Viral Video: ಜಸ್ಟಿನ್ ಬೀಬರ್ 'ಬೇಬಿ' ಹಾಡಿಗೆ ಸಿಕ್ಕಿದೆ ಅದ್ಭುತ ಖವ್ವಾಲಿ ಸ್ಪಿನ್; ನೆಟ್ಟಿಗರು ಹೇಳಿದ್ದೇನು?
ಜಸ್ಟಿನ್ ಬೀಬರ್ ಅವರ ಸೂಪರ್ ಹಿಟ್ ಹಾಡಾದ 'ಬೇಬಿ' ಅನ್ನು ಲಾಹೋರ್‌ನ ವಿಶ್ವವಿದ್ಯಾಲಯದ ನಡೆದ ಖವ್ವಾಲಿ ಕಾರ್ಯಕ್ರಮದಲ್ಲಿ ವಿಭಿನ್ನವಾಗಿ ಪ್ರದರ್ಶಿಸಲಾಯಿತು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್(Viral Video) ಆಗಿದ್ದು, ಸಂಗೀತ ಪ್ರಿಯರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
Vishwavani News
January 12, 2025
ಅಹ್ಮದಾಬಾದ್: ಜಸ್ಟಿನ್ ಬೀಬರ್ ಹೆಸರು ಕೇಳುತ್ತಲೇ ಅವರ ಸೂಪರ್ ಹಿಟ್ ಸಾಂಗ್ ಆದ ʼಬೇಬಿʼ ನೆನಪಾಗುತ್ತದೆ. 2010 ರಲ್ಲಿ ಬಿಡುಗಡೆಯಾದ ಈ ‘ಬೇಬಿ’ ಸಾಂಗ್ ಜಸ್ಟಿನ್ ಬೀಬರ್ ಅವರನ್ನು ಸಂಗೀತ ವೃತ್ತಿಜೀವನದಲ್ಲಿ ಉನ್ನತಮಟ್ಟಕ್ಕೆ ಏರುವಂತೆ ಮಾಡಿತ್ತು. ಪಾಪ್ ಮತ್ತು ಸಾಂಪ್ರದಾಯಿಕ ಸೂಫಿ ಸಂಗೀತದ ಮ್ಯಾಶ್ ಅಪ್‌ನಲ್ಲಿ, ಜಸ್ಟಿನ್ ಬೀಬರ್ ಅವರ ಈ ಸೂಪರ್ ಹಿಟ್ 'ಬೇಬಿ' ಸಾಂಗ್ ಅನ್ನು ಪಾಕಿಸ್ತಾನದ ಲಾಹೋರ್‌ನ ವಿಶ್ವವಿದ್ಯಾಲಯದ ಖವ್ವಾಲಿ ಕಾರ್ಯಕ್ರಮದಲ್ಲಿ ಅದ್ಭುತವಾಗಿ ಪ್ರದರ್ಶಿಸಲಾಯಿತು. ʼಬೇಬಿʼ ಹಾಡನ್ನು ಖವ್ವಾಲಿ ಗಾಯನವಾಗಿ ಪ್ರದರ್ಶಿಸಲಾಯಿತು. ಇದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ, ಪಾಶ್ಚಿಮಾತ್ಯ ಪಾಪ್ ಶೈಲಿಯನ್ನು ಸೂಫಿ ಸಂಗೀತದ ಭಾವಪೂರ್ಣ, ಶ್ರೀಮಂತ ಸಂಪ್ರದಾಯಗಳೊಂದಿಗೆ ಬೆರೆಸಿ, ಪ್ರೀತಿಯ ಪಾಪ್ ಟ್ರ್ಯಾಕ್ 'ಬೇಬಿ' ಅನ್ನು ಖವ್ವಾಲಿಯಾಗಿ ಪರಿವರ್ತಿಸಲಾಯಿತು. ಹಾರ್ಮೋನಿಯಂ ಮತ್ತು ತಬಲಾ ಸೇರಿದಂತೆ ಸಾಂಪ್ರದಾಯಿಕ ವಾದ್ಯಗಳನ್ನು ಈ ಪ್ರದರ್ಶನದಲ್ಲಿ ಬಳಸಲಾಯಿತು.
View this post on Instagram A post shared by apna ghar samjho😐 (@khattti.meethi.baateinn)
ವಿಡಿಯೊದಲ್ಲಿ ಈ ಹಾಡನ್ನು ಕೇಳಿ ಪ್ರೇಕ್ಷಕರು ಸಿಕ್ಕಾಪಟ್ಟೆ ಥ್ರಿಲ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಒಬ್ಬ ಅಭಿಮಾನಿ "ವಾಹ್, ವೈಬ್ ತೋ ಹೈ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು "ಟೊರೊಂಟೊ ಸಂಗೀತ ಕಾರ್ಯಕ್ರಮದಲ್ಲಿ ಬೀಬರ್ 'ನಸೀಬೊ' ಹಾಡುವುದನ್ನು ಕಾಯುತ್ತಿದ್ದೇನೆ" ಎಂದು ತಮಾಷೆಯಾಗಿ ಹೇಳಿದ್ದಾರೆ. ಹಾಗೇ ಕೆಲವರು ಟ್ರೋಲ್ ಮಾಡಿದ್ದಾರೆ. "ಜಸ್ಟಿನ್ ಬೀಬರ್ ಒಂದು ಮೂಲೆಯಲ್ಲಿ ನ್ಯಾಯಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ" ಎಂದು ನೆಟ್ಟಿಗರೊಬ್ಬರು ವ್ಯಂಗ್ಯವಾಡಿದ್ದಾರೆ.
ಈ ಸುದ್ದಿಯನ್ನೂ ಓದಿ: ಮಾಲ್‌ಗೆ ನುಗ್ಗಿದ ಕೋತಿ; ಮಹಿಳೆ ಮೇಲೆ ಅಟ್ಯಾಕ್- ಇಲ್ಲಿದೆ ವಿಡಿಯೊ
ಜಸ್ಟಿನ್ ಬೀಬರ್ ಅವರ 2010 ರ ಚೊಚ್ಚಲ ಆಲ್ಬಂ ಮೈ ವರ್ಲ್ಡ್ 2.0 ನಿಂದ ಬಿಡುಗಡೆಯಾದ ‘ಬೇಬಿ’ ಹಾಡು ಅವರ ವೃತ್ತಿಜೀವನದಲ್ಲಿ ಬ್ರೇಕ್ ಕೊಟ್ಟ ಹಾಡಾಗಿತ್ತು. ಬಿಲ್ಬೋರ್ಡ್ ಹಾಟ್ 100 ನಲ್ಲಿ ಬಿಡುಗಡೆಯಾದ ನಂತರ 5 ನೇ ಸ್ಥಾನವನ್ನು ಗಳಿಸಿತು. ಅಲ್ಲದೇ ಇದು ಸ್ಪಾಟಿಫೈನ ಬಿಲಿಯನ್ ಸ್ಟ್ರೀಮ್ಸ್ ಕ್ಲಬ್‍ಗೆ ಸೇರಿದ ಗಾಯಕನ 16 ನೇ ಹಾಡಾಗಿದೆ.