Mangalore News: ಪ್ರವಾಸಕ್ಕೆ ಹೋಗಿದ್ದ ಮೂವರು ಸಮುದ್ರದಲ್ಲಿ ಮುಳುಗಿ ಸಾವು, ಒಬ್ಬರ ರಕ್ಷಣೆ

Mangalore News: ಮಂಗಳೂರಿನ ಸೂರತ್ಕಲ್‌ ಬಳಿ ಸಮುದ್ರದಲ್ಲಿ ಮುಳುಗಿ ಮೂವರು ಮೃತಪಟ್ಟಿದ್ದಾರೆ. ಒಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.

image-5c27d575-a37f-493e-94a7-55d193760684.jpg
Profile Prabhakara R January 8, 2025
ಮಂಗಳೂರು: ಪ್ರವಾಸಕ್ಕೆ ಹೋಗಿದ್ದ ಮೂವರು ಸಮುದ್ರ ಪಾಲಾಗಿರುವ ಘಟನೆ ಮಂಗಳೂರಿನ (Mangalore News) ಸೂರತ್ಕಲ್‌ನಲ್ಲಿ ನಡೆದಿದೆ. ಸೂರತ್ಕಲ್ ಬಳಿ ಕುಳಾಯಿ ಸಮೀಪದ ಹೊಸಬೆಟ್ಟು ಬೀಚ್ ಬಳಿ ಘಟನೆ ನಡೆದಿದೆ. ಮೃತರನ್ನು ಚಿತ್ರದುರ್ಗದ ಮಂಜುನಾಥ್, ಶಿವಮೊಗ್ಗದ ಶಿವಕುಮಾರ್ ಹಾಗೂ ಬೆಂಗಳೂರಿನ ಸತ್ಯವೇಲು ಸಮುದ್ರದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಶಿವಕುಮಾರ್ ಹಾಗೂ ಸತ್ಯವೇಲು ಮೃತದೇಹ ಪಾತೆಯಾಗಿದ್ದು, ಮಂಜುನಾಥ ಮೃತ ದೇಹಕ್ಕಾಗಿ ತೀವ್ರ ಶೋಧ ನಡೆಯುತ್ತಿದೆ. ಘಟನೆಯಲ್ಲಿ ಬೀದರ್‌ನ ಪರಮೇಶ್ವರ್‌ ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ. ಬೆಂಗಳೂರಿನಿಂದ ನೆನ್ನೆ ನಾಲ್ವರು ಪ್ರವಾಸಕ್ಕೆ ಹೋಗಿದ್ದರು. ಈ ಸುದ್ದಿಯನ್ನೂ ಓದಿ | Viral Post: ಉಬರ್ ಡ್ರೈವರ್‌ಗೆ ನಕಲಿ ನೋಟು ಕೊಟ್ಟ ಟೂರಿಸ್ಟ್- ಆಮೇಲೆ ಆಗಿದ್ದೇ ಬೇರೆ! ಜಮೀನು ವಿವಾದ- ಕೊಲೆಗೆ ಸುಫಾರಿ ಕೊಟ್ಟ ಲೇಡಿ ಪೊಲೀಸ್‌... ಇದು ಖಾಕಿಯ ʻಕಿಲ್ಲಿಂಗ್‌ʼ ಪ್ಲ್ಯಾನ್‌! ಬೆಂಗಳೂರು: ಖಾಕಿಗೆ ಅದರದ್ದೇ ಆದ ಮರ್ಯಾದೆ ಮತ್ತು ಗೌರವವಿದೆ. ಕಾನೂನನ್ನು ಕಾಪಾಡಬೇಕಾದ ಮತ್ತು ಕಾನೂನಿನ ವ್ಯಾಪ್ತಿಯಲ್ಲಿ ಜನ ಸಾಮಾನ್ಯರನ್ನು ರಕ್ಷಿಸಬೇಕಾದ ಜವಾಬ್ದಾರಿ ಪೊಲೀಸರಿಗೆ ಇರುತ್ತದೆ. ಆದರೆ ಇಲ್ಲೊಬ್ಬ ಲೇಡಿ ಕಾನ್‌ಸ್ಟೇಬಲ್‌ ಖಾಕಿ ತೊಟ್ಟಿರುವುದನ್ನೇ ಮರೆತು ಸುಫಾರಿ ಕಿಲ್ಲರ್‌ ರೀತಿ ವರ್ತಿಸಿದ್ದಾರೆ. ಇದೀಗ ಅವರ ವಿರುದ್ಧ ಜಮೀನು ವಿವಾದದಲ್ಲಿ ಸಂಬಂಧಿಕರೊಬ್ಬರ ಕೊಲೆಗಾಗಿ ಎಸ್.ಪಿ ಕಚೇರಿಯಲ್ಲಿಯೇ ಕುಳಿತು ಸುಫಾರಿ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ(Tumkur News) ತುಮಕೂರು ಎಸ್ಪಿ ಕಚೇರಿಯಲ್ಲಿ ಪೊಲೀಸ್‌ ಆಗಿರುವ ಶಾಂತಲಾ(Lady Constable) ಅವರಿಗೆ ಶಿವರಂಗಯ್ಯ ಎಂಬುವರ ಜೊತೆಗೆ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಸಾಕಷ್ಟು ಬಾರಿ ಜಗಳಗಳಾಗಿದ್ದವು. ವಿವಾದಗಳು ಮುಗಿಯದ ಕಾರಣ ಶಾಂತಲ ಹೇಮಂತ್‌ ಕುಮಾರ್‌ ಎಂಬ ವ್ಯಕ್ತಿಗೆ ಸುಫಾರಿ ನೀಡುವುದಾಗಿ ಹೇಳಿ ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಹಾಗಲವಾಡಿ ನಿವಾಸಿಯಾದ ಶಿವರಂಗಯ್ಯ ಅವರನ್ನು ಕೊಲೆ ಮಾಡುವಂತೆ ಹೇಳಿದ್ದಾರೆ. ಕೊರಟಗೆರೆ ತಾಲೂಕಿನ ಸಂಕೇನಹಳ್ಳಿ ಗ್ರಾಮದ ಹೇಮಂತ್‌ ಕುಮಾರ್ ಶಿವರಂಗಯ್ಯ ಮನೆಗೆ ಹೋಗಿ ಹಲವು ಬಾರಿ ಮಾತುಕತೆ ನಡೆಸಿದ್ದಾನೆ. ಜಮೀನು ವಿವಾದ ಇತ್ಯರ್ಥವಾಗದೆ ಇದ್ದರೆ ತೋಟ ಅಥವಾ ಕಾಡಿನ ಬಳಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.(Supari Case) ಶಿವರಂಗಯ್ಯ ಅವರ ಕೊಲೆಗೆ ಲೇಡಿ ಪೊಲೀಸ್‌ ಶಾಂತಲಾ ಸುಫಾರಿ ಕೊಡುವುದಾಗಿ ಹೇಳಿದ್ದಾರೆಂದು ಸ್ವತಃ ಹೇಮಂತ್‌ ಕುಮಾರ್‌ ಹೇಳಿದ್ದಾನೆ. ನಿಮ್ಮನ್ನು ಕೊಲೆ ಮಾಡುವುದಾಗಿ ಸುಫಾರಿ ಪಡೆಯಲಿದ್ದೇನೆ. ಆದರೆ ನಿಮ್ಮನ್ನು ಕೊಲೆ ಮಾಡುವುದಿಲ್ಲ. ನೀವೇ ಇಂತಿಷ್ಟು ಹಣ ಕೊಟ್ಟುಬಿಡಿ. ನಿಮ್ಮನ್ನು ಕೊಲೆ ಮಾಡಿರುವುದಾಗಿ ಶಾಂತಲ ಅವರನ್ನು ನಂಬಿಸುತ್ತೇನೆ. ನೀವು ಸತ್ತಂತೆ ನಟಿಸಿ ಒಂದು ಫೋಟೊ ಕಳುಹಿಸಿ ಎಂದು ಹೇಮಂತ್‌ ಶಿವರಂಗಯ್ಯ ಅವರ ಬಳಿ ಹೇಳಿದ್ದಾನೆ. ಈ ಮೊದಲು ಫೋನ್‌ ಕರೆಯ ಮೂಲಕ ನಕಲಿ ಪತ್ರಕರ್ತನ ಸೋಗಿನಲ್ಲಿ ಮಾತನಾಡಿ ಹೆದರಿಸಲು ಪ್ರಯತ್ನಿಸಿದ್ದಾನೆ. ಇಬ್ಬರ ನಡುವಿನ ಸಂಭಾಷಣೆಯ ವಿಡಿಯೊ ಲಭ್ಯವಾಗಿದೆ. ಜೀವ ಭಯದಿಂದ ಶಿವರಂಗಯ್ಯ ಗುಬ್ಬಿ ಪೊಲೀಸ್‌ ಠಾಣೆಯಲ್ಲಿ ಶಾಂತಲ ಮತ್ತು ಹೇಮಂತ್‌ ಕುಮಾರ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಆದರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದ ಪೊಲೀಸರು ರಾಜಿ ಪಂಚಾಯಿತಿ ಮಾಡಿ ಕಳುಹಿಸಿದ್ದಾರೆ ಎನ್ನಲಾಗಿದೆ. ಶಿವರಂಗಯ್ಯ ಅವರಿಗೆ ಹಾಗಲವಾಡಿಯಲ್ಲಿ 30 ಎಕರೆ ಜಮೀನಿದ್ದು, ಈ ಜಮೀನು ಅವರಿಗೆ ಪಿತ್ರಾರ್ಜಿತವಾಗಿ ಬಂದಿದೆ. ಶಾಂತಲ ಶಿವರಂಗಯ್ಯನ ಅಕ್ಕನ ಮಗಳಾಗಿದ್ದು, ಜಮೀನಿನಲ್ಲಿ ಭಾಗ ಕೇಳಿದ್ದಾರೆ. ಈ ವಿಚಾರದಲ್ಲಿ ಇಬ್ಬರ ನಡುವೆ ಹಲವು ವರ್ಷಗಳಿಂದ ಜಗಳಗಳಾಗಿದ್ದವು. ಮನಃಸ್ತಾಪವಿತ್ತು ಎಂದು ತಿಳಿದು ಬಂದಿದೆ. ಸಲ್ಮಾನ್‌ ಖಾನ್‌ ಹತ್ಯೆಗೆ ₹ 25 ಲಕ್ಷ ಸುಪಾರಿ ಕೆಲ ತಿಂಗಳುಗಳ ಹಿಂದೆಯಷ್ಟೇ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯ್‌(Bishnoi Gang) ಹಿಟ್‌ಲಿಸ್ಟ್‌ನಲ್ಲಿರುವ ನಟ ಸಲ್ಮಾನ್‌ ಖಾನ್‌(Salman Khan) ಅವರ ಹತ್ಯೆಗೆ ಬರೋಬ್ಬರಿ ₹ 25 ಲಕ್ಷದ ಸುಪಾರಿ ಪಡೆದಿರುವ ವಿಚಾರ ಚಾರ್ಜ್‌ಶೀಟ್‌(Chargesheet)ನಲ್ಲಿ ಬಯಲಾಗಿತ್ತು. ಬಿಷ್ಣೋಯ್‌ ಗ್ಯಾಂಗ್‌ ವಿರುದ್ಧ ನವಿ ಮುಂಬೈ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಚಾರ್ಜ್‌ಶೀಟ್‌ನಲ್ಲಿ ಐದು ಜನ ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿತ್ತು. ಈ ಸುದ್ದಿಯನ್ನೂ ಓದಿ:Murder Case: ಕೋಲಾರದಲ್ಲಿ ಯುವಕನ ಅಟ್ಟಾಡಿಸಿ ಕೊಲೆ; ನಾಲ್ವರು ಆರೋಪಿಗಳು ಅರೆಸ್ಟ್
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ