Fraud case: ಟೆಂಡರ್ ಕೊಡಿಸುವುದಾಗಿ 58.77 ಲಕ್ಷ ಪಡೆದು ಸಚಿನ್ ಮೋಸ: ಪ್ರಕಾಶ್ ಕಪನೂರ್ ಆರೋಪ

Fraud case: ಟೆಂಡರ್ ಕೊಡಿಸುವುದಾಗಿ 58.77 ಲಕ್ಷ ಪಡೆದು ಸಚಿನ್ ಮೋಸ: ಪ್ರಕಾಶ್ ಕಪನೂರ್ ಆರೋಪ

Profile Prabhakara R December 30, 2024
ಕಲಬುರಗಿ: ಗುತ್ತಿಗೆದಾರ ಸಚಿನ್ ಪಾಂಚಾಳ್‌ ಆತ್ಮಹತ್ಯೆ ಪ್ರಕರಣವನ್ನು ಎಸ್‌ಬಿಐ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ. ಈ ನಡುವೆ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದ್ದು, ಸಚಿನ್ ಪಾಂಚಾಳ್‌ಗೆ ನಾವು ಯಾವುದೇ ಕಿರುಕುಳ ನೀಡಿಲ್ಲ. ಟೆಂಡರ್‌ ಕೊಡಿಸುತ್ತೇವೆ ಎಂದದು ಆತನೇ ನಮ್ಮಿಂದ 58.77 ಲಕ್ಷ ರೂ. ಪಡೆದು ಮೋಸ (Fraud case) ಮಾಡಿದ್ದಾನೆ ಎಂದು ಕಾಂಗ್ರೆಸ್ ಮುಖಂಡ ರಾಜು ಕಪನೂರ ಸಹೋದರ ಪ್ರಕಾಶ ಕಪನೂರ ಆರೋಪಿಸಿದ್ದಾರೆ. ಈ ಕುರಿತು ಕಲಬುರಗಿಯಲ್ಲಿ ಮಾತನಾಡಿದ ಅವರು, ನಾವು ಸಚಿನ್ ಪಾಂಚಾಳ್‌ಗೆ ಯಾವುದೇ ಕಿರುಕುಳ ನೀಡಿಲ್ಲ. 58.77 ಲಕ್ಷ ರೂ. ಕೊಟ್ಟಿದ್ದೆವು. ಜತೆಗೆ 2 ಲಕ್ಷ ರೂ. ಹಣ ಸಹ ನೀಡಿದ್ದೆವು. ನಾವು ಕೊಟ್ಟ ಹಣ ವಾಪಸ್ ಕೇಳಿದ್ದೇವಷ್ಟೇ. ಆತನಿಗೆ ಯಾವುದೇ ಕಿರುಕುಳ ನೀಡಿಲ್ಲ ಕಾಂಗ್ರೆಸ್ ಮುಖಂಡ ರಾಜು ಕಪನೂರ ಸಹೋದರ ಪ್ರಕಾಶ ಕಪನೂರ ತಿಳಿಸಿದರು. ಆತ್ಮಹತ್ಯೆ ಗುತ್ತಿಗೆದಾರ ಸಚಿನ್ ಪಾಂಚಾಳ್ ಅವರು ನಮಗೆ ಟೆಂಡರ್ ಕೊಡಿಸುವುದಾಗಿ 58.77 ಲಕ್ಷ ಹಣ ಪಡೆದು ವಾಪಸ್ ಕೊಟ್ಟಿಲ್ಲ. ನಮಗೆ ಟೆಂಡರ್ ಕೊಡಿಸುತ್ತೇನೆಂದು ಮೋಸ ಮಾಡಿದ್ದ. ನಮ್ಮ ಪರಿಚಯದವರು ಗುತ್ತಿಗೆದಾರರು ಇದ್ದಾರೆ. ಅವರ ಹೆಸರಿನಲ್ಲಿ ಕೆಲಸ ಕೊಡಿಸುತ್ತೇನೆ ಎಂದಿದ್ದ. ಹೀಗಾಗಿ, ಟೆಂಡರ್ ಇಎಂಡಿ ಹಣ ಹಾಕಿದ್ದೆವು. ಆತ ಮೋಸ ಮಾಡಿದ್ದು ಗೊತ್ತಾಗುತ್ತಿದಂತೆ ಹಣ ವಾಪಾಸ್ ಕೇಳಿದ್ದೇವು. ನಮ್ಮ ಹಣವನ್ನ ನಾವು ವಾಪಸ್ ಕೇಳಬಾರದಾ? ಎಂದು ಪ್ರಕಾಶ್ ಕಪನೂರ ಪ್ರಶ್ನಿಸಿದ್ದಾರೆ. ನಾವು ಗುತ್ತಿಗೆದಾರ ಸಚಿನ್‌ಗೆ ಯಾವುದೇ ರೀತಿಯ ಟಾರ್ಚರ್ ನೀಡಿಲ್ಲ. ಬೆದರಿಕೆ ಹಾಕಿಲ್ಲ ಎಂದು ಕೆಲ ದಾಖಲೆಗಳನ್ನು ಬಹಿರಂಗಗೊಳಿಸಿ ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿಯನ್ನೂ ಓದಿ | Viral Video: ‘ಇವ್ರ ರೀಲ್ ಹುಚ್ಚಿಗೆ ಬೆಂಕಿ ಬೀಳ..!’ : ಹೆದ್ದಾರಿಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಕಿಡಿಗೇಡಿ – ವಿಡಿಯೊ ನೋಡಿ ಮೇಲಧಿಕಾರಿಗಳ ಕಿರುಕುಳ: ಕೈಯಲ್ಲಿ ಡೆತ್‌ ನೋಟ್‌ ಹಿಡಿದುಕೊಂಡೇ ಕೆಎಸ್‌ಡಿಎಲ್‌ ಅಧಿಕಾರಿ ಆತ್ಮಹತ್ಯೆ! ಬೆಂಗಳೂರು: ರಾಜ್ಯದಲ್ಲಿ ಅಧಿಕಾರಿಗಳ ಆತ್ಮಹತ್ಯೆ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಆತಂಕದ ವಾತಾವರಣ ಸೃಷ್ಟಿಯಾಗಿದೆ. ಈ ಬೆನ್ನಲ್ಲೇ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧಿಕಾರಿ(KSDL Officer) ಅಮೃತ್‌ ಶಿರಿಯೂರ್‌(Amruth Shiriyuru) ಎಂಬುವವರು ಕೈಯಲ್ಲಿ ಡೆತ್‌ನೋಟ್(Death Note) ಹಿಡಿದುಕೊಂಡು‌ ತಮ್ಮ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಪ್ರಕರಣ ಇಂದು ಬೆಳಕಿಗೆ ಬಂದಿದೆ. ಅಮೃತ್‌ ಶಿರಿಯೂರ್‌(40) ಎಂಬ ವ್ಯಕ್ತಿ ಕೆಎಸ್‌ಡಿಎಲ್‌ ಮೆಟಿರಿಯಲ್‌ ವಿಭಾಗದಲ್ಲಿ ಹಿರಿಯ ಅಧಿಕಾರಿಗಳು ವಿಪರೀತ ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇದರ ಜತೆಗೆ ತಂದೆಗೆ ಒಳ್ಳೆಯ ಮಗ ಆಗಲಿಲ್ಲ. ಹೆಂಡತಿಗೆ ಒಳ್ಳೆಯ ಗಂಡನೂ ಆಗಲಿಲ್ಲ ಎಂದು ಉಲ್ಲೇಖಿಸಿರುವ ಅಮೃತ್‌ ಶಿರಿಯೂರ್‌ ಅವರು, ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ. ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಮೃತ್ ಶಿರಿಯೂರ್ 2019ರಲ್ಲಿ ಎರಡನೇ ವಿವಾಹವಾಗಿದ್ದರು. ಎರಡನೇ ವಿವಾಹವಾಗಿದ್ದರೂ ಪತಿ-ಪತ್ನಿ ನಡುವೆ ಪ್ರತಿದಿನ ಜಗಳವಾಗುತ್ತಿತ್ತು. ಕೌಟುಂಬಿಕ ಕಲಹಗಳಿದ್ದವು. ಮೊದಲ ಮದುವೆಯ ಡಿವೋರ್ಸ್ ವಿಚಾರವಾಗಿಯೂ ಆಗಾಗ್ಗೆ ಜಗಳವಾಗುತ್ತಿತ್ತು ಎನ್ನಲಾಗಿದೆ. ಅಮೃತ್ ಬರೆದಿಟ್ಟಿರುವ ಡೆತ್ ನೋಟ್ ನಲ್ಲಿ ನಾನು ತಂದೆ-ತಾಯಿಗೆ ಒಳ್ಳೆಯ ಮಗನಾಗಲಿಲ್ಲ, ಪತ್ನಿಗೆ ಒಳ್ಳೆಯ ಪತಿಯೂ ಆಗಲಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಸಾವಿಗೆ ನಾನೇ ಕಾರಣ ಎಂದು ಬರೆದಿಟ್ಟಿದ್ದಾರೆ. ಅಮೃತ್ ಶಿರಿಯೂರ್ ತಮ್ಮ ಬಾಡಿಗೆ ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾರೆ. ಎರಡು ದಿನಗಳಿಂದ ಮನೆಯಿಂದ ಆಚೆ ಬಾರದ ಕಾರಣಕ್ಕೆ ಮನೆಯ ಮಾಲೀಕರು ಮನೆಗೆ ಹೋಗಿ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮಹಾಲಕ್ಷ್ಮೀ ಠಾಣೆ ಪೊಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ ಎಂದು ಮೂಲಗಳು. ಆತ್ಮಹತ್ಯೆಗೆ ಯತ್ನ; ನೇಣು ಕುಣಿಕೆ ತುಂಡಾಗಿ ಸಾವು ಉಡುಪಿ ಜಿಲ್ಲೆಯ ಮಣಿಪಾಲದ 80 ಬಡಗುಬೆಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ಮಿಲ್ರಾಯ್( 55) ಎಂಬ ವ್ಯಕ್ತಿ ಮನೆಯ ಮೊದಲ ಅಂತಸ್ತಿನ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ನೇಣು ಕುಣಿಕೆಯಲ್ಲಿ ನರಳಾಡುವ ವೇಳೆ ನಿಯಂತ್ರಣ ಸಿಗದೆ ಹಗ್ಗ ತುಂಡಾಗಿ 20 ಅಡಿ ಎತ್ತರದಿಂದ ಬಿದ್ದು ಮೃತಪಟ್ಟಿರುವುದು ತಿಳಿದು ಬಂದಿದೆ. ಇದರಿಂದ ಆತ್ಮಹತ್ಯೆ ಪ್ರಯತ್ನ ವಿಫಲವಾದರೂ ಸಾವು ಮಾತ್ರ ಆತನನ್ನು ಬಿಡಲೇ ಇಲ್ಲ.ನೇಣು ಕುಣಿಕೆ ಕಟ್ಟಾಗಿ ಈತ 20 ಅಡಿಗೂ ಹೆಚ್ಚು ಎತ್ತರದಿಂದ ಕೆಳಗೆ ಬಿದ್ದಿದ್ದಾನೆ. ರಭಸಕ್ಕೆ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೆ ಮೆಲ್ರಾಯ್‌ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಇನ್ನು ಈತ 2018ರಲ್ಲೇ ತನ್ನ ಮರಣದ ನಂತರ ಅಂಗಾಂಗ ದಾನ ಮಾಡುವುದಾಗಿಯೂ ನಿರ್ಧರಿಸಿದ್ದ ಎಂಬ ಮಾಹಿತಿಯಿದೆ. ಈ ಸುದ್ದಿಯನ್ನೂ ಓದಿ:Viral News: ಕೊರಿಯಾ ಪಾಪ್‌ ತಾರೆಯರ ಭೇಟಿಗೆ ಹಣ ಹೊಂದಿಸಲು ಖತರ್ನಾಕ್ ಬಾಲಕಿಯರು ಮಾಡಿದ್ದೇನು ಗೊತ್ತಾ? ಪೊಲೀಸರೇ ಶಾಕ್‌
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ