Bhagya Lakshmi Serial: ಇಂದು ಭಾಗ್ಯ ಲಕ್ಷ್ಮೀ ಮಹಾಸಂಚಿಕೆ: ಈ ಒಂದು ಎಪಿಸೋಡ್ಗಾಗಿ ಕಾದು ಕುಳಿತಿದ್ದಾರೆ ವೀಕ್ಷಕರು
ತಾಂಡವ್‌ನನ್ನು ಕರೆದುಕೊಂಡು ಬಂದ ಶ್ರೇಷ್ಠಾ, ದಯವಿಟ್ಟು ನನ್ನನ್ನು ಮದುವೆಯಾಗು ಎಂದು ಕಾಲು ಹಿಡಿದು, ಕೈಮುಗಿದು ಕೇಳಿಕೊಂಡಿದ್ದಾಳೆ. ನಿನಗಾಗಿ ಇಷ್ಟೆಲ್ಲಾ ಮಾಡಿದೆ, ನೋವು ಸಹಿಸಿದೆ, ಇನ್ನು ಕಾಯಲು ನನ್ನಿಂದ ಸಾಧ್ಯವಿಲ್ಲ ಎಂದು ತಾಂಡವ್ ಎದುರು ಕೈಮುಗಿದು ಅಳುತ್ತಾ ಹೇಳುತ್ತಾಳೆ.

Bhagya Lakshmi Serial

ಕಲರ್ಸ್ ಕನ್ನಡ ಧಾರಾವಾಹಿಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಭಾಗ್ಯ ಲಕ್ಷ್ಮಿ ಧಾರಾವಾಹಿಯಲ್ಲಿ ಇಂದು ಮಹಾಸಂಚಿಕೆ ಒಂದು ಗಂಟೆಯ ಎಪಿಸೋಡ್ ಪ್ರಸಾರ ಕಾಣಲಿದೆ. ಇಂದು ತಾಂಡವ್-ಶ್ರೇಷ್ಠಾ ಮದುವೆ ನಡೆಯಲಿದೆ. ಇದಕ್ಕೆಲ್ಲ ಕಾರಣವಾಗಿದ್ದು ಮಾರುಕಟ್ಟೆಯಲ್ಲಿ ಶ್ರೇಷ್ಠಾ ಮತ್ತು ಭಾಗ್ಯ ನಡುವೆ ನಡೆದ ಜಗಳ. ತರಕಾರಿ ಖರೀದಿಸುವ ಸಂದರ್ಭದಲ್ಲಿ ಭಾಗ್ಯ, ದುಡ್ಡು ಕಡಿಮೆ ಇದೆ ಎಂದು ಸ್ವಲ್ಪವೇ ತರಕಾರಿ ಖರೀದಿಸಿದ್ದಾಳೆ. ಅದನ್ನು ಗಮನಿಸಿದ ಶ್ರೇಷ್ಠಾ, ಭಾಗ್ಯಳನ್ನು ಹೀಯಾಳಿಸಿ ಮಾತನಾಡಿಸಿದ್ದಾರೆ ಉಂಟುಮಾಡಿದ್ದಾಳೆ. ನಿನ್ನಲ್ಲಿ ದುಡ್ಡಿಲ್ಲ, ಭಿಕ್ಷೆ ಬೇಡುವುದು ಉತ್ತಮ, ಈ ತಾಳಿ ಎಲ್ಲ ಯಾಕೆ ನಿನ್ಗೆ.. ಇದನ್ನ ಮೂರು ಕಾಸಿಗೆ ಮಾರಿಬಿಟ್ಟು ತರಾಕಾರಿ ತೆಗೋ ಎಂದೆಲ್ಲ ಹೇಳಿದ್ದಾಳೆ.
ಈ ಮಾತಿನಿಂದ ಕೆರಳಿದ ಭಾಗ್ಯ ಎಲ್ಲರ ಮುಂದೆಯೇ ಶ್ರೇಷ್ಠಾ ಕೆನ್ನೆಗೆ ನಾಲ್ಕು ಬಾರಿ ಬಾರಿಸಿದ್ದಾಳೆ. ಇದರಿಂದ ಶ್ರೇಷ್ಠಾಗೆ ಎಲ್ಲರ ಎದುರು ಅವಮಾನವಾಗಿದೆ. ಸೀದಾ ಅಲ್ಲಿಂದ ಹೊರಟು ಹೋಗಿದ್ದಾಳೆ. ನಂತರ ಆಕೆಯ ಗೆಳೆಯ ಶೌರ್ಯಗೆ ಕರೆ ಮಾಡಿ, ತಾನು ಇವತ್ತೇ ತಾಂಡವ್ ಜತೆ ಮದುವೆಯಾಗಬೇಕು ಎಂದು ಒತ್ತಾಯಿಸಿದ್ದಾಳೆ. ಅದಕ್ಕಾಗಿ ಎಲ್ಲ ರೀತಿಯ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಾಳೆ. ಅದರಂತೆ ಮನೆಗೆ ಬಂದು ಅವಳು ತಾಂಡವ್‌ನನ್ನು ಹೊರಡಿಸಿ, ಪಂಚೆ, ಶಲ್ಯ ಧರಿಸಿ, ಮನೆಯಿಂದ ಕರೆದುಕೊಂಡು ಹೋಗುತ್ತಾಳೆ.
ತಾಂಡವ್‌ನನ್ನು ಕರೆದುಕೊಂಡು ಬಂದ ಶ್ರೇಷ್ಠಾ, ದಯವಿಟ್ಟು ನನ್ನನ್ನು ಮದುವೆಯಾಗು ಎಂದು ಕಾಲು ಹಿಡಿದು, ಕೈಮುಗಿದು ಕೇಳಿಕೊಂಡಿದ್ದಾಳೆ. ನಿನಗಾಗಿ ಇಷ್ಟೆಲ್ಲಾ ಮಾಡಿದೆ, ನೋವು ಸಹಿಸಿದೆ, ಇನ್ನು ಕಾಯಲು ನನ್ನಿಂದ ಸಾಧ್ಯವಿಲ್ಲ ಎಂದು ತಾಂಡವ್ ಎದುರು ಕೈಮುಗಿದು ಅಳುತ್ತಾ ಹೇಳುತ್ತಾಳೆ. ನನಗೆ ಅನ್ಯಾಯ ಆಗ್ತಿದೆ.. ಇನ್ನು ಏನು ಮಾಡ್ಬೇಕು ಅಂತ ಹೇಳು, ಎಲ್ಲ ಮಾಡ್ತೀನಿ.. ಆದ್ರೆ ಈ ಮದುವೆ ಬೇಡ ಅಂತ ಮಾತ್ರ ಹೇಳ್ಬೇಡ ಎಂದಿದ್ದಾಳೆ. ಮೊದಲು ತಾಂಡವ್ ನೋ ಎಂದು ಹೇಳಿದರೂ, ನಂತರ ನೀನು ನನಗೋಸ್ಕರ ತುಂಬಾ ತ್ಯಾಗ ಮಾಡಿದ್ದೀಯ.. ನಾನು ನಿನ್ನ ಮಾತಿಗೆ ಬೆಲೆ ಕೊಡ್ತೇನೆ.. ಸರಿ, ಇವತ್ತೇ ಮದುವೆಯಾಗೋಣ ಎಂದು ಹೇಳುತ್ತಾನೆ.
ಇಲ್ಲಿಯವರೆಗೆ ಹಲವರು ಬಂದು ನಮ್ಮ ಮದುವೆ ನಿಲ್ಲಿಸಿದ್ದಾರೆ. ಆದರೆ ಈ ಬಾರಿ ಹಾಗಾಗಲು ನಾನು ಬಿಡುವುದಿಲ್ಲ. ಮದುವೆಯಾಗಿಯೇ ಸಿದ್ಧ ಎಂದು ಹೇಳಿದ್ದಾನೆ. ಅದರಂತೆ ಇಬ್ಬರೂ ಹಸೆಮಣೆ ಏರಿದ್ದಾರೆ. ಇನ್ನೇನು ತಾಳಿ ಕಟ್ಟಬೇಕು ಎಂಬಷ್ಟರಲ್ಲಿ ಅಲ್ಲಿಗೆ ಹೇಗೋ ಭಾಗ್ಯಾ ಹಾಗೂ ಕುಸುಮಾ ಬಂದಿದ್ದಾರೆ. ಇವರನ್ನ ಕಂಡು ತಾಂಡವ್ ಶಾಕ್ ಆಗುತ್ತಾನೆ. ಆದರೆ, ಇಲ್ಲಿ ಹಿಂದಿನಂತೆ ಆಗುವುದಿಲ್ಲ. ಗಂಡನ ದ್ರೋಹಕ್ಕೆ ಭಾಗ್ಯ ಸ್ವಾಭಿಮಾನದ ಉತ್ತರ ಕೊಡುತ್ತಾಳೆ. ತಾಂಡವ್ ತತ್ತರಿಸಿ ಹೋಗುವಂತೆ ಅವನು ಬೆಲೆ ಕೊಡದ ತಾಳಿಯಯನ್ನು ಕುತ್ತಿಗೆಯಿಂದ ತೆಗೆಯುತ್ತಾಳೆ.
ಕಟ್ಟಿರೋ ತಾಳಿಗೆ ಗಂಡನೇ ಬೆಲೆ ಕೊಡಲಿಲ್ಲ ಅಂದ್ಮೇಲೆ, ಈ ತಾಳಿ ಭಾರ ಆಗ್ತಿದೆ, ಅತ್ತೆ ಎಂದು ಕುಸುಮಾ ಬಳಿ ಹೇಳಿದ್ದಾಳೆ. ಇವರಿಗೆ ಬೇಡದಿರೋ ಸಂಬಂಧ ನನಗೂ ಬೇಡ, ಇದು ನನಗೆ ಬೇಡ! ಇದು ನನಗೆ ಬೇಡ! ಎಂದು ತನ್ನ ಅತ್ತೆಗೆ ಹೇಳುವ ಭಾಗ್ಯ ಒಂದು ದಿಟ್ಟ ನಿರ್ಧಾರ ತೆಗೆದುಕೊಳ್ಳುತ್ತಾಳೆ. ಅದು ಭಾಗ್ಯಳ ಮಹಾ ನಿರ್ಧಾರ. ತಾಳಿಯನ್ನು ತೆಗೆದು ತಾಂಡವ್ನ ಕೈಗಿಡುತ್ತಾಳೆ. ಇದನ್ನು ಕಂಡು ಎಲ್ಲರೂ ಅಚ್ಚರಿಗೊಳ್ಳುತ್ತಾರೆ.
ಸೋಮವಾರ (24 ಫೆಬ್ರವರಿ) ಸಂಜೆ 7ಕ್ಕೆ ಕಲರ್ಸ್ ಕನ್ನಡದಲ್ಲಿ ಭಾಗ್ಯ, ಮಹಾ ನಿರ್ಧಾರ ಒಂದು ಗಂಟೆಯ ವಿಶೇಷ ಎಪಿಸೋಡ್ ಪ್ರಸಾರವಾಗಲಿದೆ.
Trivikram: ರಿಲೀಸ್ ಆಯ್ತು ಬಿಗ್ ಬಾಸ್ ಸ್ಪರ್ಧಿ ತ್ರಿವಿಕ್ರಮ್ ನಟನೆಯ ಹೊಸ ಧಾರಾವಾಹಿಯ ಪ್ರೊಮೋ: ಇಲ್ಲಿದೆ ನೋಡಿ