Viral Video: ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ 'ಡ್ರಿಲ್ ಮ್ಯಾನ್' ಕ್ರಾಂತಿ ಕುಮಾರ್ ಪಣಿಕೇರ; ವಿಡಿಯೊ ನೋಡಿದ್ರೆ ಶಾಕ್ ಆಗ್ತೀರಿ!
ಭಾರತೀಯ 'ಡ್ರಿಲ್ ಮ್ಯಾನ್' ಕ್ರಾಂತಿ ಕುಮಾರ್ ಪಣಿಕೇರ ಅವರು ಸುತ್ತಿಗೆಯನ್ನು ಬಳಸಿ ಮೂಗಿಗೆ ಚೂಪಾದ ಮೊಳೆಗಳನ್ನು ತೂರಿಸುವ ಮೂಲಕ ಅವರು ತಮ್ಮ ದಾಖಲೆಗಳ ಪಟ್ಟಿಗೆ ಹೊಸ ಸಾಧನೆಯನ್ನು ಸೇರಿಸಿದ್ದಾರೆ. ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.


ಭಾರತೀಯ 'ಡ್ರಿಲ್ ಮ್ಯಾನ್' ಕ್ರಾಂತಿ ಕುಮಾರ್ ಪಣಿಕೇರ ಅವರು ಈ ಹಿಂದೆ “ಒಂದು ನಿಮಿಷದಲ್ಲಿ ಅತಿ ಹೆಚ್ಚು ವಿದ್ಯುತ್ ಫ್ಯಾನ್ ಬ್ಲೇಡ್‍ಗಳನ್ನು ನಾಲಿಗೆಯಿಂದ ನಿಲ್ಲಿಸಿ ವಿಶ್ವ ದಾಖಲೆಯ ಪ್ರಶಸ್ತಿಯನ್ನು ಪಡೆದಿದ್ದರು. ಇದೀಗ ಸುತ್ತಿಗೆಯನ್ನು ಬಳಸಿ ಮೂಗಿಗೆ ಚೂಪಾದ ಮೊಳೆಗಳನ್ನು ತೂರಿಸುವ ಮೂಲಕ ಅವರು ತಮ್ಮ ದಾಖಲೆಗಳ ಪಟ್ಟಿಗೆ ಹೊಸ ಸಾಧನೆಯನ್ನು ಸೇರಿಸಿದ್ದಾರೆ. ಗಿನ್ನಿಸ್ ವರ್ಲ್ಡ್ ರೆಕಾರ್ಡ್ (ಜಿಡಬ್ಲ್ಯೂಆರ್) ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ "ಒಂದು ನಿಮಿಷದಲ್ಲಿ ಅತೀ ಹೆಚ್ಚು ಮೊಳೆಗಳನ್ನು ಸುತ್ತಿಗೆಯಿಂದ ಮೂಗಿಗೆ ತೂರಿಸಲಾಗಿದೆ” ಎಂದು ಬರೆದಿದ್ದಾರೆ. ಇದು ಎಲ್ಲೆಡೆ ವೈರಲ್(Viral Video) ಆಗಿದೆ.
ವಿಡಿಯೊದಲ್ಲಿ, ಪಣಿಕೇರ ಅವರು ಚೂಪಾದ ಮೊಳೆಗಳನ್ನು ಎತ್ತಿಕೊಂಡು ಸುತ್ತಿಗೆಯ ಸಹಾಯದಿಂದ ಮೂಗಿನೊಳಗೆ ಬಡಿದುಕೊಂಡು ಮತ್ತೆ ಅದನ್ನು ಹೊರತೆಗೆದಿದ್ದಾರೆ. ಹೀಗೆ ಒಂದು ನಿಮಿಷದಲ್ಲಿ ಅತಿ ಹೆಚ್ಚು ಮೊಳೆಗಳನ್ನು ಮೂಗಿಗೆ ಹಾಕಿಕೊಳ್ಳುವ ಮೂಲಕ ಅವರು ವಿಶ್ವ ದಾಖಲೆಯನ್ನು ಮುರಿದಿದ್ದಾರೆ ಮತ್ತು ಅದಕ್ಕಾಗಿ ಜಿಡಬ್ಲ್ಯೂಆರ್ ಪ್ರಮಾಣಪತ್ರವನ್ನು ಪಡೆದಿದ್ದಾರೆ.
View this post on Instagram A post shared by Guinness World Records (@guinnessworldrecords)
ಜನರು ಈ ವಿಡಿಯೊ ನೋಡಿ ಶಾಕ್ ಆಗಿದ್ದಾರೆ. ಈ ವಿಡಿಯೊಗೆ ಸಾಕಷ್ಟು ಜನ ಕಾಮೆಂಟ್ ಕೂಡ ಮಾಡಿದ್ದಾರೆ. ಒಬ್ಬ ನೆಟ್ಟಿಗರು "ಈ ಪ್ರತಿಭೆಯನ್ನು ನೀವು ಹೇಗೆ ಕಂಡುಹಿಡಿಯುತ್ತೀರಿ?" ಎಂದಿದ್ದಾರೆ. ಇನ್ನೊಬ್ಬರು, "ಇದು ಮಾರಕ! ನಾನು ಈ ಸವಾಲನ್ನು ಮಾಡಲ್ಲʼʼ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ:ಇಂಡಿಯನ್ ಉಬರ್ ಚಾಲಕನ ಬಗ್ಗೆ ಅವಮಾನಕಾರಿ ಪೋಸ್ಟ್- ಕೆಲಸ ಕಳೆದುಕೊಂಡ
ಜಿಡಬ್ಲ್ಯೂಆರ್ ಪ್ರಕಾರ, ಕಳೆದ ವರ್ಷ ಫೆಬ್ರವರಿಯಲ್ಲಿ ಇಟಲಿಯ ಮಿಲನ್‍ನಲ್ಲಿ ನಡೆಸಲಾದ ಲೋ ಶೋ ದೇಯಿ ರೆಕಾರ್ಡ್‍ನಲ್ಲಿ ಪಣಿಕೇರ ಮೊಳೆಗಳ ಸ್ಟಂಟ್ ಅನ್ನು ಪ್ರದರ್ಶಿಸಿದ್ದಾರಂತೆ. ಮೂಗಿಗೆ ಮೊಳೆಗಳನ್ನು ಹೊಡೆಯುವುದು ಮತ್ತು ನಾಲಿಗೆಯಿಂದ ಫ್ಯಾನ್‍ಗಳನ್ನು ನಿಲ್ಲಿಸುವುದರ ಜೊತೆಗೆ, ಅವರು ಹಲವಾರು ಇತರ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. ಪಣಿಕೇರ, ಅವರು ‘ಕ್ರಾಂತಿ ಸೋಶಿಯಲ್ –ಕಲ್ಚರ್ ಸೊಸೈಟಿ’ ಎಂಬ ನಾನ್- ಪ್ರಾಫಿಟ್ ಸಂಸ್ಥೆಯನ್ನು ಸಹ ನಡೆಸುತ್ತಿದ್ದಾರೆ ಎನ್ನಲಾಗಿದೆ.