Kalaburagi News: ರಾಷ್ಟ್ರಧ್ವಜಕ್ಕೆ ಅಪಮಾನ-6 ಜನರ ವಿರುದ್ಧ FIR
Kalaburagi News:ಕಲ್ಬುರ್ಗಿ ಶೇಖ್ ರೋಜಾ ದರ್ಗಾದ ಆವರಣದಲ್ಲಿ ಈ ಒಂದು ಘಟನೆ ನಡೆದಿದ್ದು, ನಿನ್ನೆ ರಾಷ್ಟ್ರಧ್ವಜದ ಮೇಲೆ ಹಸಿರು ಬಣ್ಣದ ಮುಸ್ಲಿಂ ಬಾವುಟವನ್ನು ಧ್ವಜಾರೋಹಣ ಮಾಡಿದ್ದ ಆರೋಪ ಕೇಳಿ ಬಂದಿತ್ತು.
Rakshita Karkera
January 12, 2025
ಕಲಬುರ್ಗಿ: ಶೇಖ್ ದರ್ಗಾದಲ್ಲಿ ನಿನ್ನೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬರೋಬ್ಬರಿ 6 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ(Kalaburagi News). ಕಲ್ಬುರ್ಗಿಯ ಚೌಕ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ 6 ಜನರ ವಿರುದ್ಧ ಇದೀಗ FIR ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ಮೊಹಮ್ಮದ್ ಅಫ್ಜಲ್ ಉದ್ದೀನ್, ಜುನೈದಿ ಮೊಹಮ್ಮದ್, ಕಿವ ಮೋದ್ದೀನ್ ಜುನೈದಿ, ತಾಹಿರ್ ಅಲ್ಲಾಹುದ್ದೀನ್ ಜುನೈದಿ, ಫಕ್ರುದ್ದೀನ್ ಮಣಿಯಾಲ್, ಹಾಗೂ ರಿಜ್ವಾನ್ ಮೌಲಾನ್ ಅಹಮದ್ ಎಂದು ಗುರುತಿಸಲಾಗಿದೆ.
ಘಟನೆ ವಿವರ:
ಕಲ್ಬುರ್ಗಿ ಶೇಖ್ ರೋಜಾ ದರ್ಗಾದ ಆವರಣದಲ್ಲಿ ಈ ಒಂದು ಘಟನೆ ನಡೆದಿದ್ದು, ನಿನ್ನೆ ರಾಷ್ಟ್ರಧ್ವಜದ ಮೇಲೆ ಹಸಿರು ಬಣ್ಣದ ಮುಸ್ಲಿಂ ಬಾವುಟವನ್ನು ಧ್ವಜಾರೋಹಣ ಮಾಡಿದ್ದ ಆರೋಪ ಕೇಳಿ ಬಂದಿತ್ತು. ನಿನ್ನೆ ರಿಜ್ವಾನ್ ಹುಟ್ಟುಹಬ್ಬದ ವೇಳೆ ರಾಷ್ಟ್ರಧ್ವಜದ ಕೆಳಗೆ ಹಸಿರು ಬಣ್ಣದ ಧ್ವಜ ಹಾರಾಟ ಮಾಡಿ ಅವಮಾನ ಮಾಡಿದ್ದರು ಎನ್ನಲಾಗಿದೆ. ರಾಷ್ಟ್ರಧ್ವಜ ಇಟ್ಟು ಅಪಮಾನ ಮಾಡಿದ್ದಾರೆ ಎಂದು ದೂರಲಾಗಿದೆ.
ಘಟನೆಯನ್ನು ಖಂಡಿಸಿರುವ ಕೆಲ ಮುಸ್ಲಿಂ ಮುಖಂಡರೇ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಮತ್ತೊಂದೆಡೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವವರಿಗೆ ಶಿಕ್ಷೆ ನೀಡುವಂತೆ ಹಿಂದು ಜಾಗೃತಿ ಸೇನೆ ಆಗ್ರಹಿಸಿದೆ. ಈ ಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನು ಕೆಲ ಮುಸ್ಲಿಂ ಮುಖಂಡರೂ ಖಂಡಿಸಿ ಚೌಕ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇನ್ನು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹಿಂದು ಜಾಗೃತಿ ಸೇನೆ ಆಗ್ರಹಿಸಿದೆ.
ಈ ಸುದ್ದಿಯನ್ನೂ ಓದಿ: ರಾಷ್ಟ್ರಧ್ವಜವನ್ನು ಆರ್ ಎಸ್ ಎಸ್ ನವರು ಒಪ್ಪಲ್ಲ
ಕೆಲವು ತಿಂಗಳ ಹಿಂದೆ ಇಂತಹದ್ದೇ ಒಂದು ಘಟನೆ ವರದಿಯಾಗಿತ್ತು. ರಾಷ್ಟ್ರಧ್ವಜಕ್ಕೆ (National Flag) ಅಪಮಾನ ಮಾಡಿದ ಯುವಕನನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರ ಠಾಣೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ ಘಟನೆ ನಡೆದಿತ್ತು. ಶಿರಸಿ ನಗರದ ರಾಮನ್ ಬೈಲ್‌ನ ಉಮರ್ ಫಾರೂಕ್ (38 ) ಬಂಧಿತ ಯುವಕನಾಗಿದ್ದ. ಈದ್ ಮಿಲಾದ್ ಹಬ್ಬದಂದು ರಾಷ್ಟ್ರಧ್ವಜದಲ್ಲಿದ್ದ ಅಶೋಕ ಚಕ್ರ ತೆಗೆದು ಮದೀನ ಗುಂಬಜಿನ ಚಿತ್ರ ಅಳವಡಿಸಿ ಮುಸ್ಲಿಂ (Muslim) ಧರ್ಮದ ಘೋಷಣೆಯ ಅಕ್ಷರದಲ್ಲಿ ಬರೆದು ಮನೆಯ ಮೇಲೆ ಸಾರ್ವಜನಿಕರಿಗೆ ಕಾಣುವಂತೆ ಹಾರಿಸಿದ್ದ.