ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಮಾಲ್‌ಗೆ ನುಗ್ಗಿದ ಕೋತಿ; ಮಹಿಳೆ ಮೇಲೆ ಅಟ್ಯಾಕ್‌- ಇಲ್ಲಿದೆ ವಿಡಿಯೊ

ಉತ್ತರ ಪ್ರದೇಶದ ಝಾನ್ಸಿಯ ಮಾಲ್ ಒಂದರಲ್ಲಿ ಕೋತಿಯೊಂದು ಮಹಿಳಾ ಗ್ರಾಹಕರೊಬ್ಬರ ಮೇಲೆ ಹಲ್ಲೆ ನಡೆಸಿ ಅವರಿಂದ ಶೂ ಕಸಿದುಕೊಂಡ ಘಟನೆ ನಡೆದಿದೆ. ಈ ದೃಶ್ಯ ಮಾಲ್‍ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

Viral Video: ಮಾಲ್‌ಗೆ ನುಗ್ಗಿದ ಕೋತಿ; ಮಹಿಳೆ ಮೇಲೆ ಅಟ್ಯಾಕ್‌- ಇಲ್ಲಿದೆ ವಿಡಿಯೊ

Profile Vishwavani News Jan 11, 2025 4:00 PM
ಲಖನೌ: ಇತ್ತೀಚೆಗೆ ಬೀದಿಗಳಲ್ಲಿ, ದೇವಾಲಯಗಳಲ್ಲಿ, ಅಂಗಡಿ, ಮಾಲ್‍ಗಳಲ್ಲಿ ಕೋತಿಗಳು ಜನರ ಮೇಲೆ ದಾಳಿ ಮಾಡಿದ ಸಾಕಷ್ಟು ಘಟನೆಗಳು ನಡೆದಿವೆ. ಇದೀಗ ಉತ್ತರ ಪ್ರದೇಶದ ಝಾನ್ಸಿಯ ಮಾಲ್ ಒಂದರಲ್ಲಿ ಕೋತಿಯೊಂದು ಮಹಿಳಾ ಗ್ರಾಹಕರೊಬ್ಬರ ಮೇಲೆ ಹಲ್ಲೆ ನಡೆಸಿ ಅವರಿಂದ ಶೂ ಕಸಿದುಕೊಂಡ ಘಟನೆ ನಡೆದಿದೆ. ಈ ದೃಶ್ಯ ಮಾಲ್‍ನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಇದು ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಸಿಟಿ ಕಾರ್ ಮಾಲ್‍ನ ಅಂಗಡಿಯೊಳಗೆ ಕೋತಿಯೊಂದು ಅಡ್ಡಾಡುತ್ತಿತ್ತು. ಸ್ಟೋರ್ ಕೀಪರ್‌ಗಳು ಕಂಬಳಿಯನ್ನು ಬಳಸಿ ಅದನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ನಂತರ ಕೋತಿ ಅಲ್ಲಿದ್ದ ಮಹಿಳೆಯ ತಲೆಯ ಮೇಲೆ ಹಾರಿ ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತಿತ್ತು. ಕೆಲವರು ಬಾಳೆಹಣ್ಣನ್ನು ನೀಡಿ ಅದನ್ನು  ಸೆಳೆಯಲು ಪ್ರಯತ್ನಿಸಿದ್ದಾರೆ, ಕೆಲವರು ಮಹಿಳೆಗೆ ಎದ್ದು ನಿಲ್ಲುವಂತೆ ಸಲಹೆ ನೀಡಿದ್ದಾರೆ.  ಆದರೆ ಅಂತಹ ಯಾವುದೇ ಟ್ರಿಕ್ ಅವರ ಸಹಾಯಕ್ಕೆ ಬರಲಿಲ್ಲ.
View this post on Instagram A post shared by NDTV (@ndtv)
ಕೋತಿ ಶೀಘ್ರದಲ್ಲೇ ಬಟ್ಟೆಯ ರ‍್ಯಾಕ್‌ ಕಡೆಗೆ ಹಾರಿ ಮತ್ತೆ ಮಹಿಳೆಯ ಮೇಲೆ ಜಿಗಿಯಿತು. ಕೊನೆಗೆ ಮಹಿಳೆಯಿಂದ ಶೂವನ್ನು ಕಸಿದುಕೊಂಡಿತು. ಇತರರು ಕೋತಿಯ ಮೇಲೆ ಕಂಬಳಿಯನ್ನು ಎಸೆಯುವ ಮೂಲಕ ಅದನ್ನು ಹಿಡಿಯಲು ಪ್ರಯತ್ನಿಸಿದರು. ಆದರೆ ಅದು ಪ್ರತಿ ಬಾರಿಯೂ ಬಲೆಯಿಂದ ತಪ್ಪಿಸಿಕೊಂಡಿತು.
ಈ ಸುದ್ದಿಯನ್ನೂ ಓದಿ:ಇಸ್ಲಾಂ ಧರ್ಮಗುರುವಿನ ಟರ್ಬನ್‌ ಕಸಿದುಕೊಂಡ ಮಹಿಳೆ; ಈ ವಿಡಿಯೊ ಭಾರೀ ವೈರಲ್‌
ಕೋತಿಗಳು ಮನುಷ್ಯರ ಮೇಲೆ ದಾಳಿ ಮಾಡಿದ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಕಳೆದ ವರ್ಷ ಜುಲೈನಲ್ಲಿ ವಸತಿ ಕಟ್ಟಡದ ಪಾರ್ಕಿಂಗ್ ಸ್ಥಳದಲ್ಲಿ ಕೋತಿಯೊಂದು ಹುಡುಗಿಯ ಮೇಲೆ ದಾಳಿ ಮಾಡಿತ್ತು. ಈ ಭೀಕರ ಘಟನೆಯು ಹತ್ತಿರದಲ್ಲಿ ಅಳವಡಿಸಲಾದ ಸಿಸಿಟಿವಿಯಲ್ಲಿ ಸೆರೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವೈರಲ್ ವಿಡಿಯೊದಲ್ಲಿ ಹುಡುಗಿ ನಡೆದು ಬರುತ್ತಿದ್ದಾಗ ಎಲ್ಲಿಂದಲೋ, ಬಂದ ದೊಡ್ಡ ಕೋತಿ ಹಿಂದಿನಿಂದ ಬಂದು ಅವಳ ಕಾಲನ್ನು ಕಚ್ಚಿತ್ತು. ಹುಡುಗಿ ನೋವಿನಿಂದ ಕಿರುಚಲು ಪ್ರಾರಂಭಿಸಿದ ನಂತರ ಕೋತಿ ಸ್ಥಳದಿಂದ ಬೇಗನೆ ತಪ್ಪಿಸಿಕೊಂಡಿತು.