ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vamana Movie: ನನಗೂ ಲವ್ ಮಾಡೋಕೆ ಇಷ್ಟ.. ಆದ್ರೆ: ವಾಮನ ಸಿನಿಮಾ ವೀಕ್ಷಿಸಿದ ಬಳಿಕ ದರ್ಶನ್ ಪ್ರತಿಕ್ರಿಯೆ

ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ನಟ ದರ್ಶನ್ ಆಗಮಿಸಿದ್ದು, ನಟ ಚಿಕ್ಕಣ್ಣ ಸೇರಿದಂತೆ ಆಪ್ತರು ಸಾಥ್ ನೀಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ದರ್ಶನ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇಂಟರ್ವೆಲ್ ಬಳಿಕ ಕಥೆ ಬೇರೆಯದೆ ಲೆವೆಲ್ಗೆ ಹೋಗುತ್ತದೆ. ಆಕ್ಷನ್ ಸನ್ನಿವೇಶಗಳಲ್ಲಿ ಧನ್ವೀರ್ ಪರ್ಫಾರ್ಮನ್ಸ್ ಚೆನ್ನಾಗಿದೆ ಎಂದು ದರ್ಶನ್ ಹಾಡಿ ಹೊಗಳಿದ್ದಾರೆ.

ನನಗೂ ಲವ್ ಮಾಡೋಕೆ ಇಷ್ಟ.. ಆದ್ರೆ: ದರ್ಶನ್

Profile Vinay Bhat Apr 10, 2025 12:22 PM

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಅಭಿನಯದ ವಾಮನ ಸಿನಿಮಾ (Vamana Movie) ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಗೆಳೆಯನ ಸಿನಿಮಾಗೆ ದರ್ಶನ್ ದೊಡ್ಡ ಮಟ್ಟದಲ್ಲಿ ಸಾಥ್ ನೀಡಿದ್ದು, ಸಿನಿಮಾ ಕೂಡ ವೀಕ್ಷಣೆ ಮಾಡಿದ್ದಾರೆ. ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ನಟ ದರ್ಶನ್ ಆಗಮಿಸಿದ್ದು, ನಟ ಚಿಕ್ಕಣ್ಣ ಸೇರಿದಂತೆ ಆಪ್ತರು ಸಾಥ್ ನೀಡಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ದರ್ಶನ್ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಚಿತ್ರದಿಂದ ಚಿತ್ರಕ್ಕೆ ಧನ್ವೀರ್ ನಟನೆಯಲ್ಲಿ ಪ್ರತಿಭೆ ಎದ್ದು ಕಾಣುತ್ತಿದೆ. ವಾಮನ ಸಿನಿಮಾ ಅದ್ಭುತವಾಗಿ ಮೂಡಿಬಂದಿದೆ. ಟ್ರೈಲರ್ ನೋಡಿದರೆ ಬರೀ ಆಕ್ಷನ್ ಎನಿಸುತ್ತದೆ. ಆದರೆ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಅನ್ನು ಡೈರೆಕ್ಟನ್ ತುಂಬಾ ಚೆನ್ನಾಗಿ ತೋರಿಸಿದ್ದಾರೆ. ಇಂಟರ್ವೆಲ್ ಬಳಿಕ ಕಥೆ ಬೇರೆಯದೆ ಲೆವೆಲ್​ಗೆ ಹೋಗುತ್ತದೆ. ಆಕ್ಷನ್ ಸನ್ನಿವೇಶಗಳಲ್ಲಿ ಧನ್ವೀರ್ ಪರ್ಫಾರ್ಮನ್ಸ್ ಚೆನ್ನಾಗಿದೆ ಎಂದು ಹಾಡಿ ಹೊಗಳಿದ್ದಾರೆ.



ಹಾಗೇ ಧನ್ವೀರ್ ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ಲವ್ ಮಾಡಿದ್ದಾರೆ. ನನಗೂ ಹಾಗೆ ಲವ್ ಮಾಡುವುದಕ್ಕೆ ಇಷ್ಟ. ಆದರೆ, ಯಾರೂ ಮಾಡುವುದಕ್ಕೆ ಕೊಡುತ್ತಿಲ್ಲ ಎಂದು ಕಾಲೆಳೆದಿದ್ದಾರೆ. ಧನ್ವೀರ್ 6.3 ಇದ್ದಾನೆ. ನನಗಿಂತ ಒಂದು ಒಂದೂವರೆ ಅಡಿ ಎತ್ತರವಿದ್ದಾನೆ. ಈ ಫೈಟ್‌ನಲ್ಲಿ ಕಾಲುಗಳನ್ನು ತುಂಬಾನೇ ಚೆನ್ನಾಗಿ ಬಳಸಿದ್ದಾರೆ. ಉದ್ದಕ್ಕೆ ಇರುವವರಿಗೆ ಅಪ್ಪರ್ ಬಾಡಿ ಚಿಕ್ಕದಿರುತ್ತೆ. ಲೋವರ್ ಬಾಡಿ ಚಿಕ್ಕದಿರುತ್ತೆ. ಕಾಲನ್ನು ತುಂಬಾನೇ ಚೆನ್ನಾಗಿ ಬಳಸಿಕೊಂಡಿದ್ದಾರೆ. ನೀಟ್ ಕ್ಲೀನ್ ಸಿನಿಮಾ. ಹಾಗೇ ತಾಯಿ ಜೊತೆಗಿನ ದೃಶ್ಯಗಳು ಒಳ್ಳೆಯ ಸಂದೇಶ ಕೊಡುತ್ತವೆ ಎಂದು ಹೇಳಿದ್ದಾರೆ.

Bhagya Lakshmi Serial: ಭಾಗ್ಯ ಲಕ್ಷ್ಮೀ ಧಾರಾವಾಹಿಗೆ ಹೊಸ ಪಾತ್ರ ಎಂಟ್ರಿ: ಹೀರೋ ಅಥವಾ ವಿಲನ್..?