Amit Shah: ಅಮಿತ್ ಶಾ ನಾಲಿಗೆ ಕತ್ತರಿಸಿದ್ರೆ 1 ಕೋಟಿ ರೂ. ಬಹುಮಾನ; ದಲಿತ ಮುಖಂಡ ಘೋಷಣೆ
Amit Shah: ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ಕಲಬುರಗಿಯಲ್ಲಿ ದಲಿತ ಸಂಘಟನೆಗಳ ಮಹಾ ಒಕ್ಕೂಟ ಪ್ರತಿಭಟನೆ ನಡೆಸಿದೆ. ಪ್ರತಿಭಟನಾಕಾರರು ಅಮಿತ್ ಶಾ ಪ್ರತಿಕೃತಿಯ ಅಣಕು ಶವ ಯಾತ್ರೆ ನಡೆಸಿ ನಂತರ ಅದನ್ನು ಸುಟ್ಟುಹಾಕಿ ಆಕ್ರೋಶ ಹೊರಹಾಕಿದರು.
Prabhakara R
December 28, 2024
ವಿಜಯಪುರ: ಸಂಸತ್‌ನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಆಡಿರುವ ಮಾತುಗಳನ್ನು ಖಂಡಿಸಿ ದಲಿತ ಸಂಘಟನೆಗಳ ಮಹಾ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಆಕ್ರೋಶ ಹೊರಹಾಕಿರುವ ದಲಿತ ಮುಖಂಡರೊಬ್ಬರು, ಅಂಬೇಡ್ಕರ್‌ಗೆ ಅವಮಾನ ಮಾಡಿರುವ ಕೇಂದ್ರ ಸಚಿವ ಅಮಿತ್ ಶಾ ಅವರ ನಾಲಿಗೆ ಕತ್ತರಿಸಿ ತಂದರೆ ಅವರಿಗೆ 1 ಕೋಟಿ ರೂ. ಬಹುಮಾನ ಕೊಡುತ್ತೇನೆ ಎಂದು ಘೋಷಿಸಿದ್ದಾರೆ.
ಪ್ರತಿಭಟನೆ ವೇಳೆ ಹೋರಾಟಗಾರರು, ಅಮಿತ್ ಶಾ ಪ್ರತಿಕೃತಿಯ ಅಣಕು ಶವ ಯಾತ್ರೆ ನಡೆಸಿ ನಂತರ ಅದನ್ನು ಸುಟ್ಟುಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ದಲಿತ ಮುಖಂಡ ಜಿತೇಂದ್ರ ಕಾಂಬಳೆ ಮಾತನಾಡಿ, 'ಅಂಬೇಡ್ಕರ್‌ಗೆ ಅವಮಾನ ಮಾಡಿರುವ ಕೇಂದ್ರ ಸಚಿವ ಅಮಿತ್ ಶಾ ಅವರ ನಾಲಿಗೆ ಕತ್ತರಿಸಿ ತಂದರೆ ಅವರಿಗೆ 1 ಕೋಟಿ ರೂ. ಬಹುಮಾನ ನೀಡುತ್ತೇನೆ' ಎಂದು ಘೋಷಿಸಿದರು.
ಆರ್‌ಎಸ್‌ಎಸ್ ಬೈಠಕ್, ಬಿಜೆಪಿ ಸಭೆಗಳಲ್ಲಿ ಅಂಬೇಡ್ಕರ್ ವಿರುದ್ಧ ಮಾತನಾಡಿ ಅದೇ ದಾಟಿಯಲ್ಲಿ ಸಂಸತ್ತಿನಲ್ಲೂ ಮಾತನಾಡಿದ್ದಾರೆ. ಕೇಂದ್ರ ಸಚಿವ ಅಮಿತ್ ಶಾ ಅವರು ಅಂಬೇಡ್ಕರ್‌ಗೆ ಅವಹೇಳನ ಮಾಡಿರುವುದು ಸಹಿಸಲು ಸಾಧ್ಯವಿಲ್ಲ. ದೇಶದಲ್ಲಿ ದಲಿತರನ್ನು ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಬಿಜೆಪಿ, ಕಾಂಗ್ರೆಸ್ ಪಕ್ಷಗಳು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿವೆ. ಅಂಬೇಡ್ಕರ್ ಅವರ ಬಗ್ಗೆ ಕೆಟ್ಟದಾಗಿ ಮಾತಾಡಿರುವ ಅಮಿತ್ ಶಾ ಕೂಡಲೇ ರಾಜೀನಾಮೆ ಕೊಡಬೇಕು. ಅಲ್ಲದೆ, ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸುನೀಲಕುಮಾರ ಸೂರ್ಯವಂಶಿ ಮಾತನಾಡಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರಿಗೆ ಸಾಕಷ್ಟು ಅವಮಾನ ಮಾಡಲಾಗಿದೆ. ಇನ್ನು ಮುಂದೆ ದಲಿತರು ಆ ಅವಮಾನವನ್ನು ಸಹಿಸುವುದಿಲ್ಲ. ಅಮಿತ್ ಶಾ ದೇಶದ ಅತ್ಯುನ್ನತ ಹುದ್ದೆಯಲ್ಲಿದ್ದಾರೆ. ಜವಾಬ್ದಾರಿಯಿಂದ ಮಾತನಾಡಬೇಕು. ದೇಶದ ಮಹಾನ್ ಚೇತನ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ ಅಷ್ಟೇ ಅಲ್ಲ, ಇಡೀ ಭಾರತದ ದಲಿತರಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದರು.
L K Advani: ಹೋರಾಟದಲ್ಲೇ ಅರಳಿದ ‘ಉಕ್ಕಿನ ವ್ಯಕ್ತಿತ್ವ’ಕ್ಕೆ ಗಗನ ಕುಸುಮವಾದ ಪ್ರಧಾನಿ ಪಟ್ಟ! – ಇಲ್ಲಿದೆ ಬಿಜೆಪಿಯ ‘ಭೀಷ್ಮ’ನ ರಾಜಕೀಯ ಜೀವನದ ಸಮಗ್ರ ಚಿತ್ರಣ