದೆ. ಚಹಲ್ ಇದುವರೆಗೆ 80 ಪಂದ್ಯಗಳನ್ನಾಡಿ 96 ವಿಕೆಟ್ ಕೆಡವಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಅರ್ಶ್‌ದೀಪ್ ಸಿಂಗ್ 60 ಪಂದ್ಯಗಳಿಂದ 95 ವಿಕೆಟ್ ಪಡೆದಿದ್ದಾರೆ. ಇಂದು ಇಂಗ್ಲೆಂಡ್ ವಿರುದ್ಧ 2 ವಿಕೆಟ್ ಪಡೆದರೆ ಚಹಲ್ ದಾಖಲೆ ಪತನಗೊಳ್ಳಲಿದೆ.
ಅರ್ಶ್‌ದೀಪ್ ಸಿಂಗ್ ಕಳೆದೊಂದು ವರ್ಷದಿಂದ ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದ ನಂಬಿಕಸ್ಥ ಬೌಲರ್ ಎನಿಸಿಕೊಂಡಿದ್ದಾರೆ. ಕಳೆದ ವರ್ಷ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿಯೂ ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು. ಇದೇ ಕಾರಣದಿಂದ ಅವರಿಗೆ ಮುಂದಿನ ತಿಂಗಳು ನಡೆಯುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ತಂಡದಲ್ಲೂ ಅವಕಾಶ ನೀಡಲಾಗಿದೆ.
ವಿಶ್ವ ದಾಖಲೆಯ ಸನಿಹದಲ್ಲಿ ತಿಲಕ್
ಇದೇ ಪಂದ್ಯದಲ್ಲಿ ಯುವ ಎಡಗೈ ಬ್ಯಾಟರ್ ತಿಲಕ್ ವರ್ಮಾ ಅವರಿಗೂ ವಿಶ್ವ ದಾಖಲೆಯೊಂದನ್ನು ನಿರ್ಮಿಸುವ ಅವಕಾಶವಿದೆ. ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಟಿ20ಐ ಸರಣಿಯ ಮೂರು ಮತ್ತು ನಾಲ್ಕನೇ ಪಂದ್ಯಗಳಲ್ಲಿ ತಿಲಕ್ ವರ್ಮಾ ಸತತ ಎರಡು ಶತಕಗಳನ್ನು ಸಿಡಿಸಿದ್ದರು. ಇದೀಗ ಇಂದು(ಬುಧವಾರ) ಕೋಲ್ಕತಾದಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದರೆ, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನ ಹ್ಯಾಟ್ರಿಕ್ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ.
ಸತತ 2 ಶತಕಗಳನ್ನು ಸಿಡಿಸಿದ ಆಟಗಾರರು
ಗಸ್ಟಿನ್ ಮೆಕ್‌ಕೀನ್ (ಫ್ರಾನ್ಸ್): ಎರಡು ಶತಕಗಳು (2022)
ರೈಲಿ ರೊಸೊವ್ (ದಕ್ಷಿಣ ಆಫ್ರಿಕಾ): ಎರಡು ಶತಕ (2022)
ಫಿಲ್ ಸಾಲ್ಟ್ (ಇಂಗ್ಲೆಂಡ್): ಎರಡು ಶತಕ (2023)
ಸಂಜು ಸ್ಯಾಮ್ಸನ್ (ಭಾರತ): ಎರಡು ಶತಕ (2024)
ತಿಲಕ್ ವರ್ಮಾ (ಭಾರತ): ಎರಡು ಶತಕ (2024)