ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: ಮೊಬೈಲ್‌ ನೋಡಬೇಡ ಎಂದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

Self Harming: ಹಳಿಯಾಳದ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಓಂ ಕದಂ (13) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಪ್ರತಿದಿನ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದ ಮಗನಿಗೆ ತಂದೆ ಮನೋಹರ್ ಮೊಬೈಲ್ ನೋಡದಂತೆ ಬುದ್ದಿವಾದ ಹೇಳುತ್ತಿದ್ದರು.

ಮೊಬೈಲ್‌ ನೋಡಬೇಡ ಎಂದದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ

ಮೃತ ಓಂ ಕದಂ

ಹರೀಶ್‌ ಕೇರ ಹರೀಶ್‌ ಕೇರ Jul 17, 2025 12:08 PM

ಕಾರವಾರ: ಮೊಬೈಲ್ ನೋಡಬೇಡ (Mobile addiction) ಎಂದು ತಂದೆ ಮಗನಿಗೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ (Self Harming) ಮಾಡಿಕೊಂಡ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹಳಿಯಾಳದ ಮಂಗಳವಾಡ ಗ್ರಾಮದಲ್ಲಿ ನಡೆದಿದೆ.

ಹಳಿಯಾಳದ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಓಂ ಕದಂ (13) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯಲ್ಲಿ ಪ್ರತಿದಿನ ಮೊಬೈಲ್ ನೋಡುತ್ತಾ ಕಾಲ ಕಳೆಯುತ್ತಿದ್ದ ಮಗನಿಗೆ ತಂದೆ ಮನೋಹರ್ ಮೊಬೈಲ್ ನೋಡದಂತೆ ಬುದ್ದಿವಾದ ಹೇಳುತ್ತಿದ್ದರು. ಮಾತು ಕೇಳದೇ ಓಂ ಕದಂ ಹಠಕ್ಕೆ ಬಿದ್ದು ಮೊಬೈಲ್ ನೋಡುತ್ತಿದ್ದ. ಮಂಗಳವಾರ ರಾತ್ರಿ ಮೊಬೈಲ್ ನೋಡುತ್ತಿದ್ದ ಮಗನಿಗೆ ಗದರಿಸಿ ಮೊಬೈಲ್ ಕಸಿದುಕೊಂಡು, ಓದಿಕೊಳ್ಳುವಂತೆ ತಂದೆ ಮನೋಹರ್ ಬುದ್ದಿವಾದ ಹೇಳಿದ್ದರು.

ಇದರಿಂದ ಮನನೊಂದು ಓಂ ಕದಂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಆತ ಬದುಕುಳಿಯಲಿಲ್ಲ. ಘಟನೆ ಸಂಬಂಧ ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ಶಾಸಕ ಸುನೀಲ್‌ ಕುಮಾರ್‌ಗೆ ಪಿತೃವಿಯೋಗ

ಉಡುಪಿ: ಮಾಜಿ ಸಚಿವ, ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ (Sunil Kumar) ಅವರ ತಂದೆ, ಆರ್‌ಎಸ್‌ಎಸ್‌ನ (RSS) ಹಿರಿಯ ಮುಖಂಡ, ನಿವೃತ್ತ ಪ್ರಾಂಶುಪಾಲ ಎಂ. ಕೆ. ವಾಸುದೇವ ಕೊನೆಯುಸಿರೆಳೆದಿದ್ದಾರೆ. ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಮಣಿಪಾಲ ಕೆಎಂಸಿ ಮತ್ತು ಟಿಎಂಎ ಪೈ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರು ಪತ್ನಿ ಪ್ರಮೋದಾ, ಪುತ್ರ ಸುನಿಲ್‌ ಕುಮಾರ್‌, ಸೊಸೆ ಪ್ರಿಯಾಂಕಾ, ಪುತ್ರಿ ಸುಕನ್ಯಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ವೃತ್ತಿಯಲ್ಲಿ ಶಿಕ್ಷಕರಾಗಿದ್ದ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಂಘ ಚಾಲಕರಾಗಿದ್ದರು. ವಾಸುದೇವ ಅವರಿಗೆ 87 ವರ್ಷ ವಯಸ್ಸಾಗಿತ್ತು. ಪ್ರಖರ ವಾಗ್ಮಿಯಾಗಿದ್ದ ವಾಸುದೇವ್, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು. ಮೃತರ ಅಂತಿಮ ವಿಧಿ ವಿಧಾನ ಶಾಸಕರ ಮನೆ ಕಲಂಬಾಡಿ ಪದವಿನಲ್ಲಿ ಗುರುವಾರ ಸಂಜೆ 4 ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: Viral Video: ಹಾವು ಕಚ್ಚಿ ಮಹಿಳೆ ಸಾವು; ಅಷ್ಟಕ್ಕೂ ಹಾವು ಇದ್ದಿದ್ದಾರೂ ಎಲ್ಲಿ ಗೊತ್ತಾ?