ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಪ್ಯಾರಾಗ್ಲೈಡಿಂಗ್‌ ಎಂಜಾಯ್‌ ಮಾಡ್ತಿದ್ದವನ ಜೊತೆ ಪ್ರವಾಸಿಗನ ಫನ್ನಿ ಡಿಮ್ಯಾಂಡ್‌- ವಿಡಿಯೊ ನೋಡಿ

ಗೋವಾ ಟೂರ್‌ಗೆ ಬಂದ ವ್ಯಕ್ತಿಯೊಬ್ಬರು ಲೈಟರ್ ಮರೆತು ಬಂದಿದ್ದು, ಆ ವೇಳೆ ಅವರು ಪ್ಯಾರಾಗ್ಲೈಡರ್‌ ಬಳಿ ಲೈಟರ್ ಕೇಳಿದ್ದಾರೆ. ಗ್ಲೈಡರ್ ಈ ವ್ಯಕ್ತಿಗೆ ಲೈಟರ್ ಅನ್ನು 'ಏರ್ ಡ್ರಾಪ್' ಮಾಡಿದ್ದಾರೆ. ಈ ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

Viral Video: ಪ್ಯಾರಾಗ್ಲೈಡಿಂಗ್‌ ಎಂಜಾಯ್‌ ಮಾಡ್ತಿದ್ದವನ ಜೊತೆ ಪ್ರವಾಸಿಗನ ಫನ್ನಿ ಡಿಮ್ಯಾಂಡ್‌- ವಿಡಿಯೊ ನೋಡಿ

Profile Vishwavani News Jan 12, 2025 1:00 PM
ಪಣಜಿ: ಅತ್ಯುತ್ತಮ ಪ್ರವಾಸಿ ತಾಣವಾಗಿರುವ ಗೋವಾ ಎಂದರೆ ಯಾರಿಗೆ ತಾನೇ ಇಷ್ಟವಿರಲ್ಲ! ಇತ್ತೀಚೆಗಷ್ಟೇ ನಟ ಯಶ್‌ ತಮ್ಮ ಹುಟ್ಟುಹಬ್ಬವನ್ನು ಗೋವಾದ ಬೀಚ್‌ನಲ್ಲಿ ಮಾಡಿ ಸಂಭ್ರಮಿಸಿದ್ದರು. ಸದಾ ಪ್ರವಾಸಿಗರಿಂದ ಗಿಜಿಗುಡುವ ಗೋವಾ ಎಲ್ಲರ ಅಚ್ಚುಮೆಚ್ಚಿನ ತಾಣವಾಗಿದೆ. ಇತ್ತೀಚೆಗೆ ಗೋವಾಕ್ಕೆ ಪ್ರವಾಸಕ್ಕೆಂದು ಬಂದ ವ್ಯಕ್ತಿಯೊಬ್ಬ ಮೇಲೆ ಹಾರುತ್ತಿದ್ದ ಪ್ಯಾರಾಗ್ಲೈಡರ್‌ ಬಳಿ ಲೈಟರ್ ಕೇಳಿದ ತಮಾಷೆಯ ಪ್ರಕರಣವೊಂದು ನಡೆದಿದೆ. ಗ್ಲೈಡರ್ ಈ ವ್ಯಕ್ತಿಗೆ ಲೈಟರ್ ಅನ್ನು 'ಏರ್ ಡ್ರಾಪ್' ಮಾಡಿದ್ದಾನೆ. ಈ ವಿಡಿಯೊ ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಇದನ್ನು ಕಂಡು ಅನೇಕರು ಆಶ್ಚರ್ಯಚಕಿತರಾಗಿದ್ದಾರೆ.
ವೈರಲ್ ಆಗಿರುವ ವಿಡಿಯೊದಲ್ಲಿ ವ್ಯಕ್ತಿಯೊಬ್ಬ ಪ್ಯಾರಾಗ್ಲೈಡರ್‌ ಅನ್ನು ನೋಡಿ ಲೈಟರ್ ಇದೆಯೇ ಎಂದು ಕೇಳಿದ್ದಾನೆ. ಎಲ್ಲರ ಮನರಂಜನೆಗಾಗಿ, ಪ್ಯಾರಾಗ್ಲೈಡರ್ ಲೈಟರ್ ಅನ್ನು ತೆಗೆದುಕೊಂಡು ವ್ಯಕ್ತಿಯ ಕಡೆಗೆ ಹಾರಿ ಲೈಟರ್‌ ನೀಡಿ ನಂತರ ವಾಪಾಸ್‌ ಕೇಳಿದ್ದಾನೆ. ಇದನ್ನು ನೋಡಿ ಸುತ್ತಲೂ ನಿಂತಿದ್ದ ಜನರು ಸಖತ್‌ ಥ್ರಿಲ್‌ ಆಗಿ ಚಪ್ಪಾಳೆ ತಟ್ಟಿದ್ದಾರೆ.
View this post on Instagram A post shared by Zostel | Stay in Morjim Goa (@z.in.morjim)
ಸೋಶಿಯಲ್‌ ವಿಡಿಯೊವನ್ನು ಪೋಸ್ಟ್ ಮಾಡಲಾದ ಈ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು ನೆಟ್ಟಿಗರ  ಗಮನವನ್ನು ಸೆಳೆದಿತ್ತು. ಈ ವಿಡಿಯೊ ನೋಡಿ ಆಶ್ಚರ್ಯಚಕಿತರಾದ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.  ಹೆಚ್ಚಿನ ನೆಟ್ಟಿಗರು ಪ್ಯಾರಾಗ್ಲೈಡರ್‌ನ ಕೌಶಲ್ಯವನ್ನು ಹೊಗಳಿದ್ದಾರೆ.
ವಿಡಿಯೊದಲ್ಲಿರುವ ಪ್ರವಾಸಿಗರಲ್ಲಿ ಒಬ್ಬರಾದ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿ, "ಜನರು ಇದನ್ನು ನಂಬುವುದು ಕಷ್ಟ, ಆದರೆ ಅವರು ಲೈಟ್ ನೀಡಿದ್ದಾರೆ ಹಾಗೇ ನಾವದನ್ನು ಅವರಿಗೆ ವಾಪಾಸ್‌ ಕೊಟ್ಟಿದ್ದೇವೆ" ಎಂದು ಹೇಳಿದ್ದಾರೆ. "ಇದು ಪೌರಾಣಿಕ ವಿಡಿಯೊ" ಎಂದು ಒಬ್ಬ ವ್ಯಕ್ತಿ ಹೇಳಿದ್ದಾರೆ. "ಎಲ್ಲಾ ದೇವದೂತರಿಗೆ ರೆಕ್ಕೆಗಳಿಲ್ಲ, ಹಾಗಾಗಿ ಕೆಲವರು ಪ್ಯಾರಾಗ್ಲೈಡಿಂಗ್ ಅನ್ನು ಇಷ್ಟಪಡುತ್ತಾರೆ" ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿದ್ದಾರೆ. “ಜೊಮಾಟೊ ಮತ್ತು ಸ್ವಿಗ್ಗಿಗಿಂತ ವೇಗವಾಗಿ ಡೆಲಿವರಿ ಮಾಡಲಾಗಿದೆ” ಎಂದು ಒಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:ಮತ್ತೊಂದು ವಿಶ್ವ ದಾಖಲೆ ನಿರ್ಮಿಸಿದ ‘ಡ್ರಿಲ್ ಮ್ಯಾನ್’ ಕ್ರಾಂತಿ ಕುಮಾರ್ ಪಣಿಕೇರ; ವಿಡಿಯೊ ನೋಡಿದ್ರೆ ಶಾಕ್‌ ಆಗ್ತೀರಿ!
ಈ ಕ್ಲಿಪ್ ಇದುವರೆಗೆ 17.5 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಮತ್ತು 2 ದಶಲಕ್ಷಕ್ಕೂ ಹೆಚ್ಚು ಶೇರ್‌ಗಳು ಮತ್ತು ಲೈಕ್‍ಗಳನ್ನು ಗಳಿಸಿದೆ.