Seema Haider: "ನನಗೆ ಮಾಟ ಮಾಡಿಸಿದ್ದಾಳೆ..." ಎನ್ನುತ್ತ ಸೀಮಾ ಹೈದರ್ ಮನೆಗ ನುಗ್ಗಿದ ವ್ಯಕ್ತಿ
ತೇಜಸ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. "ವಿಚಾರಣೆ ಸಮಯದಲ್ಲಿ, ಸೀಮಾ ಹೈದರ್ (Seema Haider) ತನ್ನ ಮೇಲೆ ಮಾಟಮಂತ್ರ ಮಾಡಿದ್ದಾಳೆ ಎಂದು ಅವನು ಪೊಲೀಸರಿಗೆ ತಿಳಿಸಿದ್ದಾನೆ" ಎಂದು ಉಪಾಧ್ಯಾಯ ಹೇಳಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

ಸೀಮಾ ಹೈದರ್

ನೋಯ್ಡಾ: ಭಾರತೀಯನನ್ನು ಮದುವೆಯಾಗಿ ಭಾರತದಲ್ಲಿ ನೆಲೆಸಿರುವ ಪಾಕಿಸ್ತಾನದ ಮಹಿಳೆ ಸೀಮಾ ಹೈದರ್ (Seema Haider) ಮನೆಗೆ ಶನಿವಾರ ವ್ಯಕ್ತಿಯೊಬ್ಬ ನುಗ್ಗಿದ್ದು, "ಆಕೆ ತನ್ನ ಮೇಲೆ ಮಾಟ ಮಂತ್ರ (black magic) ಮಾಡಿಸಿದ್ದಾಳೆ" ಎಂದು ಆರೋಪಿಸಿದ್ದಾನೆ. ಮಾನಸಿಕ ಅಸ್ವಸ್ಥನಂತೆ ಕಾಣಿಸುವ ಈತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಯನ್ನು ಗುಜರಾತ್‌ನ ಸುರೇಂದರ್ ನಗರದ ನಿವಾಸಿ ತೇಜಸ್ ಎಂದು ಪೊಲೀಸರು ಗುರುತಿಸಿದ್ದಾರೆ.
ತೇಜಸ್ ಮಾನಸಿಕವಾಗಿ ಅಸ್ವಸ್ಥ ಎಂದು ತೋರುತ್ತಿದ್ದು, ಸಂಜೆ 7 ಗಂಟೆ ಸುಮಾರಿಗೆ ಸೀಮಾ ಅವರ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಆತ ಗುಜರಾತ್ ಮೂಲದವನಾಗಿದ್ದು, ಗುಜರಾತ್‌ನಿಂದ ನವದೆಹಲಿಗೆ ಹೋಗುವ ರೈಲಿನ ಸಾಮಾನ್ಯ ಕೋಚ್ ಟಿಕೆಟ್ ತೆಗೆದುಕೊಂಡಿದ್ದಾನೆ. ನವದೆಹಲಿ ರೈಲು ನಿಲ್ದಾಣದಿಂದ ಬಸ್ ಮೂಲಕ ಗ್ರಾಮಕ್ಕೆ ತಲುಪಿದ್ದಾನೆ. ಅವನ ಮೊಬೈಲ್ ಫೋನ್‌ನಲ್ಲಿ ಸೀಮಾ ಹೈದರ್ ಅವರ ಸ್ಕ್ರೀನ್‌ಶಾಟ್‌ಗಳಿವೆ ಎಂದು ರಬುಪುರ ಕೊಟ್ವಾಲಿ ಪೊಲೀಸ್ ಅಧಿಕಾರಿ ಸುಜೀತ್ ಉಪಧ್ಯಾಯ ತಿಳಿಸಿದ್ದಾರೆ.
ತೇಜಸ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. "ವಿಚಾರಣೆ ಸಮಯದಲ್ಲಿ, ಸೀಮಾ ಹೈದರ್ ತನ್ನ ಮೇಲೆ ಮಾಟಮಂತ್ರ ಮಾಡಿದ್ದಾಳೆ ಎಂದು ಅವನು ಪೊಲೀಸರಿಗೆ ತಿಳಿಸಿದ್ದಾನೆ" ಎಂದು ಉಪಾಧ್ಯಾಯ ಹೇಳಿದರು. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ನ 32 ವರ್ಷದ ಸೀಮಾ ಹೈದರ್, ತನ್ನ ಮಕ್ಕಳನ್ನು ಕರೆದುಕೊಂಡು ಮೇ 2023ರಲ್ಲಿ ಕರಾಚಿಯಲ್ಲಿರುವ ಮನೆಯಿಂದ ನೇಪಾಳದ ಮೂಲಕ ಭಾರತಕ್ಕೆ ಪ್ರಯಾಣ ಬೆಳೆಸಿದ್ದಳು. ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಸಚಿನ್ ಮೀನಾ (27) ಎಂಬಾತನ ಜೊತೆ ವಾಸಿಸುತ್ತಿದ್ದಳು. ಜುಲೈನಲ್ಲಿ ಭಾರತೀಯ ಅಧಿಕಾರಿಗಳು ಈಕೆಯನ್ನು ಪತ್ತೆ ಹಚ್ಚಿದ್ದರು. ಇದು ರಾಷ್ಟ್ರೀಯ ಸುದ್ದಿಯಾಗಿತ್ತು. ತಾನು ಸಚಿನ್‌ನನ್ನು ಮದುವೆಯಾಗಿದ್ದೆನೆಂದು ಆಕೆ ಹೇಳಿಕೊಳ್ಳುತ್ತಾಳೆ. ಆಕೆಗೆ ಪಾಕಿಸ್ತಾನಿ ಪತಿ ಗುಲಾಮ್ ಹೈದರ್‌ನಿಂದ ನಾಲ್ಕು ಮಕ್ಕಳು ಮತ್ತು ಸಚಿನ್‌ನಿಂದ ಒಬ್ಬ ಮಗಳಿದ್ದಾಳೆ. ಇತ್ತೀಚೆಗೆ ಪಹಲ್ಗಾಂ ದಾಳಿಯ ಹಿನ್ನೆಲೆಯಲ್ಲಿ ಭಾರತ ಸರಕಾರ ತೆಗೆದುಕೊಂಡು ಕಠಿಣ ಕ್ರಮದಂತೆ ಆಕೆಯನ್ನು ಪಾಕಿಸ್ತಾನಕ್ಕೆ ವಾಪಸ್ ಕಳಿಸಬೇಕಿದೆ. ಆದರೆ ತಾನು ಈಗ ಭಾರತೀಯ ಪ್ರಜೆ ಎಂದು ಆಕೆ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: Pahalgam Terror Attack: ಬಾಯ್ ಫ್ರೆಂಡ್‌ಗಾಗಿ ಭಾರತಕ್ಕೆ ಬಂದ ಸೀಮಾ ಹೈದರ್ ಪಾಕಿಸ್ತಾನಕ್ಕೆ ಹೋಗ್ತಾಳಾ?