ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

AUS vs SA: ಇಂದು ಆಸೀಸ್‌-ದಕ್ಷಿಣ ಆಫ್ರಿಕಾ ಮಧ್ಯೆ ಬಿಗ್‌ ಫೈಟ್‌; ಗೆದ್ದವರು ಸೆಮಿ ಫೈನಲ್‌ಗೆ

ರಾವಲ್ಪಿಂಡಿಯ ಪಿಚ್‌ ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಆರಂಭದಲ್ಲಿ ಬೌಲರ್‌ಗಳು ಹಿಡಿತ ಸಾಧಿಸಿದರೂ ಆ ಬಳಿಕ ಸಂಪೂರ್ಣವಾಗಿ ಪಿಚ್‌ ಬ್ಯಾಟಿಂಗ್‌ಗೆ ನೆರವಾಗಲಿದೆ. ಹೀಗಾಗಿ ಬೌಲರ್‌ಗಳು ಶಕ್ತಿ ಮೀರಿದ ಪ್ರಯತ್ನ ನಡೆಸಬೇಕಿದೆ. 300 ಪ್ಲಸ್‌ ಮೊತ್ತವನ್ನಾದರೂ ಇಲ್ಲಿ ಚೇಸ್‌ ಮಾಡಿ ಗೆಲ್ಲಬಹುದು. ಇಬ್ಬನಿ ಸಮಸ್ಯೆ ಕೂಡ ಇರುವುದರಿಂದ ಚೇಸಿಂಗ್‌ ನಡೆಸುವ ತಂಡಕ್ಕೆ ಹೆಚ್ಚಿನ ಲಾಭ.

AUS vs SA: ಇಂದು ಆಸೀಸ್‌-ದಕ್ಷಿಣ ಆಫ್ರಿಕಾ ಮಧ್ಯೆ ಬಿಗ್‌ ಫೈಟ್‌

Profile Abhilash BC Feb 25, 2025 8:17 AM

ರಾವಲ್ಪಿಂಡಿ: ಚಾಂಪಿಯನ್ಸ್‌ ಟ್ರೋಫಿಯ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಾಗಿ ಗುರುತಿಸಿಕೊಂಡಿರುವ ಬಲಿಷ್ಠ ಬ್ಯಾಟಿಂಗ್‌ ಪಡೆಯನ್ನು ಹೊಂದಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ(AUS vs SA) ತಂಡಗಳು ಇಂದು(ಮಂಗಳವಾರ) ಸೆಣಸಾಟ ನಡೆಸಲಿದೆ. ಯಾರೇ ಗೆದ್ದರು, 'ಬಿ' ಗುಂಪಿನಿಂದ ಸೆಮಿಫೈನಲ್‌ ಟಿಕೆಟ್‌ ಒಂದನ್ನು ಬಹುತೇಕ ಖಾತ್ರಿಪಡಿಸಲಿದ್ದಾರೆ.

ಪಿಚ್‌ ರಿಪೋರ್ಟ್‌

ರಾವಲ್ಪಿಂಡಿಯ ಪಿಚ್‌ ಬ್ಯಾಟರ್‌ಗಳಿಗೆ ಹೇಳಿ ಮಾಡಿಸಿದಂತಿದೆ. ಆರಂಭದಲ್ಲಿ ಬೌಲರ್‌ಗಳು ಹಿಡಿತ ಸಾಧಿಸಿದರೂ ಆ ಬಳಿಕ ಸಂಪೂರ್ಣವಾಗಿ ಪಿಚ್‌ ಬ್ಯಾಟಿಂಗ್‌ಗೆ ನೆರವಾಗಲಿದೆ. ಹೀಗಾಗಿ ಬೌಲರ್‌ಗಳು ಶಕ್ತಿ ಮೀರಿದ ಪ್ರಯತ್ನ ನಡೆಸಬೇಕಿದೆ. 300 ಪ್ಲಸ್‌ ಮೊತ್ತವನ್ನಾದರೂ ಇಲ್ಲಿ ಚೇಸ್‌ ಮಾಡಿ ಗೆಲ್ಲಬಹುದು. ಇಬ್ಬನಿ ಸಮಸ್ಯೆ ಕೂಡ ಇರುವುದರಿಂದ ಚೇಸಿಂಗ್‌ ನಡೆಸುವ ತಂಡಕ್ಕೆ ಹೆಚ್ಚಿನ ಲಾಭ.

ಬಲಾಬಲ

ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಇದುವರೆಗೂ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟು 110 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ ಆಸ್ಟ್ರೇಲಿಯಾ 55 ಪಂದ್ಯ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 51 ಪಂದ್ಯ ಜಯಿಸಿದೆ. ಮೂರು ಪಂದ್ಯ ಟೈ ಆಗಿದ್ದರೆ, ಒಂದು ಪಂದ್ಯ ಫಲಿತಾಂಶ ಕಂಡಿಲ್ಲ.

ಉಭಯ ತಂಡಗಳ ಬ್ಯಾಟಿಂಗ್‌ ಲೈನ್‌ ಅಪ್‌ ತುಂಬಾನೇ ಬಲಿಷ್ಠವಾಗಿ ಗೋಚರಿಸಿದೆ. ಇಂಗ್ಲೆಂಡ್‌ ವಿರುದ್ಧ ಶತಕ ಬಾರಿಸಿದ್ದ ಜೋಶ್‌ ಇಂಗ್ಲಿಸ್‌, ಅರ್ಧಶತಕ ಸಿಡಿಸಿದ್ದ ಮ್ಯಾಥ್ಯೂ ಶಾರ್ಟ್, ಅಲೆಕ್ಸ್‌ ಕ್ಯಾರಿ ಮತ್ತು ಅಂತಿಮ ಹಂತದಲ್ಲಿ ಅಕ್ರಮಣಕಾರಿ ಬ್ಯಾಟಿಂಗ್‌ ನಡೆಸಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಇವರೆಲ್ಲ ಆಸೀಸ್‌ ಬ್ಯಾಟಿಂಗ್‌ ಬಲವಾದರೆ, ಅತ್ತ ಅಪ್ಘಾನ್‌ ವಿರುದ್ಧ ಶತಕ ಬಾರಿಸಿದ್ದ ವಿಕೆಟ್‌ ಕೀಪರ್‌ ರಿಯಾನ್‌ ರಿಕಲ್ಟನ್‌, ಅರ್ಧಶತಕ ಗಳಿಸಿದ್ದ ನಾಯಕ ಟೆಂಬ ಬವುಮಾ, ರಸ್ಸಿ ವಾನ್‌ ಡರ್‌ ಡುಸ್ಸೆನ್‌, ಐಡೆನ್‌ ಮಾರ್ಕ್ರಮ್‌ ಇವರೆಲ್ಲ ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಸ್ಟಾರ್‌ಗಳು. ಇವರೆಲ್ಲ ನಾಳಿನ ಪಂದ್ಯದಲ್ಲಿಯೂ ಸಿಡಿದು ನಿಂತರೆ ದೊಡ್ಡ ಮೊತ್ತಕೇನು ಕೊರತೆ ಇಲ್ಲ.

ಸಂಭಾವ್ಯ ತಂಡಗಳು

ದಕ್ಷಿಣ ಆಫ್ರಿಕಾ: ರಿಯಾನ್ ರಿಕೆಲ್ಟನ್ (ವಿ.ಕೀ), ಟೋನಿ ಡಿ ಜೋರ್ಜಿ, ಟೆಂಬಾ ಬವುಮಾ (ನಾಯಕ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ.

ಆಸ್ಟ್ರೇಲಿಯಾ: ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್ (ನಾಯಕ), ಮಾರ್ನಸ್ ಲ್ಯಾಬುಶೇನ್‌, ಜೋಶ್ ಇಂಗ್ಲಿಸ್ (ವಿ.ಕೀ.), ಅಲೆಕ್ಸ್ ಕ್ಯಾರಿ, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ದ್ವಾರ್ಶುಯಿಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಸ್ಪೆನ್ಸರ್ ಜಾನ್ಸನ್.