RRB Recruitment: ಇನ್ನು 10ನೇ ತರಗತಿ ಪಾಸಾದವರೂ ರೈಲ್ವೇಯ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಿ; 32,000 ಹುದ್ದೆಗಳು ಓಪನ್
RRB Recruitment: ಇನ್ನು 10ನೇ ತರಗತಿ ಪಾಸಾದವರೂ ರೈಲ್ವೇಯ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಿ; 32,000 ಹುದ್ದೆಗಳು ಓಪನ್
ಹರೀಶ್ ಕೇರ
January 4, 2025
ನವದೆಹಲಿ: ಲೆವೆಲ್-1 (ಹಿಂದಿನ ಡಿ ಗ್ರೂಪ್) ಉದ್ಯೋಗಗಳಿಗೆ ಶೈಕ್ಷಣಿಕ ಅರ್ಹತೆಯನ್ನು (Education Qualification) ಭಾರತೀಯ ರೈಲ್ವೇ (Indian Railways) ಸಡಿಲಿಸಿದೆ. ಈಗ 10ನೇ ತರಗತಿ (SSLC) ಪಾಸಾದವರು ಕೂಡ ಲೆವೆಲ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು (RRB Recruitment) ಅವಕಾಶ ಕಲ್ಪಿಸಿದೆ. ಈ ಮೊದಲು ಈ ಹುದ್ದೆಗಳಿಗೆ ITI ಅಥವಾ NAC ಮಾಡಿದವರು ಮಾತ್ರ ಅರ್ಜಿ ಹಾಕಬಹುದಿತ್ತು.
ಆರ್‌ಆರ್‌ಬಿ ನೇಮಕಾತಿ ವಿಚಾರ ಸಂಬಂಧ ರೈಲ್ವೆ ನೇಮಕಾತಿ ಮಂಡಳಿಯು ಈ ಹುದ್ದೆಗಳಿಗೆ ಶೈಕ್ಷಣಿಕ ಅರ್ಹತೆಯನ್ನು ಸಡಿಲಿಸಿದೆ. ರೈಲ್ವೆ ಮಂಡಳಿಯ ಈ ಮಹತ್ವದ ನಿರ್ಧಾರದಿಂದಾಗಿ ಈಗ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು, ಐಟಿಐ ಡಿಪ್ಲೊಮಾ ಹೊಂದಿರುವವರು ಅಥವಾ ನ್ಯಾಷನಲ್ ಕೌನ್ಸಿಲ್ ಆಫ್ ವೊಕೇಶನಲ್ ಟ್ರೈನಿಂಗ್ (ಎನ್‌ಸಿವಿಟಿ) ನೀಡುವ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮಾಣಪತ್ರ (ಎನ್‌ಎಸಿ) ಪಡೆದವರು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.
ಈ ಮೊದಲು, ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು 10ನೇ ತರಗತಿ ಪರೀಕ್ಷೆ ಉತ್ತೀರ್ಣರಾದ ಬಳಿಕ ಎನ್‌ಸಿಎ ಅಥವಾ ಐಟಿಐ ಡಿಪ್ಲೊಮಾವನ್ನು ಹೊಂದಿರುವುದು ಕಡ್ಡಾಯವಾಗಿತ್ತು. ರೈಲ್ವೆ ಮಂಡಳಿಯು ಜನವರಿ 2 ರಂದು ಎಲ್ಲಾ ವಲಯಗಳಿಗೆ ಕಳುಹಿಸಲಾದ ಲಿಖಿತ ಸಂದೇಶದಲ್ಲಿ ಈ ಬದಲಾವಣೆಯ ಬಗ್ಗೆ ತಿಳಿಸಿದೆ.
ಮಂಡಳಿಯು ನೀಡಿದ ಸೂಚನೆಗಳ ಪ್ರಕಾರ, ಇನ್ನು ಮುಂದೆ ಎಲ್ಲಾ ಲೆವೆಲ್-1 ಹುದ್ದೆಗಳಿಗೆ (ಮುಂಬರುವ CEN ಸೇರಿದಂತೆ) ನೇಮಕಾತಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆ 10 ನೇ ಉತ್ತೀರ್ಣ ಅಥವಾ ITI ಡಿಪ್ಲೊಮಾ ಅಥವಾ NCVTನಿಂದ ನೀಡಲಾದ NAC ಆಗಿರುತ್ತದೆ. ಭಾರತೀಯ ರೈಲ್ವೇಯಲ್ಲಿ ಲೆವೆಲ್-1 ಅಡಿಯಲ್ಲಿ, ವಿವಿಧ ವಿಭಾಗಗಳಲ್ಲಿ ಸಹಾಯಕ, ಪಾಯಿಂಟ್ಸ್‌ಮನ್ ಮತ್ತು ಟ್ರ್ಯಾಕ್ ನಿರ್ವಾಹಕರಂತಹ ಪ್ರಮುಖ ಹುದ್ದೆಗಳಿವೆ.
ನೇಮಕಾತಿ ಅಧಿಸೂಚನೆ
ರೈಲ್ವೆ ನೇಮಕಾತಿ ಮಂಡಳಿಯು ಇತ್ತೀಚೆಗೆ ಈ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ ಸುಮಾರು 32,000 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಅಪ್ಲಿಕೇಶನ್ ಪ್ರಕ್ರಿಯೆಯು ಜನವರಿ 23 ರಿಂದ ಫೆಬ್ರವರಿ 22 ರವರೆಗೆ ನಡೆಯಲಿದೆ.
ಅಪ್ಲಿಕೇಶನ್‌ಗಳು ಜನವರಿ 23 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು ಫೆಬ್ರವರಿ 22, 2025 ರವರೆಗೆ ಅಪ್ಲಿಕೇಶನ್ ವಿಂಡೋ ತೆರೆದಿರುತ್ತದೆ. ಅಭ್ಯರ್ಥಿಗಳನ್ನು ನಾಲ್ಕು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ: CBT 1 ಪರೀಕ್ಷೆ, CBT 2 ಪರೀಕ್ಷೆ, ದೈಹಿಕ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆ. ಆಯ್ಕೆಯಾದ ಅಭ್ಯರ್ಥಿ ಅಗತ್ಯವಿರುವ ವಯಸ್ಸಿನ ಮಿತಿಯು 18-33 ವರ್ಷಗಳ ನಡುವೆ ಇರಬೇಕು. ಆರ್‌ಆರ್‌ಬಿ ಗ್ರೂಪ್ ಡಿ ನೇಮಕಾತಿಗೆ ಅರ್ಜಿ ಶುಲ್ಕವು ಸಾಮಾನ್ಯ/ಒಬಿಸಿ ಅಭ್ಯರ್ಥಿಗಳಿಗೆ ರೂ 500 ಆಗಿದ್ದರೆ, ಎಸ್‌ಸಿ/ಎಸ್‌ಟಿ/ಟ್ರಾನ್ಸ್‌ಜೆಂಡರ್/ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ 250 ರೂ. ಹೆಚ್ಚಿನ ಮಾಹಿತಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ: SBI Recruitment 2025: ಉದ್ಯೋಗಾಕಾಂಕ್ಷಿಗಳಿಗೆ ಗುಡ್‌ನ್ಯೂಸ್; SBIನಲ್ಲಿದೆ ಬರೋಬ್ಬರಿ 13 ಸಾವಿರ ಹುದ್ದೆ: ಹೀಗೆ ಅಪ್ಲೈ ಮಾಡಿ