Controversy: ಚಿಕ್ಕಮಗಳೂರಿನಲ್ಲಿ ಮತ್ತೊಂದು ಮತೀಯ ವಿವಾದ; ಕೋಟೆ ದರ್ಗಾದಲ್ಲಿ ಉದ್ವಿಗ್ನತೆ
Controversy: ಚಿಕ್ಕಮಗಳೂರಿನಲ್ಲಿ ಮತ್ತೊಂದು ಮತೀಯ ವಿವಾದ; ಕೋಟೆ ದರ್ಗಾದಲ್ಲಿ ಉದ್ವಿಗ್ನತೆ
ಹರೀಶ್ ಕೇರ
January 4, 2025
ಚಿಕ್ಕಮಗಳೂರು: ಚಿಕ್ಕಮಗಳೂರು (Chikkamagaluru news) ನಗರದ ಕೋಟೆ ಬಡಾವಣೆಯಲ್ಲಿರುವ ಜಾಮಿಯಾ ಮಸೀದಿ ಅಧೀನದಲ್ಲಿರುವ ಹಜರತ್ ಸೈಯದ್ ಮೌಲಾನಾ ರೋಂ ಶಾಖಾದ್ರಿ ದರ್ಗಾ ಮತ್ತೆ ವಿವಾದಕ್ಕೆ (Controversy) ಕಾರಣವಾಗಿದೆ. ವಿವಾದಿತ ಜಾಗದಲ್ಲಿ ಕಾಮಗಾರಿ ನಡೆಸಲು ಯತ್ನಿಸಿರುವುದೇ ಮತ್ತೆ ವಿವಾದ ಉಲ್ಬಣಗೊಳ್ಳಲು ಕಾರಣವಾಗಿದೆ.
ವಿವಾದಿತ ದರ್ಗಾದ ಆವರಣದಲ್ಲಿ ಟೈಲ್ಸ್ ಕಾಮಗಾರಿಗೆ ಸ್ಥಳೀಯರು ಹಾಗೂ ಹಿಂದೂ ಸಂಘಟನೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಕಾಮಗಾರಿ ನಡೆಸದಂತೆ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಚಿಕ್ಕಮಗಳೂರು ಡಿವೈಎಸ್ಪಿ ಶೈಲೇಂದ್ರ ನೇತೃತ್ವದಲ್ಲಿ ಪೊಲೀಸರು ಆಗಮಿಸಿ ಸ್ಥಳದಲ್ಲಿ ಭದ್ರತೆ ಒದಗಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಈ ದರ್ಗಾ ವಿವಾದದಲ್ಲಿದೆ. ಕಳೆದ ವರ್ಷವೂ ಕಾಮಗಾರಿ ವಿರೋಧಿಸಿ ದರ್ಗಾದೊಳಗೆ ಗಲಾಟೆ ನಡೆದಿತ್ತು. ಇದೀಗ ಮತ್ತೆ ವಿವಾದ ಮುನ್ನೆಲೆಗೆ ಬಂದಿದ್ದು ನಾಳೆ ನಗರಸಭೆಯಲ್ಲಿ ಸಭೆ ಕರೆಯಲಾಗಿದೆ. ದರ್ಗಾ ಬಳಿ ನೂರಾರು ಪೊಲೀಸರನ್ನ ಮುಂಜಾಗ್ರತಾ ಕ್ರಮವಾಗಿ ನಿಯೋಜನೆ ಮಾಡಲಾಗಿದೆ.
ಮುಸ್ಲಿಂ ಮನೆಗಳೇ ಇಲ್ಲದ ಕೋಟೆ ಬಡಾವಣೆಯಲ್ಲಿರುವ ಈ ದರ್ಗಾದಲ್ಲಿರುವ ಗೋರಿಗಳು ನಕಲಿಯಾಗಿದ್ದು, ಆಸ್ತಿ ಹೊಡೆಯುವ ಸಂಚು. ಜಾಮಿಯಾ ಮಸೀದಿ ಬಳಿ ಈ ಜಾಗದ ಕುರಿತು ಯಾವುದೇ ದಾಖಲೆಗಳಿಲ್ಲ ಎಂದು ಹಿಂದೂ ಸಂಘಟನೆಗಳು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ. ಚಿಕ್ಕಮಗಳೂರು ನಗರ ಸಭೆ ಅಧ್ಯಕ್ಷೆ ಸುಜಾತಾ ಅವರು ಜಾಮಿಯಾ ಮಸೀದಿ ನಾಳೆಯೊಳಗೆ ದರ್ಗಾಕ್ಕೆ ಸಂಬಂಧಿಸಿದ ದಾಖಲೆ ನೀಡುವಂತೆ ಸೂಚನೆ ನೀಡಿದ್ದು, ಕಾಮಗಾರಿ ನಡೆಸದಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: Bus Fare Hike: ಬಸ್ ಟಿಕೆಟ್ ದರ ಏರಿಕೆ ಸಹಜ ಪ್ರಕ್ರಿಯೆ ಎಂದ ಸಚಿವ ಭೋಸರಾಜು