Vaamana Movie: ವಾಮನ ನೋಡಿ ರಾಜಹುಲಿ ಸಿನಿಮಾ ನೆನಪಿಸಿಕೊಂಡ ಚಿಕ್ಕಣ್ಣ
ದರ್ಶನ್ ಜೊತೆಗೆ ಚಿಕ್ಕಣ್ಣ ಕೂಡ ವಾಮನ ಸಿನಿಮಾ ವೀಕ್ಷಿಸಿ ಗುಡ್ ರಿವ್ಯೂವ್ ಕೊಟ್ಟಿದ್ದಾರೆ. ಸಿನಿಮಾದಲ್ಲಿ ತಾಯಿ ಎಮೋಷನ್, ಮುದ್ದಾದ ಲವ್ ಸ್ಟೋರಿ, ಸ್ನೇಹ, ಕಾಮಿಡಿ ಎಲ್ಲವೂ ಇದೆ. ತುಂಬಾ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ ಎಂದು ಹೇಳಿದರು. ಇದೇವೇಳೆ ವಾಮನ ನೋಡಿ ಚಿಕ್ಕಣ್ಣ ರಾಜಹುಲಿ ಸಿನಿಮಾವನ್ನು ನೆನಪಿಸಿಕೊಂಡರು.

Chikkanna

ಸ್ಯಾಂಡಲ್ವುಡ್ನ ಪ್ರತಿಭಾನ್ವಿತ ನಟ ಧನ್ವೀರ್ (Dhanveer) ಅಭಿನಯದ ವಾಮನ ಸಿನಿಮಾ ಇಂದು ತೆರೆಕಂಡಿದೆ. ಈ ಸಿನಿಮಾವನ್ನು ಬೆಂಗಳೂರಿನ ಮಾಗಡಿ ರಸ್ತೆ ಬಳಿ ಇರುವ ಜಿಟಿ ಮಾಲ್‌ನಲ್ಲಿ ನಟ ದರ್ಶನ್ ಅವರು ವೀಕ್ಷಿಸಿದ್ದಾರೆ. ಧನ್ವೀರ್ ಪೋಷಕರು, ಹಾಸ್ಯನಟ ಚಿಕ್ಕಣ್ಣ ಜೊತೆ ದರ್ಶನ್ ವಾಮನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬಂದಿದ್ದರು. ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಕುಟುಂತ್ತಲೇ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಇವರಿಗೆ ಚಿಕ್ಕಣ್ಣ ಕೂಡ ಸಾಥ್ ನೀಡಿದ್ದರು.
ದರ್ಶನ್ ಜೊತೆಗೆ ಚಿಕ್ಕಣ್ಣ ಕೂಡ ವಾಮನ ಸಿನಿಮಾ ವೀಕ್ಷಿಸಿ ಗುಡ್ ರಿವ್ಯೂವ್ ಕೊಟ್ಟಿದ್ದಾರೆ. ಸಿನಿಮಾದಲ್ಲಿ ತಾಯಿ ಎಮೋಷನ್, ಮುದ್ದಾದ ಲವ್ ಸ್ಟೋರಿ, ಸ್ನೇಹ, ಕಾಮಿಡಿ ಎಲ್ಲವೂ ಇದೆ. ತುಂಬಾ ಚೆನ್ನಾಗಿ ಸಿನಿಮಾ ಮೂಡಿ ಬಂದಿದೆ. ಸಿನಿಮಾವನ್ನು ಥಿಯೇಟರ್‌ನಲ್ಲೇ ನೋಡಿ ಹಾರೈಸಿ ಎಂದು ಹೇಳಿದರು. ಇದೇವೇಳೆ ವಾಮನ ನೋಡಿ ಚಿಕ್ಕಣ್ಣ ರಾಜಹುಲಿ ಸಿನಿಮಾವನ್ನು ನೆನಪಿಸಿಕೊಂಡರು.
ವಾಮನ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಇದೊಂದು ಹೊಸ ರೀತಿಯ ಸ್ಕ್ರೀನ್ ಪ್ಲೇ ಎನ್ನಬಹುದು. ಅವರ ಹಿಂದಿನ ಮೂರು ಚಿತ್ರಗಳು ಬೇರೆ ಥರನೇ ಇದೆ.. ಇದು ಮತ್ತೊಂದು ರೀತಿಯಲ್ಲೇ ಇದೆ. ಫ್ರೆಂಡ್ಶಿಪ್, ಕಾಮಿಡಿ, ಸೆಂಟಿಮೆಂಟ್ ಎಲ್ಲವೂ ಇದರಲ್ಲಿದೆ.. ನನಗೆ ಈ ಸಿನಿಮಾ ನೋಡಬೇಕಾದ್ರೆ ಅದರಲ್ಲೂ ಫ್ರೆಂಡ್ಶಿಪ್ ಬಗ್ಗೆ ಬಂದಾಗ ರಾಜಹುಲಿ ಸಿನಿಮಾ ನೆನಪಾಯಿತು. ಧನ್ವೀರ್ ತುಂಬಾ ಚೆನ್ನಾಗಿ ನಟಿಸಿದ್ದಾರೆ ಎಂದು ಹೇಳಿದ್ದಾರೆ.
Vamana Movie: ನನಗೂ ಲವ್ ಮಾಡೋಕೆ ಇಷ್ಟ.. ಆದ್ರೆ: ವಾಮನ ಸಿನಿಮಾ ವೀಕ್ಷಿಸಿದ ಬಳಿಕ ದರ್ಶನ್ ಪ್ರತಿಕ್ರಿಯೆ