ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಚಿನ್ನದ ವ್ಯಾಪಾರಿ ಮೇಲೆ ಫೈರಿಂಗ್- ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

ಪಂಜಾಬ್‍ನ ಅಮೃತಸರದ ತಾಲಿ ವಾಲೆ ಚೌಕ್‍ನಲ್ಲಿ ಚಿನ್ನದ ವ್ಯವಹಾರದ ವಿವಾದಕ್ಕೆ ಸಂಬಂಧಿಸಿದಂತೆ ಆಭರಣ ಅಂಗಡಿ ಮಾಲೀಕ ಸಿಮರ್ಪಾಲ್ ಸಿಂಗ್ ಅವರ ತಲೆಗೆ ಗುಂಡು ಹಾರಿಸಲಾಗಿದೆ. ಹಾಡಹಗಲೇ ನಡೆದ ಈ ಭಯಾನಕ ಘಟನೆಯು ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

Viral News: ಚಿನ್ನದ ವ್ಯಾಪಾರಿ ಮೇಲೆ ಫೈರಿಂಗ್- ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ

Profile Vishwavani News Jan 12, 2025 12:26 PM
ಅಮೃತಸರ: ಪಂಜಾಬ್‍ನ ಅಮೃತಸರದ ತಾಲಿ ವಾಲೆ ಚೌಕ್‍ನಲ್ಲಿ ಚಿನ್ನದ ವ್ಯವಹಾರದ ವಿವಾದಕ್ಕೆ ಸಂಬಂಧಿಸಿದಂತೆ ಆಭರಣ ಅಂಗಡಿ ಮಾಲೀಕ ಸಿಮರ್ಪಾಲ್ ಸಿಂಗ್ ಅವರ ತಲೆಗೆ ಗುಂಡು ಹಾರಿಸಲಾಗಿತ್ತು. ಹಾಡಹಗಲೇ ನಡೆದ ಈ ಭಯಾನಕ ಘಟನೆಯು ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆಭರಣ ಅಂಗಡಿಯ ಮೇಲಿನ ಕೋಪದಿಂದ ಆರೋಪಿಗಳು ವ್ಯಕ್ತಿಯ ತಲೆಗೆ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಈ ದೃಶ್ಯ ಸೋಶಿಯಲ್ ಮಿಡಿಯಾದಲ್ಲಿ ವೈರಲ್(Viral News) ಆಗಿದೆ.
ಘಟನೆಯ ವೇಳೆ ಜನರು ಭಯಭೀತರಾಗಿದ್ದರಿಂದ ಸ್ಥಳದಿಂದ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಬಂಧಿಸಲು ಸಹ ಸಾಧ್ಯವಾಗಲಿಲ್ಲ ಎನ್ನಲಾಗಿದೆ. ಈ ಘಟನೆಯು ಪಂಜಾಬ್‍ನ ಕಾನೂನು ಮತ್ತು ಸುವ್ಯವಸ್ಥೆಯ ಕಳಪೆ ಸ್ಥಿತಿಯನ್ನು ಬಹಿರಂಗಪಡಿಸುವುದರ ಜೊತೆಗೆ ರಾಜ್ಯದ ಜನರ ಸುರಕ್ಷತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.
ವರದಿಗಳ ಪ್ರಕಾರ, ಜಯಪಾಲ್ ಜ್ಯುವೆಲರ್ಸ್‍ನ ಮಾಲೀಕ ಸಿಮರ್‌ಪಾಲ್‌ ಸಿಂಗ್ ತನ್ನ ಅಂಗಡಿಯಲ್ಲಿದ್ದಾಗ ಜಸ್‌ದೀಪ್‌ ಸಿಂಗ್ ಮತ್ತು ಅವನ ಕುಟುಂಬವು ಚಿನ್ನದ ವ್ಯವಹಾರದ ಬಗ್ಗೆ ಚರ್ಚಿಸಲು ಅಲ್ಲಿಗೆ ಬಂದಿದ್ದರಂತೆ. ಈ ವೇಳೆ ಅವರ ನಡುವೆ ಮಾತಿನ ಚಕಮಕಿ ನಡೆದಿದೆ. ವಾಗ್ವಾದದ ನಂತರ, ಜಸ್‌ದೀಪ್‌ ತನ್ನ ಕುಟುಂಬದೊಂದಿಗೆ ಅಂಗಡಿಯಿಂದ ಹೊರಟು ಹೋಗಿದ್ದಾನೆ. ನಂತರ ಕುಟುಂಬದವರನ್ನು ಮನೆಯಲ್ಲಿ ಬಿಟ್ಟು ಬಂದೂಕಿನಿಂದ ಜಯಪಾಲ್ ಜ್ಯುವೆಲರ್ಸ್‍ಗೆ ಹಿಂದಿರುಗಿ ಸಿಮರ್‌ಪಾಲ್‌ ಸಿಂಗ್ ತಲೆಗೆ ಗುಂಡು ಹಾರಿಸಿದ್ದಾನೆ.
ಅಂಗಡಿಯಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ದೃಶ್ಯ ರೆಕಾರ್ಡ್ ಆಗಿದೆ. ಇವರಿಬ್ಬರ ನಡುವೆ ವಾಗ್ವಾದ ನಡೆದು ಜಸ್‌ದೀಪ್‌ ಗನ್ ತೆಗೆದು ಸಿಮರ್‌ಪಾಲ್‌ ತಲೆಗೆ ಗುಂಡು ಹಾರಿಸಿದ್ದರಿಂದ ಸಿಮರ್‌ಪಾಲ್‌ ತಲೆಯಿಂದ ಪೇಟ ಹೊರಬಂದು ನೆಲಕ್ಕೆ ಬಿದ್ದಿದೆ. ಆರೋಪಿಗಳು ಸ್ಥಳದಿಂದ ಪರಾರಿಯಾಗುತ್ತಿದ್ದಂತೆ ಅವರ ಸಹಚರರು ಸಹಾಯಕ್ಕಾಗಿ ಕಿರುಚಾಡಿದ್ದಾರೆ. ಸಿಮರ್‌ಪಾಲ್‌ ಅನ್ನು ಅಮೃತಸರದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಗುಂಡು ತಗುಲಿದ ಕಾರಣ ಬದುಕುಳಿಯಲಿಲ್ಲ.
ಈ ಸುದ್ದಿಯನ್ನೂ ಓದಿ:ಛೇ..ಎಂಥಾ ಪೈಶಾಚಿಕ ಕೃತ್ಯ! ರೀಲ್‌ ಕ್ರೇಜ್‌ಗಾಗಿ ಬೆಕ್ಕುಗಳನ್ನು ಕಟ್ಟಿಹಾಕಿ ಕೊಂದ ಪಾಪಿ- ಬೆಚ್ಚಿ ಬೀಳಿಸುವ ವಿಡಿಯೊ ವೈರಲ್
ಈ ಘಟನೆಯು ಚಿನ್ನದ ವಹಿವಾಟಿನ ವಿವಾದಕ್ಕೆ ಸಂಬಂಧಿಸಿದೆ ಎಂದು ಪೊಲೀಸರು ದೃಢಪಡಿಸಿದ್ದಾರೆ. ದಾಳಿಯ ನಂತರ ಆರೋಪಿ ಜಸ್‌ದೀಪ್‌ ಸಿಂಗ್‌ ಪರಾರಿಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ಅವರು ತಂಡವನ್ನು ರಚಿಸಿದ್ದಾರೆ. ಶಂಕಿತನನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಸಿಮರ್‌ಪಾಲ್‌ ಕುಟುಂಬದಿಂದ ಹೇಳಿಕೆಗಳನ್ನು ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಲು ಮತ್ತು ಸಿಮರ್‌ಪಾಲ್‌ ಕುಟುಂಬಕ್ಕೆ ನ್ಯಾಯ ಒದಗಿಸಲು ಪ್ರಯತ್ನ ಮಾಡುತ್ತಿದ್ದೇವೆ ಎಂದು ಪೊಲೀಸರು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ.