ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Virat Kohli: ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ಕಿಂಗ್‌ ಕೊಹ್ಲಿ

RCB vs CSK: ರನ್‌ ಮಾತ್ರವಲ್ಲದೆ ಸಿಕ್ಸರ್‌ ಮೂಲಕವೂ ಕೊಹ್ಲಿ ಈ ಪಂದ್ಯದಲ್ಲಿ ದಾಖಲೆ ಬರೆದರು. ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ಪರ 300+ ಸಿಕ್ಸರ್‌ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾದರು. ಅವರು ಆರ್‌ಸಿಬಿ ಪರ ಐಪಿಎಲ್‌, ಚಾಂಪಿಯನ್ಸ್‌ ಲೀಗ್‌ ಸೇರಿ ಒಟ್ಟು 278 ಪಂದ್ಯಗಳಲ್ಲಿ 304 ಸಿಕ್ಸರ್‌ ಸಿಡಿಸಿದ್ದಾರೆ.

ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ಕಿಂಗ್‌ ಕೊಹ್ಲಿ

Profile Abhilash BC May 4, 2025 7:25 AM

ಬೆಂಗಳೂರು: ಚೆನ್ನೈ ಸೂಪರ್‌ ಕಿಂಗ್ಸ್‌(RCB vs CSK) ವಿರುದ್ಧದ ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಬಾರಿಸಿದ ಆರ್‌ಸಿಬಿಯ ಬ್ಯಾಟರ್‌ ವಿರಾಟ್‌ ಕೊಹ್ಲಿ(Virat Kohli) ಐಪಿಎಲ್‌ನಲ್ಲಿ(IPL 2025) ನೂತನ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 18 ಆವೃತ್ತಿಯ ಐಪಿಎಲ್‌ ಇತಿಹಾಸದಲ್ಲಿ 8 ಆವೃತ್ತಿಗಳಲ್ಲಿ ತಲಾ 500+ ರನ್‌ ಕಲೆಹಾಕಿದ ಮೊದಲ ಆಟಗಾರ ಎಂಬ ಮೈಲುಗಲ್ಲು ನಿರ್ಮಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಡೇವಿಡ್‌ ವಾರ್ನರ್‌(7), ಕನ್ನಡಿಗ ಕೆ.ಎಲ್‌ ರಾಹುಲ್‌(6) ಆವೃತ್ತಿಯಲ್ಲಿ ತಲಾ 500+ ರನ್‌ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.

ವಿರಾಟ್‌ ಕೊಹ್ಲಿ 2011, 2013, 2015, 2016, 2028, 2023, 2024 ಹಾಗೂ 2025ರ ಆವೃತ್ತಿಯಲ್ಲಿ 500 + ರನ್‌ ಕಲೆಹಾಕಿದ್ದಾರೆ. ಚೆನ್ನೈ ವಿರುದ್ಧ ಸ್ಫೋಟಕ ಬ್ಯಾಟಿಂಗ್‌ ನಡೆಸಿದ ಕೊಹ್ಲಿ 33 ಎಸೆತಗಳಿಂದ ತಲಾ 5 ಬೌಂಡರಿ ಮತ್ತು ಸಿಕ್ಸರ್‌ ಸಿಡಿಸಿ 62 ರನ್‌ ಬಾರಿಸಿದರು. ಇದರೊಂದಿಗೆ ಐಪಿಎಲ್‌ನಲ್ಲಿ 8500 ರನ್‌ ಪೂರ್ಣಗೊಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಸದ್ಯ 263 ಪಂದ್ಯಗಳ ಇನಿಂಗ್ಸ್‌ಗಳಲ್ಲಿ 8509 ರನ್‌ ಗಳಿಸಿದ್ದಾರೆ.

ಸಿಕ್ಸರ್‌ ದಾಖಲೆ

ರನ್‌ ಮಾತ್ರವಲ್ಲದೆ ಸಿಕ್ಸರ್‌ ಮೂಲಕವೂ ಕೊಹ್ಲಿ ಈ ಪಂದ್ಯದಲ್ಲಿ ದಾಖಲೆ ಬರೆದರು. ಟಿ20 ಕ್ರಿಕೆಟ್‌ನಲ್ಲಿ ತಂಡವೊಂದರ ಪರ 300+ ಸಿಕ್ಸರ್‌ ಸಿಡಿಸಿದ ಮೊದಲ ಆಟಗಾರ ಎಂಬ ಖ್ಯಾತಿಗೆ ಕೊಹ್ಲಿ ಪಾತ್ರರಾದರು. ಅವರು ಆರ್‌ಸಿಬಿ ಪರ ಐಪಿಎಲ್‌, ಚಾಂಪಿಯನ್ಸ್‌ ಲೀಗ್‌ ಸೇರಿ ಒಟ್ಟು 278 ಪಂದ್ಯಗಳಲ್ಲಿ 304 ಸಿಕ್ಸರ್‌ ಸಿಡಿಸಿದ್ದಾರೆ.



2 ರನ್‌ ರೋಚಕ ಗೆಲುವು

ಕೊನೆಯ ಎಸೆತದ ತನಕ ಅಭಿಮಾನಿಗಳನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ್ದ ಶನಿವಾರ ಐಪಿಎಲ್‌ ಪಂದ್ಯದಲ್ಲಿ ಆರ್‌ಸಿಬಿ ತಂಡ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ರೋಚಕ 2 ರನ್‌ ಅಂತರದ ಗೆಲುವು ಸಾಧಿಸಿತು. ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ತನ್ನ ಪ್ಲೇ ಆಫ್‌ ಸ್ಥಾನವನ್ನು ಕೂಡ ಬಹುತೇಕ ಖಚಿತಪಡಿಸಿಕೊಂಡಿದೆ.