ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kapil Sharma: ಗುರುತೇ ಸಿಗದಷ್ಟು ಸ್ಲಿಮ್ ಆದ ಕಪಿಲ್ ಶರ್ಮಾ! ಕಾಮಿಡಿ ಸೂಪರ್ ಸ್ಟಾರ್‌ ಆಗಿದ್ದಾದ್ರೂ ಏನು?

Kapil Sharma: ಕಾಮಿಡಿ ಶೋ ಮೂಲಕ ಜನ ಮನ ಗೆದ್ದ ಕಪಿಲ್ ಶರ್ಮಾ‌ ಇದೀಗ ಸಖತ್ ಫಿಟ್ ಆ್ಯಂಡ್ ಫೈನ್ ಆಗಿ ಕಾಣಿಸಿದ್ದಾರೆ. ಕೆಲ ತಿಂಗಳ ಹಿಂದೆ ಫಿಟ್ನೆಸ್ ಅನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸಂದರ್ಶನವೊಂದರಲ್ಲಿ‌ ಹೇಳಿಕೊಂಡಿದ್ದರು. ಆದರೆ ಗುರುತೇ ಸಿಗದಷ್ಟು ಸಣ್ಣ ಆಗುತ್ತಾರೆ ಎಂದು ಬಹುಶ: ಯಾರು ಸಹ ಊಹಿಸಿರಲಿಲ್ಲ. ಫಿಟ್ನೆಸ್ ಅನ್ನು ಬಹಳಷ್ಟು ಸೀರಿಯಸ್ ಆಗಿ ಪರಿಗಣಿಸಿದ ಕಪಿಲ್ ಶರ್ಮಾ ಇದೀಗ ಅಟ್ರ್ಯಾಕ್ಟಿವ್ ಲುಕ್ ನಿಂದ ಗಮನ ಸೆಳೆದಿದ್ದಾರೆ.

ಕಾಮಿಡಿ ಸೂಪರ್ ಸ್ಟಾರ್‌ ಕಪಿಲ್ ಶರ್ಮಾಗೆ ಇದೇನಾಯ್ತು?

Kapil Sharma

Profile Pushpa Kumari Apr 10, 2025 2:17 PM

ನವದೆಹಲಿ: ಬಾಲಿವುಡ್‌ನ ಕಾಮಿಡಿ ಸ್ಟಾರ್ ಕಪಿಲ್ ಶರ್ಮಾ (Kapil Sharma) ಅವರ ಹಾಸ್ಯ ಎಂದರೆ ಬಹುತೇಕರಿಗೆ ಇಷ್ಟ. ಕಾಮಿಡಿ ಸೆನ್ಸ್, ಸ್ಟೋರಿ ವೇ ಎಲ್ಲವನ್ನು ಬಹಳ ಹಾಸ್ಯಭರಿತವಾಗಿ ನೀಡುವ ಕಪಿಲ್ ಶರ್ಮಾ ಶೋ ಕೂಡ ಕಿರುತೆರೆಯ ಹಿಟ್‌ ಶೋ ಆಗಿದೆ. ಸದಾ ಕಾಮಿಡಿ ಶೋ ಹಾಗೂ ಇತರ ಸಂದರ್ಶನದಲ್ಲಿ‌ ಬ್ಯುಸಿ ಇರುವ ಕಪಿಲ್ ಶರ್ಮಾ‌ ಇತ್ತೀಚಿನ ಕೆಲ ತಿಂಗಳಲ್ಲಿ ಕಣ್ಮರೆಯಾಗಿದ್ದರು. ಆದರೆ ಇದೀಗ ಮತ್ತೆ ಕಪಿಲ್ ಶರ್ಮಾ ಅವರು ಫಿಟ್ನೆಸ್ ವಿಚಾರದಲ್ಲಿ ಸಖತ್ ಸುದ್ದಿ ಆಗಿದ್ದಾರೆ.  ಇದು ನಿಜಕ್ಕೂ ಕಪಿಲ್ ಶರ್ಮಾನಾ ಎಂಬ ಅನುಮಾನ ನಿಮಗೂ ಕಾಡಬಹುದು ಅಷ್ಟರ ಮಟ್ಟಿಗೆ ಬದಲಾಗಿದ್ದ ಕೆಲ ಫೋಟೊ ಮತ್ತು ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ (Viral Video)ಆಗುತ್ತಿದೆ.

ಕಾಮಿಡಿ ಶೋ ಮೂಲಕ ಜನ ಮನ ಗೆದ್ದ ಕಪಿಲ್ ಶರ್ಮಾ‌ ಇದೀಗ ಸಖತ್ ಫಿಟ್ ಆ್ಯಂಡ್ ಫೈನ್ ಆಗಿ ಕಾಣಿಸಿದ್ದಾರೆ.  ಕೆಲ ತಿಂಗಳ ಹಿಂದೆ ಫಿಟ್ನೆಸ್ ಅನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸಂದರ್ಶನವೊಂದರಲ್ಲಿ‌ ಹೇಳಿಕೊಂಡಿದ್ದರು. ಆದರೆ ಗುರುತೇ ಸಿಗದಷ್ಟು ಸಣ್ಣ ಆಗುತ್ತಾರೆ ಎಂದು ಬಹುಶ: ಯಾರು ಸಹ ಊಹಿಸಿರಲಿಲ್ಲ. ಫಿಟ್ನೆಸ್ ಅನ್ನು ಬಹಳಷ್ಟು ಸೀರಿಯಸ್ ಆಗಿ ಪರಿಗಣಿಸಿದ ಕಪಿಲ್ ಶರ್ಮಾ ಇದೀಗ ಅಟ್ರ್ಯಾಕ್ಟಿವ್ ಲುಕ್ ನಿಂದ ಗಮನ ಸೆಳೆದಿದ್ದಾರೆ.

ಮುಂಬೈನ ವಿಮಾನ ನಿಲ್ದಾಣದಲ್ಲಿ ಗ್ರೇ ಕಲರ್ ಟೀ ಶರ್ಟ್ ನಲ್ಲಿ ಬಹಳ ಸ್ಮಾರ್ಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಕಪಿಲ್ ಶರ್ಮಾ ಈ ಹಿಂದಿಗಿಂತಲೂ ಹೆಚ್ಚು ತೆಳ್ಳಗೆ ಮತ್ತು ಎನರ್ಜಿಟಿಕ್ ಆಗಿ ಕಂಡಿದ್ದಾರೆ. ಇದು ಕಪಿಲ್ ಹೌದೇ? ಎಂದು ಅನೇಕ ಅಭಿಮಾನಿಗಳು ಈ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಕಪಿಲ್ ವಿಡಿಯೊ ಕಂಡು ಅಭಿಮಾನಿಗಳು ತಮಾಷೆಯ ಮತ್ತು ಮೆಚ್ಚುಗೆಯ ಕಮೆಂಟ್ ನೀಡಿದ್ದಾರೆ. ಇದು ಯಾವುದೊ ಹೊಸ ಶೋ ಅಥವಾ ಸಿನಿಮಾಕ್ಕಾಗಿ ಸಿದ್ಧತೆ ಇರಬೇಕು ಎಂದು ಕಪಿಲ್ ಮೇಕ್ ಓವರ್ ಲುಕ್ ಬಗ್ಗೆ ಅವರ ಅಭಿಮಾನಿ ಒಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಕಪಿಲ್ ಶರ್ಮಾ ಈ ಹಿಂದಿಗಿಂತಲೂ  ಬಹಳ ಆಕರ್ಷಕವಾಗಿ ಕಾಣುತ್ತಿದ್ದಾರೆ  20 ವರ್ಷದ ಯುವಕನನ್ನು ಕಂಡಂತೆ ಆಗುತ್ತದೆ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನು ಓದಿ: Kesari 2 Movie: ಕೇಸರಿ 2 ಚಿತ್ರದ ನೈಜ ಕಥೆಯೇನು? ಇದರ ಹಿಂದಿನ ರಿಯಲ್ ಹೀರೋ ಯಾರು?

ಹಿಂದಿನ ಒಂದು ಸಂದರ್ಶನದಲ್ಲಿ ಫಿಟ್ನೆಸ್ ಅನ್ನು ಗಂಭೀರವಾಗಿ ಪರಿಗಣಿಸುವುದಾಗಿ ಕಪಿಲ್ ಶರ್ಮಾ ಹೇಳಿದ್ದರು. ಆದರೆ ಕಪಿಲ್ ಶರ್ಮಾ ಅವರು ತಮ್ಮ ಫಿಟ್ನೆಸ್ ಬಗ್ಗೆ ಸ್ವತಃ ಯಾವುದೇ ಹೇಳಿಕೆಯನ್ನು ಇದುವರೆಗೆ ನೀಡಿಲ್ಲ. ಕಪಿಲ್ 'ಕಿಸ್ ಕಿಸ್‌ ಕೋ ಪ್ಯಾರ್ ಕರೂ 2' ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ಕೆಲವು ವೆಬ್ ಪ್ರಾಜೆಕ್ಟ್ ಮತ್ತು ಸಿನಿಮಾದಲ್ಲಿ ಅಭಿನಯಿಸಲಿದ್ದು ಅದಕ್ಕಾಗಿ ಫಿಟ್ನೆಸ್ ಕ್ರಮ ಅನುಸರಿಸಿದ್ದಾರೆ ಎಂಬ ಸುದ್ದಿ ಸಹ ಹರಿದಾಡುತ್ತಿದೆ. ಕಪಿಲ್ ಶರ್ಮಾ ತಂದೆ ಮರಣದ ಬಳಿಕ ಕೇವಲ 14 ವರ್ಷಕ್ಕೆ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ. ಬಾಲ್ಯದಲ್ಲಿ ಕಷ್ಟದ ಜೀವನ ಅನುಭವಿಸಿದ ಇವರು ಹೆಚ್ಚು ಶ್ರಮ ಪಟ್ಟಿದ್ದಾರೆ‌‌, ಆದರೆ ಒಂದು ಕಾಮಿಡಿ ಶೋ ಇವರ ಅದೃಷ್ಟ ಬದಲಾಯಿಸುವ ಮಟ್ಟಕ್ಕೆ ಬೆಳೆಸಿದೆ. ಒಂದು ಕಾಲದಲ್ಲಿ 500 ರೂಪಾಯಿಗೂ ಕಷ್ಟ ಪಡುತ್ತಿದ್ದ ಇವರು ಈಗ ಕೋಟ್ಯಾಂತರ ರೂಪಾಯಿಯ ಒಡೆಯರಾಗಿದ್ದಾರೆ ಎಂದರೆ ಇವರ ಜೀವನ ಬಹುತೇಕರಿಗೆ ಸ್ಫೂರ್ತಿ ಎಂದರೂ ತಪ್ಪಾಗದು.