Dharwad News: ಧಾರವಾಡದಲ್ಲಿ ಕ್ಯಾಂಟರ್ ಪಲ್ಟಿಯಾಗಿ ಟಿಟಿ ವಾಹನಕ್ಕೆ ಡಿಕ್ಕಿ; ಮೂವರ ದುರ್ಮರಣ
Dharwad News: ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಹೊರವಲಯದಲ್ಲಿ ಭಾನುವಾರ ರಾತ್ರಿ ಭೀಕರ ಅಪಘಾತ ನಡೆದಿದೆ.
Prabhakara R
December 23, 2024
ಧಾರವಾಡ: ಕ್ಯಾಂಟರ್ ಪಲ್ಟಿಯಾಗಿ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದರಿಂದ ಮೂವರು ದುರ್ಮರಣ ಹೊಂದಿರುವ ಘಟನೆ ಜಿಲ್ಲೆಯ (Dharwad News) ಅಳ್ನಾವರ ತಾಲೂಕಿನ ಕಡಬಗಟ್ಟಿ ಗ್ರಾಮದ ಹೊರವಲಯದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕ್ಯಾಂಟರ್ ವಾಹನದಲ್ಲಿದ್ದ ಹನುಮಂತಪ್ಪ ಮಲ್ಲದ, ಮಹಾಂತೇಶ ಚವ್ಹಾಣ, ಮಹದೇವ ಹುಳೊಳ್ಳಿ ಮೃತರು. ಇವರು ಬೆಳಗಾವಿ ಜಿಲ್ಲೆಯ ಶಿರಸಂಗಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ.
ಕ್ಯಾಂಟರ್ ವಾಹನ ಶಿರಸಂಗಿಯಿಂದ ಗೋವಾಗೆ ತೆರಳುತ್ತಿತ್ತು. ಗೋವಾದಿಂದ ಹುಬ್ಬಳ್ಳಿಗೆ ಟಿಟಿ ವಾಹನ ಬರುತ್ತಿತ್ತು. ಕ್ಯಾಂಟರ್ ವಾಹನ ಕಡಬಗಟ್ಟಿ ಗ್ರಾಮದ ಹೊರವಲಯದ ಬಳಿ ಪಲ್ಟಿಯಾಗಿ ಟಿಟಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕ್ಯಾಂಟರ್ ವಾಹನದಲ್ಲಿದ್ದ ಮೂವರು ಮೃತಪಟ್ಟಿದ್ದು, ಒಬ್ಬರಿಗೆ ಗಾಯಗಳಾಗಿವೆ. ಟಿಟಿ ವಾಹನದಲ್ಲಿನ ಇಬ್ಬರು ಪ್ರಯಾಣಿಕರು ಸಹ ಗಾಯಗೊಂಡಿದ್ದಾರೆ. ಮೂವರು ಗಾಯಾಳುಗಳನ್ನು ಹುಬ್ಬಳ್ಳಿ ಕಿಮ್ಸ್ಗೆ ರವಾನಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Allu Arjun: ಅಲ್ಲು ಅರ್ಜುನ್ ಮನೆ ಬಳಿ ಗಲಾಟೆ ಮಾಡಿದ್ದ ಆರೋಪಿಗಳಿಗೆ ಜಾಮೀನು
ಸಿಗರೇಟ್‌ನಿಂದ ಮರ್ಮಾಂಗ ಸುಟ್ಟು ಯುವಕನ ಬರ್ಬರ ಹತ್ಯೆ; ಕುಡಿತ ಮತ್ತಲ್ಲಿ ಸ್ನೇಹಿತನಿಂದಲೇ ಕೃತ್ಯ!
ಬೆಂಗಳೂರು: ಕುಡಿದ ಮತ್ತಿನಲ್ಲಿ ಸಿಗರೇಟ್‌ನಿಂದ ಮರ್ಮಾಂಗ ಸುಟ್ಟು ಯುವಕನ ಭೀಕರ ಹತ್ಯೆ (Murder Case) ಮಾಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಭೋವಿತಿಮ್ಮನಪಾಳ್ಯದಲ್ಲಿ ನಡೆದಿದೆ. ಡಿ.19ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರದೀಪ್ (41) ಮೃತ ದುರ್ದೈವಿಯಾಗಿದ್ದು, ಚೇತನ್ (30) ಆರೋಪಿಯಾಗಿದ್ದಾನೆ. ಮೃತ ಪ್ರದೀಪ್ ಹೆಂಡತಿಯೊಂದಿಗೆ ಜಗಳವಾಡಿಕೊಂಡಿದ್ದ, ಇದರಿಂದ ಇಬ್ಬರು ಬೇರೆಯಾಗಿದ್ದರು. ಆಕೆಯನ್ನು ಆರೋಪಿ ಚೇತನ್ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದ. ಇದರಿಂದ ಕುಡಿದ ಮತ್ತಿನಲ್ಲಿ ಬಂದ ಪ್ರದೀಪ್ ಅವನ ಮನೆಯಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಪ್ರದೀಪ್ ತಲೆಯನ್ನು ಗೋಡೆಗೆ ಗುದ್ದಿಸಿ, ಸಿಗರೇಟ್‌ನಿಂದ ಮರ್ಮಾಂಗವನ್ನು ಸುಟ್ಟು ಚೇತನ್ ಹತ್ಯೆ ಮಾಡಿದ್ದಾನೆ.
ಘಟನೆ ಸಂಬಂಧ ಆರೋಪಿ ಚೇತನ್‌ನನ್ನು ಪೊಲೀಸರು ಬಂಧಿಸಿದ್ದು, ಸಲಿಂಗಕಾಮಕ್ಕೆ ಸ್ನೇಹಿತನನ್ನು ಹತ್ಯೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮಾದನಾಯನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ | Terrorist Arrested: ಕಾಶ್ಮೀರದಲ್ಲಿಉಗ್ರರ ಜತೆ ನಂಟು ಹೊಂದಿದ್ದ ಇಬ್ಬರು ಅರೆಸ್ಟ್- ಹಲವು ಸ್ಫೋಟಕ ವಸ್ತುಗಳು ವಶಕ್ಕೆ