Self Harming: ಆನ್‌ಲೈನ್ ಗೇಮ್ ಚಟಕ್ಕೆ ಯುವಕ ಬಲಿ; 83 ಸಾವಿರ ರೂ. ಕಳೆದುಕೊಂಡು ಆತ್ಮಹತ್ಯೆ
Self Harming: 83 ಸಾವಿರ ರೂ. ಸಾಲ ಪಡೆದು ಆನ್‌ಲೈನ್ ಗೇಮ್ ಆಡಿ ಹಣ ಕಳೆದಕೊಂಡಿದ್ದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳೂರಿನ ಮೂಡುಶೆಡ್ಡೆ ಗ್ರಾಮದಲ್ಲಿ ಘಟನೆ ನಡೆದಿದೆ.
Prabhakara R
December 28, 2024
ಮಂಗಳೂರು: ಆನ್‌ಲೈನ್ ಗೇಮ್ ಚಟಕ್ಕೆ ಯುವಕನೊಬ್ಬ ಬಲಿಯಾಗಿರುವ ಘಟನೆ (Self Harming) ಮಂಗಳೂರಿನ ಮೂಡುಶೆಡ್ಡೆ ಗ್ರಾಮದಲ್ಲಿ ನಡೆದಿದೆ. 83 ಸಾವಿರ ರೂ. ಸಾಲ ಪಡೆದು ಆನ್‌ಲೈನ್ ಗೇಮ್ ಆಡಿ ಹಣ ಕಳೆದಕೊಂಡಿದ್ದ ಯುವಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಡುಶೆಡ್ಡೆ ನಿವಾಸಿ ಸೂರ್ಯ ಶೆಟ್ಟಿ (23) ಮೃತ ಯುವಕ. ಈತ ಆನ್‌ಲೈನ್ ಗೇಮ್ ಆಡುತ್ತಿದ್ದ. ಬುಧವಾರ ತನ್ನ ಗೆಳೆಯನಿಂದ 83 ಸಾವಿರ ರೂ. ಸಾಲ ಪಡೆದು ಆನ್‌ಲೈನ್ ಆಟವಾಡಿ ಹಣ ಕಳೆದುಕೊಂಡಿದ್ದ. ಇದರಿಂದ ಮತ್ತಷ್ಟು ಚಿಂತೆಗೊಳಗಾದ ಯುವಕ ಬುಧವಾರ ರಾತ್ರಿ ಮೊಬೈಲ್ ಮನೆಯಲ್ಲಿಯೇ ಇಟ್ಟು ಮರವೂರು ಸೇತುವೆ ಸಮೀಪ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ಧಾನೆ.
ಈತ ಮೇರಿಹಿಲ್‌ನಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದು, ಕೆಲ ಸಮಯದ ಹಿಂದೆ ಆ ಉದ್ಯೋಗ ಬಿಟ್ಟು ಬೇರೆಡೆ ಕೆಲಸ ಹುಡುಕುತ್ತಿದ್ದ. ಯುವಕ ಬಿಎಸ್ಸಿ ಪದವೀಧರನಾಗಿದ್ದು, ಪ್ರತಿಭಾನ್ವಿತನಾಗಿದ್ದ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Viral News: ಬಿಲ್ ಪಾವತಿ ವಿಳಂಬ… ಆಸ್ಪತ್ರೆಯಲ್ಲಿ ಹೃದಯ ಶಸ್ತ್ರಚಿಕಿತ್ಸೆ ಸ್ಥಗಿತ!
ಲಿಂಗಸುಗೂರಿನಲ್ಲಿ ಯುವಕ ಅನುಮಾನಾಸ್ಪದ ಸಾವು; ಕೊಲೆ ಶಂಕೆ
ರಾಯಚೂರು: ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ (Raichur News) ರಾಯಚೂರು ಜಿಲ್ಲೆಯ ಲಿಂಗಸುಗೂರಿನ ಐದನಾಳ ಗ್ರಾಮದಲ್ಲಿ ನಡೆದಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ. ಗಣೇಶ್ (21) ಮೃತ ಯುವಕ.
ಗ್ರಾಮದ ಹೊರವಲಯದ ಬಾವಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಸ್ನೇಹಿತರೊಂದಿಗೆ ಬಾವಿ ಬಳಿ ಯುವಕ ಮದ್ಯಪಾನ ಮಾಡಿದ್ದ ಎನ್ನಲಾಗಿದ್ದು, ಕುಡಿದ ಅಮಲಿನಲ್ಲಿ ಕಾಲು ಜಾರಿ ಬಾವಿಗೆ ಬಿದ್ದಿರುವುದಾಗಿ ಸ್ನೇಹಿತರ ಹೇಳಿದ್ದಾರೆ. ಆದರೆ, ಕೊಲೆ ಮಾಡುವ ಉದ್ದೇಶದಿಂದ ಪಾರ್ಟಿ ಮಾಡಲು ಕರೆದೊಯ್ದಿರುವ ಆರೋಪ ಕೇಳಿಂದ ಹಿನ್ನೆಲೆಯಲ್ಲಿ ನಿಂಗಪ್ಪ, ರಮೇಶ್ ವಿರುದ್ಧ ಕೊಲೆ ಆರೋಪ ಪ್ರಕರಣ ದಾಖಲಾಗಿದೆ.
ಮೃತ ಗಣೇಶನ ತಂದೆ ಮಾನಪ್ಪ ನೀಡಿದ ದೂರಿನ ಮೇರೆಗೆ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸುದ್ದಿಯನ್ನೂ ಓದಿ | Self Harming: ಹೊಸ ಸಂಸತ್ ಭವನದ ಬಳಿ ಮೈಗೆ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾವು
ತನ್ನ ಹಿರಿಯ ಮಗನಾದ ಗಣೇಶನನ್ನು ಆರೋಪಿಗಳು ಯಾವುದೋ ದುರುದ್ದೇಶದಿಂದ ಡಿ. 26ರಂದು ರಾತ್ರಿ 9 ಗಂಟೆಗೆ ಮನೆಯಿಂದ ಹೊರಗಡೆ ಕರೆಯಿಸಿಕೊಂಡು, ಐದನಾಳ ಗ್ರಾಮದ ಹಳ್ಳದ ಹತ್ತಿರ ಇರುವ ಬಾವಿಯ ದಂಡೆಯ ಹತ್ತಿರ ಪಾರ್ಟಿ ಮಾಡಿ ಆತನನ್ನು ಕೊಲೆ ಮಾಡುವ ಉದ್ದೇಶದಿಂದ ಭಾವಿಯಲ್ಲಿ ನೂಕಿದ್ದಾರೆ ಎಂದು ತಂದೆ ಮಾನಪ್ಪ ದೂರು ನೀಡಿದ್ದಾರೆ.
ಮಗ ಬಾವಿಯಲ್ಲಿ ಬಿದ್ದ ವಿಷಯ ರಾತ್ರಿ 11.45 ಗಂಟೆಗೆ ತಿಳಿದು ಬಾವಿ ಬಳಿ ಹೋಗಿ ಗಣೇಶನನ್ನು ಹೊರ ತೆಗೆದು ವೈದ್ಯಕೀಯ ಚಿಕಿತ್ಸೆ ಕುರಿತು ಲಿಂಗಸೂರು ಸರಕಾರಿ ಆಸ್ಪತ್ರೆಗೆ ಸೇರಿಸಿದಾಗ ಮಾಡಿದಾಗ ಚೇತರಿಸಿಕೊಳ್ಳದೇ ಡಿ.27ರಂದು ಮಧ್ಯರಾತ್ರಿ ಮೃತಪಟ್ಟಿದ್ದಾನೆ. ಮಗನ ಕಾಲಿನ ಎರಡು ಕಾಲಿನ ಹೆಬ್ಬೆರಳಿಗೆ ಹಾಗೂ ಇತರೆ ಬೆರಳುಗಳಿಗೆ ಗಾಯಗಳಾಗಿತ್ತು. ಹೀಗಾಗಿ ಮಗನ ಕೊಲೆ ಮಾಡಿದ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಮೃತ ಯುವಕನ ತಂದೆ ಕೋರಿದ್ದಾರೆ.
ಈ ಸುದ್ದಿಯನ್ನು ಓದಿ | Actor Charith Balappa: ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಕನ್ನಡ ಕಿರುತೆರೆ ನಟ ಚರಿತ್ ಬಾಳಪ್ಪ ಬಂಧನ