Kodagu bandh: ಸೇನಾನಿಗಳಿಗೆ ಅಪಮಾನ ಖಂಡಿಸಿ ಇಂದು ಕೊಡಗು ಜಿಲ್ಲೆ ಬಂದ್‌ಗೆ ಕರೆ
Kodagu bandh: ಸೇನಾನಿಗಳಿಗೆ ಅಪಮಾನ ಖಂಡಿಸಿ ಇಂದು ಕೊಡಗು ಜಿಲ್ಲೆ ಬಂದ್‌ಗೆ ಕರೆ
ಹರೀಶ್ ಕೇರ
December 12, 2024
ಮಡಿಕೇರಿ: ಕೊಡಗು (Coorg news) ಮೂಲದ ವೀರ ಸೇನಾನಿಗಳಿಗೆ ಸೋಶಿಯಲ್ ಮೀಡಿಯಾದಲ್ಲಿ (Social media) ಅಪಮಾನ ಮಾಡಿರುವುದನ್ನು ಖಂಡಿಸಿ ಸರ್ವ ಜನಾಂಗಗಳ ಒಕ್ಕೂಟದಿಂದ ಡಿಸೆಂಬರ್ 12ರಂದು ಕೊಡಗು ಜಿಲ್ಲೆ ಬಂದ್‌ಗೆ (Kodagu bandh) ಕರೆ ನೀಡಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರಥಮ ಮಹಾ ದಂಡನಾಯಕ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರನ್ನು ಅಪಮಾನಿಸಿ ಪೋಸ್ಟ್ ಮಾಡಿದ್ದ ವ್ಯಕ್ತಿಗೆ ಕೇವಲ ಆರು ತಿಂಗಳ ಕಾಲ ಬಾರ್ ಕೌನ್ಸಿಲ್‌ನಿಂದ ಹೊರಗಿಡಲಾಗಿದೆ. ಆದರೆ ಆ ವ್ಯಕ್ತಿಯನ್ನು ಕನಿಷ್ಠ ಆರು ತಿಂಗಳ ಕಾಲವಾದರೂ ಜಿಲ್ಲೆಯಿಂದ ಗಡಿಪಾರು ಮಾಡುವಂತೆ ಆಗ್ರಹಿಸಿ ಗುರುವಾರ ಸರ್ವಜನಾಂಗದ ಒಕ್ಕೂಟ ಜಿಲ್ಲಾ ಬಂದ್‌ಗೆ ಕರೆ ನೀಡಿದೆ.
ಕೊಡಗು ಜಿಲ್ಲೆಯ ಅನುದಾನ ರಹಿತ ಶಾಲೆಗಳಿಗೆ ಇಂದು ರಜೆ ಘೋಷಣೆ ಮಾಡಲಾಗಿದೆ. ವಿವಿಧ ಸಂಘ ಸಂಸ್ಥೆಗಳು ಕೊಡಗು ಜಿಲ್ಲಾ ಬಂದ್ ಗೆ ಬೆಂಬಲ ನೀಡಿವೆ. ಇಂದು ಬೆಳಿಗ್ಗೆ 6 ಗಂಟೆಯಿಂದ ಮಧಾಹ್ನ 12 ಗಂಟೆಯವರೆಗೆ ಜಿಲ್ಲಾ ಬಂದ್ ಗೆ ಕರೆ ನೀಡಲಾಗಿದೆ.
ಇದನ್ನೂ ಓದಿ: SM Krishna Death: ಪಂಚಭೂತಗಳಲ್ಲಿ ಲೀನರಾದ ಜಂಟಲ್‌ಮ್ಯಾನ್ ರಾಜಕಾರಣಿ ಎಸ್ಎಂ ಕೃಷ್ಣ