DySP Arrested: ಮತ್ತೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ; ಬಿಡುಗಡೆ ಬೆನ್ನಲ್ಲೇ ಮಧುಗಿರಿ ಡಿವೈಎಸ್ಪಿ ಮತ್ತೆ ಬಂಧನ
DySP Arrested: ದೂರು ನೀಡಲು ಬಂದಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೈಲು ಸೇರಿದ್ದ ಡಿವೈಎಸ್‌ಪಿ ಎ.ರಾಮಚಂದ್ರಪ್ಪಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ, ಮತ್ತೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮತ್ತೆ ಡಿವೈಎಸ್‌ಪಿಯನ್ನು ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.


ಮಧುಗಿರಿ: ದೂರು ನೀಡಲು ಬಂದಿದ್ದ ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿದ್ದಆರೋಪದಲ್ಲಿ ಜೈಲು ಸೇರಿದ್ದ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ ಬಿಡುಗಡೆಯಾದ ಬೆನ್ನಲ್ಲೇ ಮತ್ತೆ ಬಂಧನಕ್ಕೊಳಪಟ್ಟಿರುವ ಘಟನೆ ನಡೆದಿದೆ.
ದೂರು ನೀಡಲು ಬಂದಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಜೈಲು ಸೇರಿದ್ದ ಡಿವೈಎಸ್‌ಪಿ ಎ.ರಾಮಚಂದ್ರಪ್ಪಗೆ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ, ಮತ್ತೊಬ್ಬ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಮತ್ತೆ ಡಿವೈಎಸ್‌ಪಿಯನ್ನು ಮಧುಗಿರಿ ಪೊಲೀಸರು ಬಂಧಿಸಿ ತುಮಕೂರು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ಅವರನ್ನು 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದೂರು ನೀಡಲು ಡಿವೈಎಸ್‌ಪಿ ಕಚೇರಿಗೆ ಬಂದಿದ್ದ ಮಹಿಳೆಯ ಮೇಲೆ ಕಚೇರಿಯಲ್ಲಿಯೇ ಲೈಂಗಿಕ ದೌರ್ಜನ್ಯ ಎಸಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಪೊಲೀಸರು ಬಂಧಿಸಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಧೀಶ ಕೆ.ಯಾದವ್ ಅವರು ಡಿವೈಎಸ್‌ಪಿ ಎ.ರಾಮಚಂದ್ರಪ್ಪಗೆ 2 ಲಕ್ಷ ಮೌಲ್ಯದ ಬಾಂಡ್, ಇಬ್ಬರ ಜಾಮೀನು ಮತ್ತಿತರೆ ಷರತ್ತುಗಳೊಂದಿಗೆ ಜಾಮೀನು ಮಂಜೂರು ಮಾಡಿದ್ದರು. ಎಲ್ಲ ಷರತ್ತುಗಳೊಂದಿಗೆ ಬಿಡುಗಡೆಯಾದ ತಕ್ಷಣವೇ ಮಧುಗಿರಿ ಪೊಲೀಸರು ಮತ್ತೊಂದು ಮಹಿಳೆಗೆ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದಲ್ಲಿ ಬಂಧಿಸಿದರು. ಡಿವೈಎಸ್‌ಪಿಯನ್ನು ಮಧುಗಿರಿ ಕಾರಾಗೃಹದಲ್ಲಿಡಲಾಗಿದೆ.
ಈ ಸುದ್ದಿಯನ್ನೂ ಓದಿ | Aeroindia 2025: ಏರ್ ಶೋ ಹಿನ್ನೆಲೆ ಯಲಹಂಕದ 14 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಬಂದ್
ಚಾಮರಾಜಪೇಟೆ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ; 40 ಮಂದಿ ವಿರುದ್ಧ ಎಫ್‌ಐಆರ್

ಬೆಂಗಳೂರು: ಠಾಣೆಗೆ ಮುತ್ತಿಗೆ ಹಾಕಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಮಹಿಳೆಯರು ಸೇರಿ 40ಕ್ಕೂ ಹೆಚ್ಚು ಮಂದಿ ವಿರುದ್ಧ ಚಾಮರಾಜಪೇಟೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ಟಿಪ್ಪುನಗರ ಮಸೀದಿ ಸಮಿತಿ ಅಧ್ಯಕ್ಷ ಮೆಹಬೂಬ್ ಖಾನ್, ಶಬ್ಬೀರ್, ಮಸೂದ್, ಸಿದ್ದಿಕ್ ಮತ್ತು ಇತರೆ 40 ಮಂದಿಯನ್ನು ಆರೋಪಿಗಳೆಂದು ಹೆಸರಿಸಲಾಗಿದೆ.
ಜ.14 ರಂದು ಐವರು ಯುವಕರ ಗುಂಪೊಂದು 21 ವರ್ಷದ ಆಟೋರಿಕ್ಷಾ ಚಾಲಕನ ಮೇಲೆ ಹಲ್ಲೆ ನಡೆಸಿ, ವಾಹನವನ್ನು ಹಾನಿಗೊಳಿಸಿತ್ತು. ಈ ಸಂಬಂಧ ನಯಮತ್ ಪಾಷಾ ಎಂಬುವವರು ದೂರು ಸಲ್ಲಿಸಿದ್ದರು. ಈ ಬಗ್ಗೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಕುರಿತು ಸಬ್ ಇನ್‌ಸ್ಪೆಕ್ಟರ್ ತನಿಖೆ ನಡೆಸಿ, ಪಾಷಾ ಅವರನ್ನು ಟಿಪ್ಪುನಗರದ ಮಸೀದಿ ಬಳಿ ಕರೆದೊಯ್ದು ಪರಿಶೀಲನೆ ನಡೆಸಿದ್ದರು.
ಈ ವಿಚಾರ ತಿಳಿದ ಆರೋಪಿಗಳಾದ ಚಂದನ್, ಸಲೀಂ, ಮಸೂದ್, ಶಬ್ಬೀರ್ ಮಹಿಳೆಯರು ಸೇರಿ 40 ಮಂದಿಯನ್ನು ಠಾಣೆ ಮುಂದೆ ಜಮಾಯಿಸುವಂತೆ ಮಾಡಿ, ಪ್ರತಿಭಟನೆ ನಡೆಸಿದ್ದಾರೆ. ನಯಾಮತ್ ಅವರನ್ನು ಏಕೆ ಬಂಧಿಸಿಲ್ಲ? ಏಕೆ ಬಿಟ್ಟು ಕಳುಹಿಸಿದ್ದೀರಾ’ ಎಂದು ಗಲಾಟೆ ಮಾಡಿದ್ದಾರೆ. ಪೊಲೀಸರಿಗೆ ಏರುದನಿಯಲ್ಲಿ ಪ್ರಶ್ನಿಸಿದ್ದರು. ಎಷ್ಟೇ ಸಮಾಧಾನ ಮಾಡಿದರೂ ಕೇಳದೇ, ಪೊಲೀಸ್ ಸಿಬ್ಬಂದಿಯನ್ನು ತಳ್ಳಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.