Shivamogga News: ಕಾರು-ಬೈಕ್ ನಡುವೆ ಅಪಘಾತ; ಸವಾರ ಸ್ಥಳದಲ್ಲೇ ಸಾವು, ಮತ್ತೊಬ್ಬ ಗಂಭೀರ
Shivamogga News: ಶಿವಮೊಗ್ಗ ಜಿಲ್ಲೆಯ ರಿಪ್ಪನ್ ಪೇಟೆಯ ಸೂಡೂರು ಸೇತುವೆ ಬಳಿ ಬುಧವಾರ ಅಪಘಾತ ನಡೆದಿದೆ. ರಿಪ್ಪನ್ ಪೇಟೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
Prabhakara R
December 11, 2024
ಶಿವಮೊಗ್ಗ: ಕಾರು-ಬೈಕ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Shivamogga News) ಒಬ್ಬ ಸ್ಥಳದಲ್ಲೇ ಮೃತಪಟ್ಟು, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ರಿಪ್ಪನ್ ಪೇಟೆಯ ಸೂಡೂರು ಸೇತುವೆ ಬಳಿ ಬುಧವಾರ ನಡೆದಿದೆ.
ರಿಪ್ಪನ್ ಪೇಟೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಕಾರಿಗೆ ವಿರುದ್ಧ ದಿಕ್ಕಿನಿಂದ ಬಂದ ಬೈಕ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬೈಕ್‌ನಲ್ಲಿ ಮೂವರು ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದ್ದು, ಅಪಘಾತದ ರಭಸಕ್ಕೆ ಒಬ್ಬ ಸ್ಥಳದಲ್ಲೇ ಮೃತಪಟ್ಟಿದ್ದರೆ, ಇನ್ನೊಬ್ಬನಿಗೆ ಗಂಭೀರ ಗಾಯಗಳಾಗಿದ್ದು, ಮತ್ತೋರ್ವ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ | Viral News: ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ ಉಬರ್ ಚಾಲಕನಿಗೆ ಸಿಕ್ಕ ಈ ಕಾಮೆಂಟ್; ಏನಿದು?
ಕೇಸ್‌ಗಾಗಿ ಬೆಂಗಳೂರಿನಿಂದ ಜೌನ್ಪುರಕ್ಕೆ 40 ಬಾರಿ ಹೋಗಿದ್ದ-ಟೆಕ್ಕಿ ಸಾವಿನ ಬಗ್ಗೆ ಪೋಷಕರು ಹೇಳಿದ್ದೇನು?
ಲಖನೌ: ಪತ್ನಿ ಹಾಗೂ ಆಕೆಯ ಕುಟುಂಬಸ್ಥರ ಕಿರುಕುಳದಿಂದ ಬೇಸತ್ತು ಬೆಂಗಳೂರಿನಲ್ಲಿ ಡಿ. 9 ರಂದು ಟೆಕ್ಕಿ (Bengaluru techie) ಅತುಲ್ ಸುಭಾಷ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವ ಮುನ್ನ ಅವರು 24 ಪುಟಗಳ ಡೆತ್ ನೋಟ್ ಬರೆದಿದ್ದರು. ಆದರೆ ಅಲ್ಲಿ ಇಲ್ಲದ ವಿಷಯಗಳ ಬಗ್ಗೆ ಅವರ ಪೋಷಕರು ಮಾತನಾಡಿದ್ದು, ತಮ್ಮ ಮಗ ಅನುಭವಿಸಿದ ಕಿರುಕುಳದ ಬಗ್ಗೆ ಹೇಳಿದ್ದಾರೆ.
ಅತುಲ್ ಸುಭಾಷ್ ಸಾವಿನ ಬಳಿಕ ಪ್ರತಿಕ್ರಿಯೆ ನೀಡಿದ ಪೋಷಕರು , ಆತನ ಪತ್ನಿ ನಿಕಿತಾ ಅತುಲ್ ನಮ್ಮ ಮಗನ ವಿರುದ್ಧ ದೂರು ದಾಖಲಿಸಿದ್ದಳು. ನಿಕಿತಾ ಹಾಗೂ ಅವರ ಮನೆಯವರು ನಮಗೂ ಮತ್ತು ನಮ್ಮ ಮಗನಿಗೆ ಕಿರುಕುಳ ನೀಡಿದ್ದರು. ಆದರೂ ಅವನು ಎಲ್ಲವನ್ನೂ ಸಹಿಸಿಕೊಂಡಿದ್ದ. ನಮ್ಮ ಬಳಿ ನೋವನ್ನು ತೋಡಿಕೊಂಡಿರಲಿಲ್ಲ. ಕೇಸ್ ವಿಚಾರಣೆ ಸಂಬಂಧ ಆತ ಬೆಂಗಳೂರಿನಿಂದ ಜೌನ್ಪುರಕ್ಕೆ 40 ಬಾರಿ ಹೋಗಿದ್ದ, ಆಕೆಯ ಮನೆಯವರಿಂದ ತುಂಬಾ ಕಷ್ಟಪಟ್ಟಿದ್ದ ಎಂದು ಅಳಲು ತೋಡಿಕೊಂಡಿದ್ದಾರೆ. 2019ರಲ್ಲಿ ಮದುವೆಯಾಗಿತ್ತು, 2020ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆಕೆಯ ಮನೆಯವರು ಪದೇ ಪದೇ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಅತುಲ್ ಹಣ ಕೊಡಲು ನಿರಾಕರಿಸಿದ್ದರಿಂದ ಆಕೆ ಮಗನನ್ನು ಕರೆದುಕೊಂಡು 2021ರಲ್ಲಿ ಮನೆ ಬಿಟ್ಟು ಹೋಗಿದ್ದಳು ಎಂಬ ವಿಷಯವನ್ನು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ 1 ಕೋಟಿ ರೂ. ಕೊಟ್ಟರೆ ಪ್ರಕರಣಗಳಿಂದ ಮುಕ್ತಗೊಳಿಸಿತ್ತೇನೆ ಎಂದಿದ್ದ ಆಕೆ ಆಮೇಲೆ 3 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಳು. ಅಷ್ಟೇ ಅಲ್ಲದೆ ಪ್ರಕರಣ ಇತ್ಯರ್ಥ ಮಾಡಿಕೊಡಲು ನ್ಯಾಯಾಧೀಶೆ ಕೂಡ 5 ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವುದಾಗಿ ಅವರು ಡೆತ್ನೋಟ್ನಲ್ಲಿ ಬರೆದಿದ್ದರು.
ಈ ನಡುವೆ ಅತುಲ್ ಸುಭಾಷ್ ಸಹೋದರ ಬಿಕಾಸ್ ಕುಮಾರ್ ಅತುಲ್ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ ಸಿಂಘಾನಿಯಾ, ಸಹೋದರ ಅನುರಾಗ್ ಸಿಂಘಾನಿಯಾ ಹಾಗೂ ಸಂಬಂಧಿ ಸುಶೀಲ್ ಸಿಂಘಾನಿಯಾ ವಿರುದ್ಧ ದೂರು ದಾಖಲಿಸಿದ್ದಾರೆ. ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 108 (ಆತ್ಮಹತ್ಯೆಗೆ ಪ್ರಚೋದನೆ) ಆರೋಪದಡಿ ಎಫ್ಐಆರ್ ದಾಖಲಾಗಿದೆ.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಕಾಸ್ ಕುಮಾರ್ , ನನ್ನ ಸಹೋದರ ಆಕೆಗಾಗಿ ಎಲ್ಲವನ್ನೂ ಮಾಡಿದ್ದಾನೆ. ತನಗಾಗುತ್ತಿರುವ ಕಿರುಕುಳದ ಬಗ್ಗೆ ಒಂದು ದಿನವೂ ನಮ್ಮ ಬಳಿ ಹಂಚಿಕೊಂಡಿರಲಿಲ್ಲ. ಆತನ ಸಾವಿಗೆ ನ್ಯಾಯ ಸಿಗಬೇಕಿದೆ. ನಾನು ಭಾರತ ಸರ್ಕಾರ ಮತ್ತು ರಾಷ್ಟ್ರಪತಿಗಳಿಗೆ ಮನವಿ ಮಾಡಲು ಬಯಸುತ್ತೇನೆ ನನ್ನ ಸಹೋದರ ಸತ್ಯದೊಂದಿಗೆ ಇದ್ದರೆ ಅವರಿಗೆ ನ್ಯಾಯ ನೀಡಬೇಕು, ಇಲ್ಲದಿದ್ದರೆ ಅವನದು ತಪ್ಪು ಎಂದು ತೋರಿಸಲು ನನಗೆ ಪುರಾವೆ ನೀಡಿ, ಸೂಕ್ತ ತನಿಖೆ ನಡೆಸಿ ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ : Actress Shobitha: ‘ಬ್ರಹ್ಮಗಂಟು’ ಧಾರಾವಾಹಿ ಖ್ಯಾತಿಯ ನಟಿ ಶೋಭಿತಾ ಆತ್ಮಹತ್ಯೆ