Kannada Sahitya Sammelana: ಕವಿಗೋಷ್ಠಿಯಲ್ಲಿ ಮಂಡ್ಯದ ಸಿಹಿಯೂ ಅಸಮಾನತೆಯ ಕಹಿಯೂ

Kannada Sahitya Sammelana: ಮಂಡ್ಯದ ಸಿಹಿ ಸಂಸ್ಕೃತಿ, ಭಾವೈಕ್ಯತೆಯ ಸಂದೇಶ, ನಾಡಿನ ಅನೇಕ ಕಡೆಯ ಚಿತ್ರಣಗಳು, ಸ್ತ್ರೀ ಅಸಮಾನತೆ, ತುಳಿತಕ್ಕೊಳಗಾದವರ ಅಹವಾಲು ಎಲ್ಲವನ್ನೂ ಶನಿವಾರ ನಡೆದ ಕವಿಗೋಷ್ಠಿ ಒಳಗೊಂಡಿತ್ತು.

Profile Prabhakara R December 21, 2024
ಮಂಡ್ಯ: ಕನ್ನಡ ಸಾಹಿತ್ಯ ಸಮ್ಮೇಳನದ (Kannada Sahitya Sammelana) ಎರಡನೇ ದಿನವಾದ ಶನಿವಾರ ಸಮಾನಾಂತರ ವೇದಿಕೆ 2ರಲ್ಲಿ ನಡೆದ ಕವಿಗೋಷ್ಠಿ ಮಂಡ್ಯದ ಸಿಹಿ ಸಂಸ್ಕೃತಿ, ಭಾವೈಕ್ಯತೆಯ ಸಂದೇಶ, ನಾಡಿನ ಅನೇಕ ಕಡೆಯ ಚಿತ್ರಣಗಳು, ಸ್ತ್ರೀ ಅಸಮಾನತೆ, ತುಳಿತಕ್ಕೊಳಗಾದವರ ಅಹವಾಲು ಎಲ್ಲವನ್ನೂ ಒಳಗೊಂಡಿತ್ತು. ಬಾಡೂಟವೂ ಪರೋಕ್ಷವಾಗಿ ಬಂತು. ಹಚ್ಚಿಟ್ಟ ದೀಪಗಳ ಮುಂದೆ ದುವಾ ಮಾಡುವ ಕೈಗಳು ಬೇಕು ಎಂದ ಶರೀಫ್‌ ಹಸಮಕಲ್‌, ನಾಡ ಗಡಿ ದಾಟಿ ಬಂದರೂ ಎದೆಗೂಡಿಗೆ ಸೇರಿಕೊಳ್ಳಲಿಲ್ಲ ಎಂದು ʼಪಾರಿವಾಳದ ಪಾಠʼ ತಿಳಿಸಿದರು. ಸಂತೋಷ ಎಸ್‌ ಕರಹರಿ ಅವರ ಕವನ ಮಂಗಳೂರಿನ ಮೀನಿನಿಂದ ಹಿಡಿದು ರಾಮನಗರ ರೇಷ್ಮೆಯವರೆಗೆ ಎಲ್ಲವನ್ನೂ ಒಳಗೊಂಡು ಜಿಐ ಟ್ಯಾಗ್‌ ಮ್ಯಾಪ್‌ನ ಹಾಗಿತ್ತು. ನಾಗೇಶ ನಾಯಕ ಅವರು ತಾನು ಎದುರಿಗೆ ಸಿಕ್ಕಾಗ ನಗದ ಮಂದಿ ತಾನು ಸತ್ತಾಗ ಫೇಸ್‌ಬುಕ್‌ನಲ್ಲಿ ಫೋಟೊ ಹಾಕಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಗಿ ಕನ್ನಡಿ ಹಿಡಿದು ಎದುರಿಗೆ ಸಿಕ್ಕಾಗಲೇ ನಾಲ್ಕು ಮಾತಾಡಿಬಿಡಿ ಎಂದು ಸಂದೇಶ ನೀಡಿದರು. ಕಬ್ಬಿನ ರಸವನ್ನು ಹಿಂಡಿ ಸೋಸಿ ಸವಿಬೆಲ್ಲ ರೂಪಿಸಿದಂತೆ ಕವಿತೆ ಇರಬೇಕು ಎಂದು ವನಜಾ ಸುರೇಶ್‌ ಹೇಳಿದರೆ, ಮೂಲದಲ್ಲಿ ಮನುಷ್ಯ ಒಂದೇ ಆದರೂ ಆತನಿಂದ ಜಾತಿ ಧರ್ಮಗಳನ್ನು ಮೀರಲಾಗುತ್ತಿಲ್ಲ ಎಂದು ರವೀಂದ್ರ ಸಿಂಗ್‌ ನುಡಿದರು. ಈ ಸುದ್ದಿಯನ್ನೂ ಓದಿ | Kannada Sahitya sammelana: ಕನ್ನಡಕ್ಕೆ ಡಿಜಿಟಲ್‌ ಪ್ರಾಧಿಕಾರ ಬೇಕು; ವಿದ್ಯುನ್ಮಾನ ಗೋಷ್ಠಿಯಲ್ಲಿ ಹಕ್ಕೊತ್ತಾಯ ಬಾಬು ಕೊರಗ ಅವರು ವಿಭಿನ್ನವಾಗಿ ಅಳಿವಿನಂಚಿನಲ್ಲಿನ ಕೊರಗ ಭಾಷೆಯ ಕವಿತೆ ವಾಚಿಸಿದರು. ಸೋಮಲಿಂಗಪ್ಪ ಅವರು ಮನುಷ್ಯ ಮನುಷ್ಯನಾಗಲಿಕ್ಕೆ ಮಠಮಂದಿರ ಮಸೀದಿ ಬೇಕೇ ಬೇಕೆಂದಿಲ್ಲ ಎಂದು ಉದ್ಗರಿಸಿದರು. ರಮ್ಯಾ ಕೆ.ಜಿ ಅವರು ತುಳಿತಕ್ಕೊಳಗಾದ ಸಮುದಾಯದ ನೋವಿನ ಧ್ವನಿಯನ್ನು ತಮ್ಮ ಕವಿತೆಯಲ್ಲಿ ದಾಟಿಸಿ, "ನನ್ನಿಷ್ಟದ ಕೂಳಿಗೂ ಹೊಲಸಿನ ಹೆಸರು ಹಚ್ಚುತ್ತೀರೇಕೆ" ಎಂದು ಪರೋಕ್ಷವಾಗಿ ಬಾಡೂಟದ ವಿವಾದವನ್ನು ಪ್ರಸ್ತಾಪಿಸಿದರು. ಗಂಗಾಧರ ಪತ್ತಾರ ಅವರು ತಾವು ಬರೆದ 400 ಚೌಪದಿಗಳ ಖಂಡಕಾವ್ಯವನ್ನು ವಾಚಿಸಲು ಆರಂಭಿಸಿದಾಗ ಕೇಳುಗರ ಎದೆ ಧಸಕ್ಕೆಂದಿತು. ಪುಣ್ಯವಶಾತ್‌ ಅವರು ಅದನ್ನು ಆಯ್ದ ಸಾಲುಗಳಿಗೆ ನಿಲ್ಲಿಸಿದರು. ಸುಬ್ರಾಯ ಬಿದ್ರಮನೆ ಅವರು ಪುರಾಣಕಾಲದಿಂದಲೂ ನಡೆದುಬಂದ ಹೆಣ್ಣಿನ ಶೋಷಣೆಯನ್ನು ಪ್ರತಿಬಿಂಬಿಸಿ, ಅವಳು ಅಬಲೆಯಲ್ಲ ಸಬಲೆ, ಅವಳು ಕತ್ತಲೆಯಲ್ಲಿ ಹಚ್ಚಿಟ್ಟ ದೀಪ ಎಂದರು. ಕವಿ, ಪೊಲೀಸ್‌ ಅಧಿಕಾರಿ ರವಿಕಾಂತೇಗೌಡ ಬೆಸಗರಹಳ್ಳಿ ಅವರು ಆಶಯ ಭಾಷಣ ಮಾಡಿದರು. ಕವಿ ಎಂದೂ ಅಧಿಕಾರಸ್ಥರ ಮುಂದೆ ಕೈಚಾಚಬಾರದು ಎಂಬುದನ್ನು ಸೂಚ್ಯವಾಗಿ ತಿಳಿಸಿದರು. ನಿರೂಪಕರು ಅವರನ್ನು "ಪೊಲೀಸ್‌ ಅಧಿಕಾರಿ ಆಗಿದ್ದರೂ ಉತ್ತಮ ಕವಿ" ಎಂದು ಹೇಳಿದ್ದು ಮಾತ್ರ ತಮಾಷೆಯಾಗಿತ್ತು. ಪ್ರದೀಪ್‌ಕುಮಾರ್‌ ಹೆಬ್ರಿ ಅವರು ಅಧ್ಯಕ್ಷತೆ ವಹಿಸಿ ಕವನ ವಾಚಿಸಿದರು. ಈ ಸುದ್ದಿಯನ್ನೂ ಓದಿ | Kannada Sahitya Sammelana: ವಿಶ್ವವಾಣಿ ಮಳಿಗೆಯಲ್ಲಿ ವಿಶ್ವೇಶ್ವರ ಭಟ್‌ ಸೆಲ್ಫಿ, ಆಟೋಗ್ರಾಫ್‌ಗೆ ಡಿಮ್ಯಾಂಡ್‌
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ