Murder Case: ಅನೈತಿಕ ಸಂಬಂಧದ ಹಿನ್ನೆಲೆ, ಪತ್ನಿಯ ಕೊಚ್ಚಿ ಕೊಂದ ಪತಿ
Murder Case: ಅನೈತಿಕ ಸಂಬಂಧದ ಹಿನ್ನೆಲೆ, ಪತ್ನಿಯ ಕೊಚ್ಚಿ ಕೊಂದ ಪತಿ
ಹರೀಶ್ ಕೇರ
December 11, 2024
ಶಿವಮೊಗ್ಗ: ಜಿಲ್ಲೆಯಲ್ಲಿ (Shivamogga news) ಬೆಳ್ಳಂಬೆಳಿಗ್ಗೆಯೇ ಬೆಚ್ಚಿ ಬೀಳಿಸುವಂತ ಅಪರಾಧವೊಂದು (Crime news) ನಡೆದಿದ್ದು, ಅನೈತಿಕ ಸಂಬಂಧದ (Illicit relationship) ಹಿನ್ನೆಲೆಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಕತ್ತಿಯಿಂದ ಕೊಚ್ಚಿ ಕೊಲೆ (Murder Case) ಮಾಡಿದ್ದಾನೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ನಗರದ ರಾಘವೇಂದ್ರ ಬಡಾವಣೆಯಲ್ಲಿ ಈ ಕೊಲೆ ನಡೆದಿದೆ. ನಾಗರಾಜ್ ಎಂಬಾತ ತನ್ನ ಪತ್ನಿ ರೇಣುಕಾ(40) ಎಂಬಾಕೆಯನ್ನು ಬೆಳ್ಳಂಬೆಳಿಗ್ಗೆ ಕತ್ತಿ ಬೀಸಿ ಕೊಲೆ ಮಾಡಿದ್ದಾನೆ. ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, ಅನೈತಿಕ ಸಂಬಂಧದ ಕಾರಣ ನಾಗರಾಜ್ ಹಾಗೂ ರೇಣುಕಾ ನಡುವೆ ನಿನ್ನೆ ಇಡೀ ರಾತ್ರಿ ಜಗಳವಾಗಿದೆ. ಈ ಜಗಳ ತಾರಕಕ್ಕೇರಿ ಮುಂಜಾನೆ 4 ಗಂಟೆಯ ಸುಮಾರಿಗೆ ಪತ್ನಿ ರೇಣುಕಾರನ್ನು ಕತ್ತಿಯಿಂದ ಕೊಚ್ಚಿ ನಾಗರಾಜ್ ಕೊಲೆಗೈದಿದ್ದಾನೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ತೆರಳಿದ ಶಿಕಾರಿಪುರ ಟೌನ್ ಠಾಣೆಯ ಪೊಲೀಸರು ಆರೋಪಿ ನಾಗರಾಜನನ್ನು ಬಂಧಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ನಾಗರಾಜ್ ಪ್ಯಾಸೆಂಜರ್ ಆಟೋ ಓಡಿಸಿ ಜೀವನ ನಿರ್ವಹಣೆ ಮಾಡುತ್ತಿದ್ದ. ಇಬ್ಬರ ನಡುವೆ ವೈವಾಹಿಕ ಜೀವನ ಸುಖಕರವಾಗಿರಲಿಲ್ಲ. ಸದಾ ಜಗಳವಾಗುತ್ತಿತ್ತು ಎನ್ನಲಾಗಿದೆ.
ಬೆಂಗಳೂರು- ಚೆನ್ನೈ ಹೈವೆಯಲ್ಲಿ ಬಸ್ಸಿಗೆ ಲಾರಿ ಡಿಕ್ಕಿ, 10 ಮಂದಿಗೆ ಗಾಯ
ಬೆಂಗಳೂರು: ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯ (Bengaluru- Chennai Highway) ತಾಂಡಾಲಂ ಬಳಿ ಖಾಸಗಿ ಬಸ್ಸು ಹಾಗೂ ಲಾರಿಯ ನಡುವೆ ಅಪಘಾತ (Road Accident) ಸಂಭವಿಸಿದೆ. ಟಾರಸ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಖಾಸಗಿ ಸಂಸ್ಥೆಯ ಬಸ್ ಪಲ್ಟಿಯಾಗಿದ್ದು, ಅಪಘಾತದಲ್ಲಿ 10ಕ್ಕೂ ಹೆಚ್ಚು ಮಂದಿಗೆ ತೀವ್ರ ಗಾಯಗಳಾಗಿವೆ.
ಖಾಸಗಿ ಸಂಸ್ಥೆಯ ಬಸ್ ಯೂ ಟರ್ನ್ ಮಾಡಲು ಮುಂದಾದಾಗ ಹಿಂದಿನಿಂದ ವೇಗವಾಗಿ ಬಂದ ಟಾರಸ್ ಲಾರಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬಸ್ ಪಲ್ಟಿಯಾಗಿ ಈ ದುರಂತ ಸಂಭವಿಸಿದೆ. ಅಪಘಾತದಲ್ಲಿ ಬಸ್ ಮತ್ತು ಲಾರಿಯ ಮುಂಭಾಗವೂ ನಜ್ಜುಗುಜ್ಜಾಗಿದೆ. ಜೊತೆಗೆ ಚೆನ್ನೈನಿಂದ ಬೆಂಗಳೂರು ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರಿಗೂ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ.
ಈ ದುರ್ಘಟನೆಯಲ್ಲಿ ಬಸ್ ಚಾಲಕ ಸೇರಿದಂತೆ 9 ಮಂದಿಗೆ ಗಂಭೀರ ಗಾಯಗಳಾಗಿವೆ. ರಸ್ತೆ ದಾಟುತ್ತಿದ್ದ ಪಾದಚಾರಿಯೊಬ್ಬರಿಗೆ ಕಾಲು ಮುರಿತವಾಗಿದ್ದು, ಲಾರಿ ಚಾಲಕ ವಾಹನದ ಮುಂಭಾಗದ ಕ್ಯಾಬಿನ್‌ನಲ್ಲಿ ಸಿಲುಕಿಕೊಂಡಿದ್ದ. ಸ್ಥಳೀಯರು ಆತನನ್ನು ಹೊರಗೆಳೆದಿದ್ದಾರೆ.
ವಿಚಾರ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದ್ದು, ಜೆಸಿಬಿ ಬಳಸಿ ಲಾರಿ ಚಾಲಕನನ್ನು ರಕ್ಷಿಸಿದ್ದಾರೆ. ಅಂತೆಯೇ ಗಾಯಗೊಂಡ ಎಲ್ಲ ವ್ಯಕ್ತಿಗಳನ್ನು ಚಿಕಿತ್ಸೆಗಾಗಿ ಶ್ರೀಪೆರಂಬದೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಜಾನೆ ಸಂಭವಿಸಿದ ಅಪಘಾತ ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್‌ಗೆ ಅಡಚಣೆಯನ್ನು ಉಂಟುಮಾಡಿತು. ನಂತರ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಇದನ್ನೂ ಓದಿ: Murder Case: ಬೆಂಗಳೂರಲ್ಲಿ ಮತ್ತೊಬ್ಬ ಯುವತಿಯ ಬರ್ಬರ ಹತ್ಯೆ; ಪ್ರೇಯಸಿಯನ್ನೇ ಚಾಕು ಇರಿದು ಕೊಂದ ಪ್ರಿಯಕರ!