Health Tips: ಥೈರಾಯ್ಡ್‌ ಜಾಗೃತಿ ಮಾಸ; ಚಿಟ್ಟೆ ಗ್ರಂಥಿಯ ಬಗ್ಗೆ ನಮಗೆಷ್ಟು ಗೊತ್ತು?

Health Tips: ಜನವರಿ ತಿಂಗಳನ್ನು ಥೈರಾಯ್ಡ್‌ ಜಾಗೃತಿ ಮಾಸ ಎಂದು ಆಚರಿಸಲಾಗುತ್ತದೆ. ಥೈರಾಯ್ಡ್‌ ಗ್ರಂಥಿಯ ಪ್ರಾಮುಖ್ಯತೆ ಏನು ಎನ್ನುವ ವಿವರ ಇಲ್ಲಿದೆ.

image-f42d2f42-1217-4cbe-8e39-0b5db4349c80.jpg
Profile Ramesh B January 7, 2025
ಬೆಂಗಳೂರು: ನಮ್ಮ ದೇಹವನ್ನು ಆರೋಗ್ಯವಾಗಿಡುವುದಕ್ಕೆ ಮತ್ತು ಅದರ ಸೂಕ್ಷ್ಮಾತಿಸೂಕ್ಷ್ಮ ಅಗತ್ಯಗಳನ್ನು ಪೂರೈಸುವುದಕ್ಕೆ ನಮ್ಮದೇ ದೇಹದಲ್ಲಿನ ವ್ಯವಸ್ಥೆ ಸಕ್ಷಮವಾಗಿದೆ. ಆದರೆ ಯಾವುದೇ ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ವ್ಯತ್ಯಾಸವಾದರೆ ಏನಾಗುತ್ತದೆ ಎಂಬ ಬಗ್ಗೆ ನಮಗೆ ಅರಿವಿರುವುದು ಅಗತ್ಯ. ಹಾಗಾಗಿಯೇ ಜನವರಿ ತಿಂಗಳನ್ನು ಥೈರಾಯ್ಡ್‌ ಜಾಗೃತಿ ಮಾಸ (Thyroid Awareness Month) ಎಂದು ಆಚರಿಸಲಾಗುತ್ತದೆ (Health Tips). ನಮ್ಮ ಗಂಟಲಿನ ಮುಂಭಾಗದಲ್ಲಿರುವ ಚಿಟ್ಟೆಯಾಕಾರದ ಪುಟ್ಟ ಗ್ರಂಥಿಯಿದು. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ, ಈ ಪುಟ್ಟ ಗ್ರಂಥಿ ಸ್ರವಿಸುವ ಚೋದಕಗಳು ನಮ್ಮ ಆರೋಗ್ಯ ರಕ್ಷಣೆಗೆ ಬಹಳ ಮುಖ್ಯವಾದದ್ದು. ದೇಹದ ಉಷ್ಣತೆಯನ್ನು ನಿಯಂತ್ರಿಸುವುದು, ಹೃದಯದ ಬಡಿತವನ್ನು ಸರಾಗ ಮಾಡುವುದು, ಶರೀರದ ಚಯಾಪಚಯ ಕ್ರಿಯೆಯನ್ನು ನಿರ್ವಹಿಸುವುದು- ಇಂಥ ಕೆಲವು ಮುಖ್ಯ ಹೊಣೆಗಳನ್ನು ಈ ಗ್ರಂಥಿ ನಿರ್ವಹಿಸುತ್ತದೆ. ಈ ಗ್ರಂಥಿಗಳು ಉತ್ಪಾದಿಸುವ ಚೋದಕಗಳ ಅಥವಾ ಹಾರ್ಮೋನುಗಳ ಪ್ರಮಾಣ ಹೆಚ್ಚು ಇಲ್ಲವೇ ಕಡಿಮೆಯಾದರೆ ಥೈರಾಯ್ಡ್‌ ಸಮಸ್ಯೆ ಇದೆಯೆಂದು ಅರ್ಥ. ಯಾರಿಗೆ ತೊಂದರೆ ಹೆಚ್ಚು? ಈ ಗ್ರಂಥಿ ಸ್ರವಿಸುವ ಟಿ3 ಮತ್ತು ಟಿ4 ಚೋದಕಗಳು (T3, T4 hormones) ಏರಿಳಿತವಾಗುವ ಸಮಸ್ಯೆ ಯಾರಲ್ಲೂ ಉಂಟಾಗಬಹುದು. ಆದರೆ ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುವುದು ಸುಮಾರು 8 ಪಟ್ಟು ಹೆಚ್ಚು. ಕೆಲವೊಮ್ಮೆ ಬಾಲ್ಯದಲ್ಲೇ ಈ ಸಮಸ್ಯೆ ಕಾಣಿಸಿಕೊಳ್ಳಬಹುದು. ವಯಸ್ಸು ಮಾಗಿದಂತೆ ಈ ಸಮಸ್ಯೆ ಕಾಣಿಸಿಕೊಳ್ಳುವ ಪ್ರಮಾಣ ಏರುತ್ತದೆ. ಶಿಶು ಜನನದ ನಂತರ, ಋತುಬಂಧದ ಸಮಯದಲ್ಲಿ ಅಥವಾ 60ರ ನಂತರ ಥೈರಾಯ್ಡ್‌ ಸಮಸ್ಯೆ ಉಂಟಾಗಬಹುದು. ಕುಟುಂಬದಲ್ಲಿ ಥೈರಾಯ್ಡ್‌ ಸಮಸ್ಯೆಗಳಿದ್ದರೆ, ಆನುವಂಶಿಕವಾಗಿ ಇದು ಮುಂದುವರಿದು ಬರಬಹುದು. ಗ್ರೇವ್‌ ಅಥವಾ ಹಶಿಮೊಟೊದಂಥ ಅಟೋಇಮ್ಯೂನ್‌ ರೋಗಗಳು ಥೈರಾಯ್ಡ್‌ ಸಮಸ್ಯೆಗಳನ್ನು ತಂದಿಕ್ಕಬಹುದು. ಅಯೋಡಿನ್‌ ಕೊರತೆ ಇದ್ದರೆ ಥೈರಾಯ್ಡ್‌ ಸಮಸ್ಯೆ ಬೆನ್ನು ಬೀಳುವುದು ಸಾಮಾನ್ಯ. ವಿಕಿರಣಗಳಿಗೆ ತೆರೆದುಕೊಳ್ಳುವುದು, ಕೆಲವು ಔಷಧಿಗಳು ಮತ್ತು ಕುತ್ತಿಗೆಯ ಶಸ್ತ್ರ ಚಿಕಿತ್ಸೆಗಳು ಈ ಸಮಸ್ಯೆಗೆ ನಾಂದಿ ಹಾಡಬಹುದು. ಗರ್ಭಾವಸ್ಥೆಯೂ ಕೆಲವೊಮ್ಮೆ ಇದಕ್ಕೆ ಕಾರಣವಾದೀತು. ಹೀಗೆ ಥೈರಾಯ್ಡ್‌ ಏರುಪೇರಿಗೆ ಬಹಳಷ್ಟು ಕಾರಣಗಳಿವೆ. image-8d0f8e18-3002-4ce7-9681-13002e090019.jpg ಹೈಪೋ ಥೈರಾಯ್ಡಿಸಂ ಚೋದಕಗಳ ಸ್ರವಿಸುವಿಕೆ ಕಡಿಮೆಯಾದಾಗ ಕಾಣುವ ಸಮಸ್ಯೆಯಿದು. ಈ ಸಮಸ್ಯೆ ಆರಂಭದಲ್ಲಿ ಅಷ್ಟಾಗಿ ಗಮನಕ್ಕೆ ಬಾರದಿರಬಹುದು. ಆದರೆ ಸುಸ್ತು, ಆಯಾಸ, ಸುಮ್ಮನೆ ಚಳಿಯಾಗುವುದು, ಮಲಬದ್ಧತೆ, ಒಣ ಚರ್ಮ, ತೂಕ ಹೆಚ್ಚಳ, ಧ್ವನಿ ಒರಟಾಗುವುದು, ಮಾಂಸಖಂಡಗಳಲ್ಲಿ ನೋವು, ಕೂದಲು ಉದುರುವುದು, ಖಿನ್ನತೆ, ಫಲವಂತಿಕೆಯ ಸಮಸ್ಯೆ, ಮಾಸಿಕ ಸ್ರಾವ ಏರುಪೇರಾಗುವುದು- ಇಂಥ ಲಕ್ಷಣಗಳು ಉಂಟಾಗಬಹುದು. ಹೈಪರ್‌ ಥೈರಾಯ್ಡಿಸಂ ಹಾರ್ಮೋನುಗಳ ಸ್ರಾವ ಹೆಚ್ಚಾದಾಗ ಬರುವ ಸಮಸ್ಯೆಯಿದು. ಹೃದಯದ ಬಡಿತ ಏರುಪೇರಾಗುವುದು, ಹಸಿವು ಹೆಚ್ಚಾಗಿ ಹೆಚ್ಚು ತಿಂದರೂ ಇಳಿಯುವ ತೂಕ, ಹೊಟ್ಟೆ ಸರಿ ಇಲ್ಲದಂತಾಗುವುದು, ದೃಷ್ಟಿ ಸಮಸ್ಯೆ, ಋತುಚಕ್ರ ಏರುಪೇರು, ನಿದ್ರಹೀನತೆ, ಗಂಟಲು ಊದಿಕೊಂಡಂತೆ ಕಾಣುವುದು, ಕೂದಲು ತುಂಡಾಗಿ ಉದುರುವುದು, ಬೆವರುವ ಪ್ರಮಾಣ ಹೆಚ್ಚುವುದು- ಇಂಥ ಲಕ್ಷಣಗಳಿದ್ದರೆ ಎಚ್ಚರಿಕೆ ಅಗತ್ಯ. ಚಳಿಗಾಲದಲ್ಲಿ ವ್ಯತ್ಯಾಸವೇಕೆ? ಥೈರಾಯ್ಡ್‌ ಕೆಲಸ ಸರಿಯಾಗಿ ಇರುವವರಲ್ಲೂ ಚಳಿಗಾಲದಲ್ಲಿ ಕೊಂಚ ಏರುಪೇರು ದಾಖಲಾದರೆ ಹುಬ್ಬೇರಿಸಬೇಕಿಲ್ಲ. ತಪಾಸಣೆಯಲ್ಲಿ ಟಿಎಸ್‌ಎಚ್‌ ಮಟ್ಟ ಹೆಚ್ಚಿರುವುದು ಕಂಡುಬರಬಹುದು. ದೇಹದ ಚಯಾಪಚಯವನ್ನು ನಿರ್ವಹಿಸಲು ಹೆಚ್ಚಿನ ಹಾರ್ಮೋನುಗಳು ಚಳಿಗಾಲದಲ್ಲಿ ಅಗತ್ಯ. ಜೊತೆಗೆ, ದೇಹದ ಆಂತರಿಕ ಉಷ್ಣತೆಯನ್ನು ಕಾಪಾಡಿಕೊಳ್ಳುವುದಕ್ಕೂ ಇವುಗಳ ನೆರವು ಬೇಕು. ಈ ಕಾರಣಗಳಿಗೆ ಚಳಿಯ ವಾತಾವರಣದಲ್ಲಿ ಗ್ರಂಥಿಯ ಚಟುವಟಿಕೆ ಏರುಪೇರಾಗುವುದು ಹೌದು. ಅದರಲ್ಲೂ ದೇಹದ ಚಯಾಪಚಯ ನಿರ್ವಹಿಸುವ ಟಿ೩ ಮತ್ತು ಟಿ೪ ಚೋದಕಗಳಲ್ಲಿ ಹೆಚ್ಚಳ ಕಂಡುಬರುತ್ತದೆ. image-0af1fc52-ff15-4e92-bcb0-949317579587.jpg ಋತುಮಾನಕ್ಕೆ ತಕ್ಕಂತೆ ನಮ್ಮ ಆಹಾರಕ್ರಮಗಳಲ್ಲಿ ಬದಲಾವಣೆ ಮಾಡಿಕೊಳ್ಳುತ್ತೇವೆ. ಇದರಿಂದ ಥೈರಾಯ್ಡ್‌ ಕೆಲಸದಲ್ಲಿ ಏರಿಳಿತವಾಗಬಹುದು. ಚಳಿಗಾಲದ ವೈರಸ್‌ ಸೋಂಕುಗಳು ಥೈರಾಯ್ಡ್‌ ಚಟಿವಟಿಕೆಯಲ್ಲಿ ವ್ಯತ್ಯಾಸ ತರಬಹುದು. ಬಿಸಿಲು ಕಡಿಮೆಯಿರುವ ದಿನಗಳು ಎದುರಾದರೆ, ದೇಹದ ಆಂತರಿಕ ಗಡಿಯಾರ ಅಥವಾ ಸರ್ಕೇಡಿಯನ್‌ ರಿದಂ ವ್ಯತ್ಯಾಸವಾಗುತ್ತದೆ. ಇದೂ ಸಹ ಥೈರಾಯ್ಡ್‌ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದು. ಮಲಬದ್ಧತೆ, ಖಿನ್ನತೆ, ದೇಹದ ಚಟುವಟಿಕೆ ನಿಧಾನವಾಗುವುದು, ತೂಕದಲ್ಲಿ ಏರಿಳಿತ, ದೇಹದಲ್ಲೆಲ್ಲ ನೋವು, ಸುಸ್ತು, ಚಳಿಯ ಅನುಭವ- ಇಂಥ ಹಲವು ಲಕ್ಷಣಗಳಿದ್ದರೆ ಥೈರಾಯ್ಡ್‌ ತಪಾಸಣೆ ಮಾಡಿಸಿಕೊಳ್ಳಬೇಕಾದ್ದು ಅಗತ್ಯ. ಈ ಸುದ್ದಿಯನ್ನೂ ಓದಿ: Health Tips: ಬೆಳಗಿನ ಉಪಾಹಾರ ಹೇಗಿರಬೇಕು?
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ