BOB Recruitment 2025: ಬ್ಯಾಂಕ್ ಆಫ್ ಬರೋಡಾದಲ್ಲಿದೆ 1,267 ಹುದ್ದೆ; ಪದವಿ ವಿದ್ಯಾರ್ಹತೆ ಹೊಂದಿದ್ದರೆ ಈಗಲೇ ಅಪ್ಲೈ ಮಾಡಿ
BOB Recruitment 2025: ಬ್ಯಾಂಕ್ ಆಫ್ ಬರೋಡಾ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಮ್ಯಾನೇಜರ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್, ಮ್ಯಾನೇಜರ್-ಸೇಲ್ಸ್ ಸೇರಿದಂತೆ ಒಟ್ಟು 1,267 ಹುದ್ದೆಗಳಿಗೆ. ಪದವಿ, ಸ್ನಾತಕೋತ್ತರ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಡಿ. 28ರಿಂದ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ 2025ರ ಜ. 17
Ramesh B
December 27, 2024
ಬೆಂಗಳೂರು: ಬ್ಯಾಂಕ್ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್. ದೇಶದ ಪ್ರತಿಷ್ಠಿತ ಬ್ಯಾಂಕ್ ಆಫ್ ಬರೋಡಾ (Bank of Baroda) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (BOB Recruitment 2025). ಮ್ಯಾನೇಜರ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್, ಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್, ಮ್ಯಾನೇಜರ್-ಸೇಲ್ಸ್ ಸೇರಿದಂತೆ ಒಟ್ಟು 1,267 ಹುದ್ದೆಗಳಿಗೆ. ಪದವಿ, ಸ್ನಾತಕೋತ್ತರ ಪದವಿ ಹೊಂದಿದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಡಿ. 28ರಿಂದ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ 2025ರ ಜ. 17 (Job Guide).
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
ಅಗ್ರಿಕಲ್ಚರ್ ಮಾರ್ಕೆಟಿಂಗ್ ಆಫೀಸರ್ - 150 ಹುದ್ದೆಅಗ್ರಿಕಲ್ಚರ್ ಮಾರ್ಕೆಟಿಂಗ್ ಮ್ಯಾನೇಜರ್ - 50 ಹುದ್ದೆಮ್ಯಾನೇಜರ್ - ಸೇಲ್ಸ್ - 450 ಹುದ್ದೆಮ್ಯಾನೇಜರ್ - ಕ್ರೆಡಿಟ್ ಅನಾಲಿಸ್ಟ್ - 78 ಹುದ್ದೆಸೀನಿಯರ್ ಮ್ಯಾನೇಜರ್ - ಕ್ರೆಡಿಟ್ ಅನಾಲಿಸ್ಟ್ - 46 ಹುದ್ದೆಸೀನಿಯರ್ ಮ್ಯಾನೇಜರ್ - ಎಂಎಸ್ಎಂಇ ರಿಲೇಷನ್‌ಶಿಪ್ - 205 ಹುದ್ದೆಹೆಡ್ - ಎಸ್ಎಂಇ ಸೆಲ್ - 12 ಹುದ್ದೆಆಫೀಸರ್ - ಸೆಕ್ಯುರಿಟಿ ಅನಾಲಿಸ್ಟ್ - 5 ಹುದ್ದೆಮ್ಯಾನೇಜರ್ - ಸೆಕ್ಯುರಿಟಿ ಅನಾಲಿಸ್ಟ್ - 2 ಹುದ್ದೆಸೀನಿಯರ್ ಮ್ಯಾನೇಜರ್ - ಸೆಕ್ಯುರಿಟಿ ಅನಾಲಿಸ್ಟ್ - 2 ಹುದ್ದೆಟೆಕ್ನಿಕಲ್ ಆಫೀಸರ್-ಸಿವಿಲ್ ಎಂಜಿನಿಯರ್ - 6 ಹುದ್ದೆಟೆಕ್ನಿಕಲ್ ಮ್ಯಾನೇಜರ್ - ಸಿವಿಲ್ ಎಂಜಿನಿಯರ್ - 2 ಹುದ್ದೆಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ - ಸಿವಿಲ್ ಎಂಜಿನಿಯರ್ - 4 ಹುದ್ದೆಟೆಕ್ನಿಕಲ್ ಆಫೀಸರ್-ಎಲೆಕ್ಟ್ರಿಕಲ್ ಎಂಜಿನಿಯರ್ - 4 ಹುದ್ದೆಟೆಕ್ನಿಕಲ್ ಮ್ಯಾನೇಜರ್ - ಎಲೆಕ್ಟ್ರಿಕಲ್ ಎಂಜಿನಿಯರ್ - 2 ಹುದ್ದೆಟೆಕ್ನಿಕಲ್ ಸೀನಿಯರ್ ಮ್ಯಾನೇಜರ್ - ಎಲೆಕ್ಟ್ರಿಕಲ್ ಎಂಜಿನಿಯರ್ - 2 ಹುದ್ದೆಟೆಕ್ನಿಕಲ್ ಮ್ಯಾನೇಜರ್ - ಆರ್ಕಿಟೆಕ್ಟ್ - 2 ಹುದ್ದೆಸೀನಿಯರ್ ಮ್ಯಾನೇಜರ್ - ಸಿ & ಐಸಿ ರಿಲೇಷನ್‌ಶಿಪ್ ಮ್ಯಾನೇಜರ್ - 10 ಹುದ್ದೆಚೀಫ್ ಮ್ಯಾನೇಜರ್ - ಸಿ & ಐಸಿ ರಿಲೇಷನ್‌ಶಿಪ್ ಮ್ಯಾನೇಜರ್ - 5 ಹುದ್ದೆಸೀನಿಯರ್ ಮ್ಯಾನೇಜರ್-ಸಿ & ಐಸಿ ಕ್ರೆಡಿಟ್ ಅನಾಲಿಸ್ಟ್ - 5 ಹುದ್ದೆಚೀಫ್ ಮ್ಯಾನೇಜರ್ - ಸಿ & ಐಸಿ ಕ್ರೆಡಿಟ್ ಅನಾಲಿಸ್ಟ್ - 10 ಹುದ್ದೆಸೀನಿಯರ್ ಮ್ಯಾನೇಜರ್ - ಬಿಸಿನೆಸ್ ಫೈನಾನ್ಸ್ - 5 ಹುದ್ದೆಚೀಫ್ ಮ್ಯಾನೇಜರ್ - ಬಿಸಿನೆಸ್ ಫೈನಾನ್ಸ್ - 5 ಹುದ್ದೆಅಸಿಸ್ಟೆಂಟ್ ಜನರಲ್ ಮ್ಯಾನೇಜರ್ - ಬಿಸಿನೆಸ್ ಫೈನಾನ್ಸ್ - 3 ಹುದ್ದೆಸೀನಿಯರ್ ಡೆವಲಪರ್ ಫುಲ್ ಸ್ಟ್ಯಾಕ್ ಜಾವಾ - 26 ಹುದ್ದೆಡೆವಲಪರ್ ಫುಲ್ ಸ್ಟ್ಯಾಕ್ ಜಾವಾ - 20 ಹುದ್ದೆಸೀನಿಯರ್ ಡೆವಲಪರ್ - ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್ - 10 ಹುದ್ದೆಡೆವಲಪರ್ - ಮೊಬೈಲ್ ಅಪ್ಲಿಕೇಶನ್ ಡೆವಲಪ್‌ಮೆಂಟ್ - 10 ಹುದ್ದೆಕ್ಲೌಡ್ ಎಂಜಿನಿಯರ್ - 6 ಹುದ್ದೆಇಟಿಎಲ್ ಡೆವಲಪರ್ - 7 ಹುದ್ದೆಸೀನಿಯರ್ ಇಟಿಎಲ್ ಡೆವಲಪರ್ - 5 ಹುದ್ದೆಎಐ ಎಂಜಿನಿಯರ್ - 20 ಹುದ್ದೆಸೀನಿಯರ್ ಎಐ ಎಂಜಿನಿಯರ್ - 4 ಹುದ್ದೆಎಪಿಐ ಡೆವಲಪರ್ - 6 ಹುದ್ದೆಸೀನಿಯರ್ ಎಪಿಐ ಡೆವಲಪರ್ - 8 ಹುದ್ದೆನೆಟ್‌ವರ್ಕ್ ನಿರ್ವಾಹಕ - 5 ಹುದ್ದೆಸರ್ವರ್ ನಿರ್ವಾಹಕ (ಲಿನಕ್ಸ್ & ಯುನಿಕ್ಸ್)- 10 ಹುದ್ದೆಸೀನಿಯರ್ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ (ಒರಾಕಲ್)- 6 ಹುದ್ದೆಡೇಟಾಬೇಸ್ ನಿರ್ವಾಹಕ - 8 ಹುದ್ದೆಸೀನಿಯರ್ ಸ್ಟೊರೇಜ್ ನಿರ್ವಾಹಕ ಮತ್ತು ಬ್ಯಾಕಪ್ - 2 ಹುದ್ದೆಸ್ಟೊರೇಜ್ ನಿರ್ವಾಹಕ ಮತ್ತು ಬ್ಯಾಕಪ್ 6 ಹುದ್ದೆಪೋಸ್ಟ್‌ಗ್ರೆಸ್ ನಿರ್ವಾಹಕ - 2 ಹುದ್ದೆಫಿನಾಕಲ್ ಡೆವಲಪರ್ - 10 ಹುದ್ದೆಸೀನಿಯರ್ ಫಿನಾಕಲ್ ಡೆವಲಪರ್ - 6 ಹುದ್ದೆಸೀನಿಯರ್ ಮ್ಯಾನೇಜರ್-ಡೇಟಾ ಸೈಂಟಿಸ್ಟ್ - 2 ಹುದ್ದೆಚೀಫ್ ಮ್ಯಾನೇಜರ್ - ಡೇಟಾ ಸೈಂಟಿಸ್ಟ್ - 1 ಹುದ್ದೆಡೇಟಾ ವೇರ್‌ಹೌಸ್ ಕಾರ್ಯಾಚರಣೆ - 3 ಹುದ್ದೆನೆಟ್ ಡೆವಲಪರ್ - 2 ಹುದ್ದೆಐಟಿ ಇಂಜಿನಿಯರ್ - 1 ಹುದ್ದೆಡಿಕ್ಯೂ ಅನಾಲಿಸ್ಟ್ - 1 ಹುದ್ದೆಡೇಟಾ ಪ್ರೊಫೈಲಿಂಗ್ - 1 ಹುದ್ದೆಮ್ಯಾನೇಜರ್ - ನಿಯಂತ್ರಕ ರಿಟರ್ನ್ಸ್‌ನ ಆಟೋಮೇಷನ್ ಮತ್ತು ನಿರ್ವಹಣೆ - 3 ಹುದ್ದೆಸೀನಿಯರ್ ಮ್ಯಾನೇಜರ್ - ಇನ್ಫರ್ಮೇಷನ್ ಸೆಕ್ಯುರಿಟಿ ಆಫೀಸರ್ - 1 ಹುದ್ದೆಚೀಫ್ ಮ್ಯಾನೇಜರ್ - ಮಾಹಿತಿ ಭದ್ರತಾ ಅಧಿಕಾರಿ - 1 ಹುದ್ದೆಸೀನಿಯರ್ ಮ್ಯಾನೇಜರ್ - ಡೇಟಾ ಗೌಪ್ಯತೆ ಅಧಿಕಾರಿ - 1 ಹುದ್ದೆಚೀಫ್ ಮ್ಯಾನೇಜರ್ - ಡೇಟಾ ಗೌಪ್ಯತೆ ಅನುಸರಣೆ ಅಧಿಕಾರಿ - 1 ಹುದ್ದೆಮ್ಯಾನೇಜರ್ - ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್ & ಮೆಟಾಡೇಟಾ - 2 ಹುದ್ದೆಸೀನಿಯರ್ ಮ್ಯಾನೇಜರ್ - ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್ & ಮೆಟಾಡೇಟಾ - 1 ಹುದ್ದೆಚೀಫ್ ಮ್ಯಾನೇಜರ್ - ಮಾಸ್ಟರ್ ಡೇಟಾ ಮ್ಯಾನೇಜ್‌ಮೆಂಟ್ & ಮೆಟಾಡೇಟಾ - 1 ಹುದ್ದೆಮ್ಯಾನೇಜರ್ - ಕ್ಯೂಲಿಕ್ ಸೆನ್ಸ್ ಡೆವಲಪರ್ - 2 ಹುದ್ದೆಸೀನಿಯರ್ ಮ್ಯಾನೇಜರ್ - ಕ್ಯೂಲಿಕ್ ಸೆನ್ಸ್ ಡೆವಲಪರ್ - 1 ಹುದ್ದೆವಿವಿಧ ಹುದ್ದೆಗಳಿಗೆ ಅನುಗುಣವಾಗಿ ಪದವಿ, ಸ್ನಾತಕೋತ್ತರ ಪದವಿ, ಎಂಬಿಎ, ಪಿಜಿಡಿಎಂ, ಬಿ.ಇ ಅಥವಾ ಬಿ.ಟೆಕ್, ಎಂಸಿಎ, ಎಂ.ಎಸ್‌ಸಿ, ಪಿಜಿಡಿಎಂ ಮತ್ತು ಕಾರ್ಯಾನುಭವ ಹೊಂದಿದವರು ಅರ್ಜಿ ಸಲ್ಲಿಸಬಹುದು.
ವಯೋಮಿತಿ
ವಿವಿಧ ಹುದ್ದೆಗಳಿಗೆ ಅನುಗುಣವಾಗಿ 22 ವರ್ಷಗಳಿಂದ 45 ವರ್ಷದವರೆಗಿನವರು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ
ಸಾಮಾನ್ಯ/ಇಡಬ್ಲ್ಯುಎಸ್/ಒಬಿಸಿ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 600 ರೂ. ಮತ್ತು ಎಸ್‌ಸಿ/ಎಸ್‌ಟಿ/ಪಿಡಬ್ಲ್ಯುಡಿ/ಮಹಿಳಾ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 100 ರೂ. ಪಾವತಿಸಬೇಕು. ಪಾವತಿ ವಿಧಾನ: ಆನ್‌ಲೈನ್
ಆಯ್ಕೆ ವಿಧಾನ
ಆನ್‌ಲೈನ್ ಟೆಸ್ಟ್, ಸೈಕೋಮೆಟ್ರಿಕ್ ಟೆಸ್ಟ್ (Psychometric Test), ಗ್ರೂಪ್ ಡಿಸ್ಕಷನ್, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
BOB Recruitment 2025 ಅಧಿಸೂಚನೆ ಓದಲು ಇಲ್ಲಿ ಕ್ಲಿಕ್ ಮಾಡಿ.
ಅರ್ಜಿ ಸಲ್ಲಿಸುವ ವಿಧಾನ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ(https://karnatakabankpo.azurewebsites.net/)
ಹೆಸರು ನೋಂದಾಯಿಸಿ.
ಹೊಸ ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
ಈಗ ಕಂಡುಬರುವ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
ಅಗತ್ಯ ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
ಆನ್‌ಲೈನ್ ಮೂಲಕ ಅರ್ಜಿ ಸುಲ್ಕ ಪಾವತಿಸಿ.
ಭರ್ತಿ ಮಾಡಿದ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್ ಫಾರಂ ಡೌನ್‌ಲೋಡ್ ಮಾಡಿಟ್ಟುಕೊಳ್ಳಿ.
ಈ ಸುದ್ದಿಯನ್ನೂ ಓದಿ: Job Guide: ನ್ಯಾಷನಲ್ ಹೈಡ್ರೋಎಲೆಕ್ಟ್ರಿಕ್ ಪವರ್ ಕಾರ್ಪೋರೇಷನ್‌ನ 118 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಅಪ್ಲೈ ಮಾಡುವ ವಿಧಾನ ಇಲ್ಲಿದೆ