ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs SRH: ಸಿಕ್ಸರ್‌ ಬಾರಿಸದೆ ದಾಖಲೆ ಬರೆದ ಚೆನ್ನೈ-ಹೈದರಾಬಾದ್‌ ಪಂದ್ಯ

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ತಂಡಕ್ಕೆ ಪ್ಲೇ ಆಫ್ ಕನಸು ಜೀವಂತವಿರಿಸಲು ಮುಂದಿನ ತನ್ನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಅಲ್ಲದೆ ಇತರ ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಗಿರಲಿದೆ. ಒಂದು ಪಂದ್ಯ ಸೋತರೂ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.

ಸಿಕ್ಸರ್‌ ಬಾರಿಸದೆ ದಾಖಲೆ ಬರೆದ ಚೆನ್ನೈ-ಹೈದರಾಬಾದ್‌ ಪಂದ್ಯ

Profile Abhilash BC Apr 26, 2025 9:11 AM

ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ಸನ್‌ರೈಸರ್ಸ್‌ ಹೈದರಾಬಾದ್‌(CSK vs SRH) ತಂಡಗಳ ನಡುವೆ ಶುಕ್ರವಾರ ನಡೆದ ಐಪಿಎಲ್‌(IPL 2025) ಪಂದ್ಯ ವಿಶೇಷ ದಾಖಲೆಯೊಂದನ್ನು ನಿರ್ಮಿಸಿದೆ. ಪವರ್‌ ಪ್ಲೇಯಲ್ಲಿ ಉಭಯ ತಂಡಗಳಿಂದ ಕನಿಷ್ಠ ಒಂದೂ ಸಿಕ್ಸರ್‌ ಬಾರಿಸಲು ಸಾಧ್ಯವಾಗಿಲ್ಲ. ಇದು ಹಾಲಿ ಆವೃತ್ತಿಯ ಐಪಿಎಲ್‌ನಲ್ಲಿ ಎರಡೂ ತಂಡಗಳು ಪವರ್‌ ಪ್ಲೇಯಲ್ಲಿ ಸಿಕ್ಸರ್‌ ಬಾರಿಸದ ಮೊದಲ ಪಂದ್ಯ ಎನಿಸಿತು. ಸೋಲು ಕಂಡ ಚೆನ್ನೈ ‌ಚೆಪಾಕ್‌ ಮೈದಾನದಲ್ಲಿ( MA Chidambaram Stadium) ಇದೇ ಮೊದಲ ಬಾರಿಗೆ ಆವೃತ್ತಿಯೊಂದರಲ್ಲಿ ಸತತ 4 ಸೋಲು ಕಂಡ ಅವಮಾನ ಎದುರಿಸಿತು.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಚೆನ್ನೈ ತಂಡ ಡಿವಾಲ್ಡ್​ ಬ್ರೆವಿಸ್​ 42 ರನ್​ (25 ಎಸೆತ, 1 ಬೌಂಡರಿ, 4 ಸಿಕ್ಸರ್​) ದಿಟ್ಟ ಆಟದ ನೆರವಿನಿಂದ 19.5 ಓವರ್​ಗಳಲ್ಲಿ 154 ರನ್​ ಗಳಿಸಿತು. ಪ್ರತಿಯಾಗಿ ಬ್ಯಾಟ್‌ ಮಾಡಿದ ಸನ್​ರೈಸರ್ಸ್​ ಇಶಾನ್​ ಕಿಶನ್​ (44 ರನ್​, 34 ಎಸೆತ, 5 ಬೌಂಡರಿ, 1 ಸಿಕ್ಸರ್​) ಮತ್ತು ಹೋರಾಟದಿಂದ 18.4 ಓವರ್​ಗಳಲ್ಲಿ 5 ವಿಕೆಟ್​ಗೆ 155 ರನ್​ ಗಳಿಸಿ ಗೆಲುವು ಸಾಧಿಸಿತು. ಹೈದರಾಬಾದ್‌ ಪರ ಘಾತಕ ಬೌಲಿಂಗ್‌ ದಾಳಿ ನಡೆಸಿದ ಹರ್ಷಲ್​ ಪಟೇಲ್​ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

43 ವರ್ಷದ ಧೋನಿ ಅವರು ಈ ಪಂದ್ಯದಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ 400 ಟಿ20 ಪಂದ್ಯಗಳನ್ನು ಪೂರ್ತಿಗೊಳಿಸಿ, ಈ ಸಾಧನೆಗೈದ ನಾಲ್ಕನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡರು. ಈ ಪಟ್ಟಿಯಲ್ಲಿ ರೋಹಿತ್ ಶರ್ಮಾ 456 ಪಂದ್ಯಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ. ದಿನೇಶ್ ಕಾರ್ತಿಕ್(412) ಮತ್ತು ವಿರಾಟ್ ಕೊಹ್ಲಿ(407) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ IPL 2025: 14ರ ಪೋರ ವೈಭವ್‌ ಸೂರ್ಯವಂಶಿ ಭಯಮುಕ್ತ ಬ್ಯಾಟಿಂಗ್‌ಗೆ ಸುರೇಶ್‌ ರೈನಾ ಫಿದಾ!

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ತಂಡಕ್ಕೆ ಪ್ಲೇ ಆಫ್ ಕನಸು ಜೀವಂತವಿರಿಸಲು ಮುಂದಿನ ತನ್ನ ಎಲ್ಲಾ ಪಂದ್ಯಗಳನ್ನು ಗೆಲ್ಲಬೇಕಿದೆ. ಅಲ್ಲದೆ ಇತರ ತಂಡಗಳ ಫಲಿತಾಂಶದ ಮೇಲೂ ಅವಲಂಬಿತವಾಗಿರಲಿದೆ. ಒಂದು ಪಂದ್ಯ ಸೋತರೂ ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ. ಆ ಬಳಿಕ ಉಳಿದ ಪಂದ್ಯಗಳನ್ನು ಕೇವಲ ಔಪಚಾರಿಕವಾಗಿ ಆಡಬೇಕು.