Kannada Sahitya Sammelana: ಸಮ್ಮೇಳನದಲ್ಲಿ ಬಾಡೂಟ ಬಡಿದಾಟ; ವಶಕ್ಕೆ ಪಡೆದ ಪೊಲೀಸರು, ಪ್ರಗತಿಪರರ ಆಕ್ರೋಶ
Kannada Sahitya Sammelana: ಸರ್ಕಾರ ಬಾಡೂಟ ನೀಡದಿದ್ದರೆ ಕಾರ್ಯಕ್ರಮದಲ್ಲಿ ನಾವೇ ಬಾಡೂಟ ವ್ಯವಸ್ಥೆ ಮಾಡುತ್ತೇವೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿತ್ತು. ಅಲ್ಲದೇ ಸಮ್ಮೇಳನಕ್ಕೆ ಬರುವವರಿಗೆ ಬಾಡೂಟ ಬಡಿಸಲು ‘ಮನೆಗೊಂದು ಕೋಳಿ, ಊರಿಗೊಂದು ಕುರಿ’ ಸಂಗ್ರಹ ಅಭಿಯಾನ ಕೈಗೊಂಡಿತ್ತು.
Prabhakara R
December 22, 2024
ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ (Kannada Sahitya Sammelana) ಬಾಡೂಟ ವಿತರಣೆಗೆ ಪಟ್ಟು ಹಿಡಿದಿದ್ದ ಪ್ರಗತಿಪರ ಸಂಘಟನೆಗಳು, ಸರ್ಕಾರದಿಂದ ಮಾಂಸಾಹಾರ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಸಂಘಟನೆಯಿಂದಲೇ ಬಾಡೂಟ ಮಾಡಿಸಿ ಭಾನುವಾರ ವಿತರಿಸಲಾಗಿದೆ. ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಬಾಡೂಟ ವಶಕ್ಕೆ ಪಡೆದಿದ್ದಾರೆ.
ಸರ್ಕಾರ ಬಾಡೂಟ ನೀಡದಿದ್ದರೆ ಕಾರ್ಯಕ್ರಮದಲ್ಲಿ ನಾವೇ ಬಾಡೂಟ ವ್ಯವಸ್ಥೆ ಮಾಡುತ್ತೇವೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಎಚ್ಚರಿಕೆ ನೀಡಿತ್ತು. ಅಲ್ಲದೇ ಸಮ್ಮೇಳನಕ್ಕೆ ಬರುವವರಿಗೆ ಬಾಡೂಟ ಬಡಿಸಲು ‘ಮನೆಗೊಂದು ಕೋಳಿ, ಊರಿಗೊಂದು ಕುರಿ’ ಸಂಗ್ರಹ ಅಭಿಯಾನ ಕೈಗೊಂಡಿತ್ತು. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಊಟ ವಿತರಣೆ ಮಾಡುತ್ತಿದ್ದ ಸ್ಥಳದಲ್ಲಿ ಕೋಳಿಸಾರು, ಅನ್ನ, ಮೊಟ್ಟೆ, ಕಬಾಬ್ ವಿತರಿಸಲಾಗಿದೆ. ಈ ವೇಳೆ ಅವರನ್ನು ತಡೆಯಲು ಮುಂದಾದ ಪೊಲೀಸರ ಜತೆ ಪ್ರಗತಿಪರರ ವಾಗ್ವಾದ ನಡೆಸಿದರು. ಆದರೆ, ಪೊಲೀಸರು ಬಾಡೂಟ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇವತ್ತು ಸಾಂಕೇತಿಕವಾಗಿ ಬಾಡೂಟ ಹಾಕಿದ್ದೇವೆ. ಸರ್ಕಾರ ಅನುಮತಿ ನೀಡಿದ್ದರೆ 5 ಲಕ್ಷ ಜನಕ್ಕೆ ಬೇಕಾದರೂ ಬಾಡೂಟ ವ್ಯವಸ್ಥೆ ಮಾಡುತ್ತಿದ್ದೆವು. ಕನ್ನಡ ತಾಯಿ ಭುವನೇಶ್ವರಿ ಎದುರು ಬಾಡು ತಿನ್ನೋರು ಹಾಗೂ ತರಕಾರಿ ತಿನ್ನೋರು ಎಲ್ಲರೂ ಒಂದೇ. ನಾವು 500 ಜನಕ್ಕೆ ಮಾಂಸಾಹಾರ ತಂದಿದ್ದೆವು. ನಮ್ಮ ಸಾಮರ್ಥ್ಯ ಇರೋದು ಅಷ್ಟೇ. ಆಹಾರದಲ್ಲಿ ಇರುವ ಅಸ್ಪೃಶ್ಯತೆ ಹೋಗಲಾಡಿಸಲು ಬಾಡೂಟ ವಿತರಣೆ ಮಾಡಿದ್ದೇವೆ ಎಂದು ಪ್ರಗತಿಪರ ಸಂಘಟನೆ ಮುಖಂಡರೊಬ್ಬರು ಹೇಳಿದ್ದಾರೆ.
Kannada Sahitya Sammelana: ಬಳ್ಳಾರಿಯಲ್ಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ; ಕಸಾಪ ಸಭೆಯಲ್ಲಿ ತೀರ್ಮಾನ
ಮರ್ಯಾದಾ ಹತ್ಯೆ ಪರಶುರಾಮ ಸಂಸ್ಕೃತಿ: ತಾರಿಣಿ ಶುಭದಾಯಿನಿ
ಕನ್ನಡ ಸಾಹಿತ್ಯ ಸಮ್ಮೇಳನ ವೇದಿಕೆ, ಮಂಡ್ಯ: ತಾಯಿಯ ಮನಸ್ಸು ವಿಚಲಿತವಾಗಿದೆ, ಆಕೆಯ ತಲೆ ಕಡಿ ಎಂದು ತಂದೆ ಹೇಳಿದ ಮಾತನ್ನು ಪ್ರಶ್ನಿಸದೆ, ರೇಣುಕೆಯ ಮಾತನ್ನೂ ಕೇಳದೆ ಆಕೆಯ ತಲೆಕಡಿದ ಪರಶುರಾಮ ಸಂಸ್ಕೃತಿಯೇ ಮರ್ಯಾದಾ ಹತ್ಯೆಯ ಸಂಸ್ಕೃತಿಯಾಗಿದೆ ಎಂದು ವಿಮರ್ಶಕಿ ಡಾ.ತಾರಿಣಿ ಶುಭದಾಯಿನಿ ನುಡಿದರು. ಅವರು ಸಾಹಿತ್ಯ ಸಮ್ಮೇಳನದ (Kannada Sahitya Sammelana) ಮೂರನೇ ದಿನವಾದ ಭಾನುವಾರ ನಡೆದ ʼಸ್ತ್ರೀ ಎಂದರೆ ಅಷ್ಟೇ ಸಾಕೆ?ʼ ಗೋಷ್ಠಿಯಲ್ಲಿ ʼವಿವಾಹ ಮತ್ತು ಮರ್ಯಾದಾ ಹತ್ಯೆʼ ವಿಚಾರದ ಕುರಿತು ಮಾತನಾಡಿದರು.
ಪರಶುರಾಮ ಸಂಸ್ಕೃತಿ ಇಂದು ಪುರುಷ ಪ್ರಾಧಾನ್ಯವನ್ನು ಮುನ್ನೆಲೆಗೆ ತಂದಿದ್ದು, ಜಗತ್ತಿನ ಎಲ್ಲ ಕಡೆಗಳಲ್ಲೂ ಹೆಚ್ಚಿದೆ. ಪಿತೃಪ್ರಧಾನ ಸಂಸ್ಕೃತಿ ಇಂದು ಪರ್ಯಾಯ ಅಧಿಕಾರ ಕೇಂದ್ರವಾಗಿದೆ. ಆಧುನಿಕತೆಗೆ ತೆರೆದುಕೊಂಡಂತೆ ಹೆಣ್ಣುಮಕ್ಕಳು ಅನ್ಯರ ಜೊತೆಗೆ ಮದುವೆ ಮಾಡಿಕೊಳ್ಳಬಹುದು ಎಂಬ ಆತಂಕ ಸಮುದಾಯಗಳನ್ನು ಕಂಗೆಡಿಸುತ್ತಿದೆ. ಇದಕ್ಕೆ ಮರ್ಯಾದಾ ಹತ್ಯೆಯ ಮೂಲಕ ʼಶುದ್ಧೀಕರಣʼ ಮಾಡಿಕೊಳ್ಳುತ್ತಿವೆ. ಪಿತೃ ಪ್ರಧಾನ ಸಮಾಜಗಳಲ್ಲಿ ಮರ್ಯಾದಾ ಹತ್ಯೆ ಎಂಬುದು ಹೆಣ್ಣಿಗೇ ಸೀಮಿತವಾಗಿದೆ. ಹೆಣ್ಣು ತನ್ನ ಇಚ್ಛೆಯನ್ನು ಈಡೇರಿಸಿಕೊಂಡಾಗ ಅದನ್ನು ವಿರೋಧಿಸುವ ಶಕ್ತಿಗಳು ಹೆಣ್ಣಿನ ಮೇಲಿನ ತನ್ನ ಅಧಿಕಾರವನ್ನು ಸ್ಥಾಪಿಸಿಕೊಳ್ಳಲು ಮರ್ಯಾದಾ ಹತ್ಯೆಯನ್ನು ಬಳಸುತ್ತಿವೆ.
ಸ್ತ್ರೀ ಸ್ವಾತಂತ್ರ್ಯದ ಮೊದಲ ಚಳವಳಿಗಳು ಸಮಾನತೆಯನ್ನು ಪ್ರತಿಪಾದಿಸಿದ್ದವು. ಆದರೆ ಇಂದು ಸಮಾನತೆಯ ಹಕ್ಕಿಗಿಂತಲೂ ಸ್ತ್ರೀ ಬದುಕುವ ಹಕ್ಕನ್ನು ಮೊದಲು ಪಡೆದುಕೊಳ್ಳಬೇಕಾಗಿದೆ. ಮರ್ಯಾದಾ ಹತ್ಯೆಗಳ ಮೂಲಕ ಆಕೆಯ ಅಸ್ತಿತ್ವಕ್ಕೇ ಧಕ್ಕೆ ಬಂದಿದೆ. ಸಾಂವಿಧಾನಿಕ ಮೌಲ್ಯಗಳ ಆಚರಣೆ ಹೆಚ್ಚಾಗಬೇಕು, ಪ್ರಜಾಸತ್ತಾತ್ಮಕ ಸಮಾಜವನ್ನು ಮುನ್ನೆಲೆಗೆ ತರಬೇಕು ಎಂದರು.