ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Trivikram: ರಿಲೀಸ್ ಆಯ್ತು ಬಿಗ್ ಬಾಸ್ ಸ್ಪರ್ಧಿ ತ್ರಿವಿಕ್ರಮ್ ನಟನೆಯ ಹೊಸ ಧಾರಾವಾಹಿಯ ಪ್ರೊಮೋ: ಇಲ್ಲಿದೆ ನೋಡಿ

ಕಲರ್ಸ್ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಒಂದು ಶುರುವಾಗಲಿದೆ. ಈ ಸೀರಿಯಲ್ಗೆ ತ್ರಿವಿಕ್ರಮ್ ನಾಯಕನಾಗಿ ಆಯ್ಕೆ ಆಗಿದ್ದಾರೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಧಾರಾವಾಹಿಗೆ ಮುದ್ದು ಸೊಸೆ ಎಂದು ಹೆಸರಿಡಲಾಗಿದೆ.

ರಿಲೀಸ್ ಆಯ್ತು ತ್ರಿವಿಕ್ರಮ್ ನಟನೆಯ ಹೊಸ ಧಾರಾವಾಹಿಯ ಪ್ರೊಮೋ

Trivikram Muddu lakshmi serial

Profile Vinay Bhat Feb 24, 2025 7:37 AM

ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 11ರಲ್ಲಿ ತನ್ನ ವಿಶೇಷ ವ್ಯಕ್ತಿತ್ವದ ಮೂಲಕ ಎಲ್ಲರ ಮನಗೆದ್ದ ಸ್ಪರ್ಧಿ ಎಂದರೆ ಅದು ತ್ರಿವಿಕ್ರಮ್. ಸದ್ಯ ಇವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆಯೇ ಅಭಿಮಾನಿಗಳಿಗೆ ಬಿಗ್ ಸರ್​ಪ್ರೈಸ್ ಒಂದನ್ನು ನೀಡಿದ್ದಾರೆ. ಬಿಗ್ ​ಬಾಸ್ ಮುಕ್ತಾಯದ ನಂತರ ತ್ರಿವಿಕ್ರಮ್​ ಏನ್​ ಮಾಡ್ತಾರೆ ಅನ್ನೋ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಸಿನಿಮಾ ಮಾಡ್ತಾರಾ ಅಥವಾ ಪುನಃ ಧಾರಾವಾಹಿಗೆ ಮರಳುತ್ತಾರ ಎಂಬುದು ಯಕ್ಷ ಪ್ರಶ್ನೆಯಾಗಿತ್ತು. ಇದಕ್ಕೀಗ ಉತ್ತರ ಸಿಕ್ಕಿದೆ. ಇದೀಗ ಕಲರ್ಸ್​ ಕನ್ನಡದಲ್ಲೇ ಹೊಸ ಧಾರಾವಾಹಿ ಮೂಲಕ ತ್ರಿವಿಕ್ರಮ್ ಮತ್ತೆ ವೀಕ್ಷಕರ ಮುಂದೆ ಬರಲಿದ್ದಾರೆ.

ಕಲರ್ಸ್​ ಕನ್ನಡದಲ್ಲಿ ಸದ್ಯದಲ್ಲೇ ಹೊಸ ಧಾರಾವಾಹಿ ಒಂದು ಶುರುವಾಗಲಿದೆ. ಈ ಸೀರಿಯಲ್​ಗೆ ತ್ರಿವಿಕ್ರಮ್​ ನಾಯಕನಾಗಿ ಆಯ್ಕೆ ಆಗಿದ್ದಾರೆ. ಕಿರುತೆರೆಯಲ್ಲಿ ದಾಖಲೆ ಬರೆದ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ಮೇಘಾ ಶೆಟ್ಟಿ ಈ ಹೊಸ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಹೊಸ ಧಾರಾವಾಹಿಗೆ ಮುದ್ದು ಸೊಸೆ ಎಂದು ಹೆಸರಿಡಲಾಗಿದೆ. ಈಗಾಗಲೇ ಪ್ರೋಮೋ ಕೂಡ ರಿಲೀಸ್​ ಆಗಿದೆ.

ಈ ಸೀರಿಯಲ್​ಗೆ ನಾಯಕಿಯಾಗಿ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಟಿಸುತ್ತಿದ್ದಾರೆ. ಈ ಪ್ರೋಮೋದಲ್ಲಿ ತ್ರಿವಿಕ್ರಮ್ ಹೆಣ್ಣು ನೋಡುವ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಪದ್ಮಾವತಿ ಧಾರಾವಾಹಿಯಲ್ಲಿ ಸಾಮ್ರಾಟ್‌ ಪಾತ್ರದಲ್ಲಿ ತ್ರಿವಿಕ್ರಮ್‌ ಕಾಣಿಸಿಕೊಂಡಿದ್ದರು. ಮೇಲ್ನೋಟಕ್ಕೆ ಮುದ್ದು ಸೊಸೆ ಧಾರಾವಹಿ ಬಾಲ್ಯವಿವಾಹದ ಕಥೆ ಎಂದು ಕಾಣುತ್ತಿದೆ.

ಈಗಾಗಲೇ ರಿಲೀಸ್‌ ಆಗಿರುವ ಪ್ರೋಮೋದಲ್ಲಿ ಹೈಸ್ಕೂಲ್‌ನಲ್ಲಿ ಓದುತ್ತಿರುವ ವಿದ್ಯಾಗೆ ಓದುವ ಹುಚ್ಚು. ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿನಿ ಪಟ್ಟ ಪಡೆದುಕೊಳ್ಳುವ ಅವಳಿಗೆ ತಂದೆ ಬೇಗ ಮದುವೆ ಮಾಡಲು ರೆಡಿಯಾಗುತ್ತಾರೆ. ಅಜ್ಜಿಗೆ ಹುಷಾರಿಲ್ಲ ಎಂದು ಹೇಳಿ ಶಾಲೆಯಿಂದ ಮಗಳನ್ನು ಕರೆದುಕೊಂಡು ಬರುತ್ತಾನೆ. ಆಗ ಮನೆಗೆ ಗಂಡಿನ ಕಡೆಯವರು ಬರುತ್ತಾರೆ. ಆ ಗಂಡೇ ತ್ರಿವಿಕ್ರಮ್.‌ ಹುಡುಗನ ಕಡೆಯವರು ವಿದ್ಯಾಳನ್ನು ಒಪ್ಪುತ್ತಾರೆ, ಮದುವೆಯಾದಮೇಲೆ ವಿದ್ಯಾ ಓದುವುದು ಬೇಡ ಎನ್ನುತ್ತಾರೆ. ಆಗ ವಿದ್ಯಾ ಬೇಸರ ಮಾಡಿಕೊಳ್ಳುತ್ತಾಳೆ.



ಅಂದಹಾಗೆ ಮುದ್ದು ಸೊಸೆ ತಮಿಳು ಧಾರಾವಾಹಿಯ ರಿಮೇಕ್​. ಒಟ್ಟಿನಲ್ಲಿ ತ್ರಿವಿಕ್ರಮ್​ ಮುದ್ದು ಸೊಸೆ ನಾಯಕ ಅನ್ನೋದು ಕನ್ಫರ್ಮ್​ ಆಗಿದೆ. ಸದ್ಯದಲ್ಲೇ ಮತ್ತೊಂದು ಹೊಸ ಪ್ರೋಮೋ ಕೂಡ ರಿಲೀಸ್ ಆಗಲಿದೆಯಂತೆ.

Bro Gowda: ಎಂಟು ವರ್ಷದ ಪ್ರೀತಿಯನ್ನು ಬಚ್ಚಿಟ್ಟಿದ್ದೇಕೆ ಶಮಂತ್?: ಮೇಘನಾ ಬಗ್ಗೆ ಬ್ರೋ ಗೌಡ ಏನಂದ್ರು?