Leopard Captured: ಸಾಲಿಗ್ರಾಮ ಭಾಗದ ಜನರ ನಿದ್ದೆಗೆಡಿಸಿದ್ದ ಚಿರತೆ ಸೆರೆ; ನಾಗರಹೊಳೆ ಅರಣ್ಯಕ್ಕೆ ಶಿಫ್ಟ್
Leopard Captured: ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಮಾಳನಾಯನಹಳ್ಳಿ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 2 ವರ್ಷದ ಚಿರತೆ ಬಿದ್ದಿದೆ.
Prabhakara R
January 10, 2025
ಮೈಸೂರು: ಕೆಲ ದಿನಗಳಿಂದ ಚುಂಚನಕಟ್ಟೆ ಮಿರ್ಲೆ ಭಾಗದಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ. ಸಾಲಿಗ್ರಾಮ ತಾಲೂಕಿನ ಮಾಳನಾಯನಹಳ್ಳಿ ಬಳಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿಗೆ 2 ವರ್ಷದ ಚಿರತೆ (Leopard Captured) ಬಿದ್ದಿದ್ದು, ಅದನ್ನು ನಾಗರಹೊಳೆ ಅರಣ್ಯಕ್ಕೆ ಶಿಫ್ಟ್ ಮಾಡಲಾಗಿದೆ.
ಚಿರತೆ ಹಾವಳಿ; ಮೈಸೂರು ಇನ್ಫೋಸಿಸ್ ಟ್ರೈನಿ ಉದ್ಯೋಗಿಗಳಿಗೆ ಜ.26ರವರೆಗೆ ರಜೆ
ಮೈಸೂರು: ನಗರದ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರೆದಿದ್ದು, ಸುರಕ್ಷತಾ ಕ್ರಮವಾಗಿ ಕಂಪನಿಯ ಟ್ರೈನಿ ಉದ್ಯೋಗಿಗಳಿಗೆ ಜನವರಿ 26ರವರೆಗೆ ರಜೆ ಘೋಷಣೆ ಮಾಡಲಾಗಿದೆ.
ಕಳೆದ 10 ದಿನಗಳ ಹಿಂದೆ ಕಾಣಿಸಿಕೊಂಡಿದ್ದ ಚಿರತೆ, ಬೋನಿಗೆ ಬೀಳದೆ ಅರಣ್ಯ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸುತ್ತಿದೆ. ಕ್ಯಾಮೆರಾದಲ್ಲಿ ಚಿರತೆಯ ಚಲನವಲನ ಸೆರೆಯಾಗಿದೆ. ಆದರೆ ಕಾರ್ಯಾಚರಣೆ ವೇಳೆ ಇನ್ನೂ ಪತ್ತೆಯಾಗದ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಡಿಸೆಂಬರ್ 31ರಂದು ಮುಂಜಾನೆ ಇನ್ಫೋಸಿಸ್ ಭದ್ರತಾ ಸಿಬ್ಬಂದಿಯ ಜೀಪ್ ಎದುರು ಚಿರತೆಯೊಂದು ಹಾದು ಹೋಗಿತ್ತು. ಅಲ್ಲದೆ, ಅಂದು ಚಿರತೆಯ ಚಲನವಲನ ಸಿಸಿಟಿವಿ ಕ್ಯಾಮೆರಾದಲ್ಲಿ ಪತ್ತೆಯಾಗಿತ್ತು. ಇದನ್ನು ಹೊರತುಪಡಿಸಿದರೆ, ಕಳೆದ 9 ದಿನದಿಂದ ಚಿರತೆ ಯಾರ ಕಣ್ಣಿಗೂ ಕಂಡಿಲ್ಲ. ಅದರ ಸೆರೆಗಾಗಿ ಇನ್ಫೋಸಿಸ್ ಆವರಣದಲ್ಲಿ 12ಕ್ಕೂ ಹೆಚ್ಚು ಕ್ಯಾಮರಾ ಟ್ರ್ಯಾಪ್ ಅಳವಡಿಸಲಾಗಿದ್ದು, ಎರಡು ಬೋನ್ ಇಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೈಸೂರು ಜೈಲಿನಲ್ಲಿ ಇಬ್ಬರು ಕೈದಿಗಳ ಸಾವು, ಕೇಕ್ ಎಸೆನ್ಸ್ ಸೇವನೆ ಪರಿಣಾಮ
ಮೈಸೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಮೈಸೂರು (Mysuru News) ಜೈಲಿನಲ್ಲಿ ಕೇಕ್ ಎಸೆನ್ಸ್ ಸೇವಿಸಿದ್ದ ಮತ್ತೊಬ್ಬ ಕೈದಿ ಸಾವನ್ನಪ್ಪಿದ್ದು, ಈ ಮೂಲಕ ಸಾವನ್ನಪ್ಪಿದ ಕೈದಿಗಳ ಸಂಖ್ಯೆ 2 ಕ್ಕೆ ಏರಿಕೆಯಾಗಿದೆ.
ಹೊಸ ವರ್ಷದ ದಿನ ಕೇಕ್ ತಯಾರಿಸಲು ಎಸೆನ್ಸ್ ತರಿಸಲಾಗಿತ್ತು. ಜೈಲಿನ ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕೈದಿಗಳು ಕೇಕ್ ತಯಾರಿಸಲು ಇಟ್ಟಿದ್ದ ಎಸೆನ್ಸ್ ಕುಡಿದಿದ್ದರು. ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೈಲಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಬಳಿಕ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿನ್ನೆ ನಿನ್ನೆ ಮೈಸೂರಿನ ಸಾತಗಳ್ಳಿಯ ಮಾದೇಶ್ ಮೃತಪಟ್ಟಿದ್ದರು. ಇಂದು ಚಾಮರಾಜನಗರದ ಕೈದಿ ನಾಗರಾಜ್ ಕೆಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದ್ದಾರೆ. ಮತ್ತೊಬ್ಬ ಕೈದಿ ರಮೇಶ್ ಆರೋಗ್ಯ ಸ್ಥಿತಿಯು ಗಂಭೀರವಾಗಿದೆ ಎಂದು ತಿಳಿದುಬಂದಿದೆ.