Koppal News: ತುಂಗಭದ್ರಾ ನದಿಯಲ್ಲಿ ಮುಳುಗುತ್ತಿದ್ದ ಯುವಕನನ್ನು ರಕ್ಷಿಸಿದ ಇಸ್ರೇಲ್ ಪ್ರವಾಸಿಗ
Koppal News: ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಮುನಿರಾಬಾದ್ ಮೂಲದ ಯುವಕ ನದಿಯಲ್ಲಿ ಈಜಾಡುತ್ತಾ ಅಪಾಯಕ್ಕೆ ಸಿಲುಕಿದ್ದ. ನೀರಿನಲ್ಲಿ ಮುಳುಗುತ್ತಿ ಆತನನ್ನು ಹತ್ತಿರದಲ್ಲೇ ಇದ್ದ ಇಸ್ರೇಲ್ ಪ್ರವಾಸಿಗರೊಬ್ಬರು ರಕ್ಷಣೆ ಮಾಡಿದ್ದಾರೆ.
ಕೊಪ್ಪಳ: ತುಂಗಭದ್ರಾ ನದಿಯಲ್ಲಿ ಮುಳುಗುತ್ತಿದ್ದ ಯುವಕನನ್ನು ಪ್ರಾಣದ ಹಂಗು ತೊರೆದು ಇಸ್ರೇಲ್ ಪ್ರವಾಸಿಗ (Israeli tourist ) ರಕ್ಷಿಸಿರುವ ಘಟನೆ ಕೊಪ್ಪಳದ (Koppal News) ಸಾಣಾಪುರದ ಐಬಿ ಬಳಿ ನಡೆದಿದೆ.
ಸ್ನೇಹಿತರೊಂದಿಗೆ ಪ್ರವಾಸಕ್ಕೆ ಬಂದಿದ್ದ ಮುನಿರಾಬಾದ್ ಮೂಲದ ಯುವಕ ನದಿಯಲ್ಕಿ ಈಜಾಡುತ್ತಾ ಅಪಾಯಕ್ಕೆ ಸಿಲುಕಿದ್ದ. ನೀರಿನಲ್ಲಿ ಮುಳುಗುತ್ತಿದ್ದಾಗ ಸಹಾಯಕ್ಕಾಗಿ ಯುವಕ ಕೂಗಿದ್ದಾನೆ. ಈ ವೇಳೆ ಇಸ್ರೇಲ್ ಪ್ರವಾಸಿಗ ಅಬ್ರಹಾಂ ಫ್ರೈಡಮ್ಯಾನ್ ಹಾಗೂ ಸ್ಥಳೀಯ ಮೀನುಗಾರ ಮುರಳಿ ಯುವಕನ ರಕ್ಷಣೆ ಮಾಡಿದ್ದಾರೆ.
ಹಂಪಿ-ಆನೆಗೊಂದಿಯ ಪ್ರವಾಸಕ್ಕೆ ಇಸ್ರೇಲ್ ಪ್ರವಾಸಿಗ ಬಂದಿದ್ದರು. ಯುವಕ ನದಿಯಲ್ಲಿ ಮುಳುಗುತ್ತಿದ್ದುದನ್ನು ಕಂಡು, ಕಾಪಾಡಲು ತಕ್ಷಣವೇ ನದಿಗೆ ಧುಮುಕಿದ್ದಾರೆ. ನದಿಯಲ್ಲಿ ತೆಪ್ಪ ಹಾಕುವ ಕೆಲಸ ಮಾಡುವ ಮುರಳಿ ಎಂಬಾತನ ನೆರವಿನಿಂದ ಯುವಕನನ್ನು ಇಸ್ರೇಲ್ ಪ್ರವಾಸಿಗ ರಕ್ಷಣೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ
ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ತೋಟದ ಮನೆ; 10 ಲಕ್ಷ ರೂ. ಮೌಲ್ಯದ ಹತ್ತಿ ತೊಗರಿ ಭಸ್ಮ
ಕಲಬುರಗಿ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ತೋಟದ ಮನೆಯೊಂದು ಬೆಂಕಿಗೆ ಧಗಧಗ ಹೊತ್ತಿ ಉರಿದ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನಲ್ಲಿ ಬುಧವಾರ ಸಾಯಂಕಾಲ ನಡೆದಿದೆ.
ಯಡ್ರಾಮಿ ತಾಲೂಕಿನ ಬಿರಾಳ್ ಗ್ರಾಮದ ಈರಣ್ಣ ಭಜಂತ್ರಿ ಎಂಬ ರೈತರಿಗೆ ಸೇರಿದ ತೋಟದ ಮನೆಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ ಅಪಾರ ಪ್ರಮಾಣದ ದವಸ ಧಾನ್ಯ ಹಾಳಾಗಿದೆ ಎಂದು ತಿಳಿದುಬಂದಿದೆ.
ತೋಟದ ಮನೆಯಲ್ಲಿದ್ದ 10 ಲಕ್ಷ ರೂ. ಮೌಲ್ಯದ ಹತ್ತಿ, ತೊಗರಿ ಬೆಂಕಿಗೆ ಆಹುತಿಯಾಗಿದೆ. ಇದಲ್ಲದೆ, ಮನೆಯಲ್ಲಿ ಇಟ್ಟಿದ್ದ ಇತರೆ ವಸ್ತುಗಳು ಸಹ ಸುಟ್ಟು ಕರಕಲಾಗಿದೆ ಎಂದು ವರದಿಯಾಗಿದೆ. ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ
ಬೀದರ್: ಎಟಿಎಂ ದರೋಡೆ ವೇಳೆ ಇಬ್ಬರು ಭದ್ರತಾ ಸಿಬ್ಬಂದಿ (Bidar ATM Robbery), ದುಷ್ಕರ್ಮಿಗಳ ಗುಂಡಿನ ದಾಳಿಗೆ ಬಲಿಯಾಗಿರುವುದು ಅತ್ಯಂತ ದುಃಖಕರ ವಿಷಯ. ಈ ಘಟನೆ ಸಂಬಂಧ ತಕ್ಷಣವೇ ಗೃಹ ಸಚಿವರು, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಚರ್ಚಿಸಿ, ಆರೋಪಿಗಳನ್ನು ಶೀಘ್ರ ಬಂಧಿಸಲು ಮತ್ತು ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡಲು ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ಭದ್ರತೆಯಲ್ಲಿ ಏನೆಲ್ಲಾ ಲೋಪವಾಗಿದೆ ಎಂಬ ಬಗ್ಗೆ ಸಂಪೂರ್ಣ ತನಿಖೆ ನಡೆಸಲಾಗುವುದು. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಮೃತರ ಅವರ ಕುಟುಂಬಕ್ಕೆ ಅಗತ್ಯ ಸಹಾಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Police Firing: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪಾತಕಿಯ ಕಾಲಿಗೆ ಗುಂಡು